ದರಿದ್ರ ಯಡಿಯೂರಪ್ಪ ಬಂದ ಮೇಲೆ ರಾಜ್ಯದಲ್ಲಿ ದರಿದ್ರ ತುಂಬಿಕೊಂಡು ಬಿಡ್ತು‌: ಸಿ ಎಂ ಬಿಎಸ್ ವೈ ವಿರುದ್ದ ಹರಿಹಾಯ್ದ ವಿಪಕ್ಷ ನಾಯಕ ಸಿದ್ದರಾಮಯ್ಯ

ಮದುಗಿರಿ:ಈ ದರಿದ್ರ ಯಡಿಯೂರಪ್ಪ ಬಂದ ಮೇಲೆ ರಾಜ್ಯದಲ್ಲಿ ದರಿದ್ರ ತುಂಬಿಕೊಂಡು ಬಿಡ್ತು. ಲಜ್ಜೆಗೆಟ್ಟ ಮುಖ್ಯಮಂತ್ರಿ, ಮಾನಗೆಟ್ಟ ಸರ್ಕಾರವನ್ನ ಎಲ್ಲಿಯೂ ನೋಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ.

ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮಪಂಚಾಯ್ತಿ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೊರೊನಾಗೆ 4400 ಕೋಟಿ ಖರ್ಚು ಮಾಡಿದ್ದಾರೆ….ಅದರಲ್ಲಿ 2500 ಕೋಟಿ ನುಂಗಿದ್ದಾರೆ.ಎಲ್ಲರಿಗೂ 5000 ಪರಿಹಾರ ಕೊಡ್ತಿವಿ ಅಂದ್ರು ಒಬ್ಬರಿಗು ಕೊಡಲಿಲ್ಲ. ಒಂದು ವೆಂಟಿಲೇಟರ್ ನಾಲ್ಕು ಲಕ್ಷ ಇದ್ರೆ ಅತಿ ಹೆಚ್ಚು ಹಣಕ್ಕೆ ಖರಿದಿ ಮಾಡಿದ್ದು ಒಟ್ಟು 18 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ..ಇದರಲ್ಲಿ ಇನ್ನೆಷ್ಟು ಲಂಚ ಹೊಡೆದಿರಬಹುದು.ಬಿಡಿಎ ನಲ್ಲಿ ಎಷ್ಟು ಲಂಚ ಹೊಡೆದಿದ್ದಿರಾ ಅಂತಾ ಕೇಳಿದೆ…

ಏನೇ ಕೇಳಿದ್ರು ಎಲ್ಲದಕ್ಕೂ ದುಡ್ಡಿಲ್ಲ ಕೊರೊನಾ…ಕೊರೊನಾ…ಕೊರೊನಾ ಅಂತಾರೆ… ಯಾಕಪ್ಪ ಎಲ್ಲದಕ್ಕೂ ದುಡ್ಡಿಲ್ಲ ಅಂತಿಯಾ. ಎಲ್ಲಾ ಯೋಜನೆಗಳನ್ನ ನಿಲ್ಲಿಸುತ್ತಿದ್ದಾರೆ ಎಲ್ಲವನ್ನ ನಿಲ್ಲಿಸುವುದಾದ್ರೆ ನೀವ್ಯಾಕಿದಿರಿ. ತೊಲಗಿ ನಾವು ಬತ್ತಿವಿ ಇದನ್ನೆಲ್ಲ ಸರಿ ಮಾಡ್ತಿವಿ ಅಂದೆ…ಆದ್ರೆ ಇವರನ್ನ ತೊಲಗಿಸೊ ಶಕ್ತಿ ನಿಮ್ಮ ಕೈಯಲ್ಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ.ನಮ್ಮ ಕಾಲದಲ್ಲಿ ಟಜರಿ ತುಂಬಿ ತುಳುಕುತ್ತಿತ್ತು…ಈ ದರಿದ್ರ ಯಡಿಯೂರಪ್ಪ ಬಂದ ಮೇಲೆ ರಾಜ್ಯದಲ್ಲಿ ದರಿದ್ರ ತುಂಬಿಕೊಂಡು ಬಿಡ್ತು‌.

ಯಡಿಯೂರಪ್ಪ ಇಂದು ಎರಡನೇ ಭಾರಿ ಹಿಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಯಾಗಿದ್ದಾರೆ.‌‌‌ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲಾಗದೆ ರಾಜಿನಾಮೆ ಕೊಟ್ಟರು. ಆದರೆ ಅಷ್ಟಕ್ಕೆ ಸುಮ್ಮನಾಗಲಿಲ್ಲ….ಅಡಬಿಟ್ಟಿದ್ದು ದುಡ್ಡು ಇತ್ತಲ್ಲ…ಒಬ್ಬೊಬ್ಬ ಶಾಸಕನಿಗೆ 3೦ ಕೋಟಿ ಕೊಟ್ಟು ಮುಖ್ಯಮಂತ್ರಿ ಯಾಗಿದ್ದಾರೆ… ಮಿಸ್ಟರ್ ಯಡಿಯೂರಪ್ಪ. ಇಂತಹ ಲಜ್ಜೆಗೆಟ್ಟ ಮುಖ್ಯಮಂತ್ರಿಯಿಂದ ಬಡವರನ್ನ ಅಭಿವೃದ್ಧಿ ಮಾಡಲು ಸಾದ್ಯವೆ. 40 ವರ್ಷ ಗಳ ಕಾಲ ನಾನು ಸರ್ಕಾರದಲ್ಲಿದ್ದಿನಿ ಯಡಿಯೂರಪ್ಪನಂತಹ ಲಜ್ಜೆಗೆಟ್ಟ ಸರ್ಕಾರ, ಮಾನಗೆಟ್ಟ ಸರ್ಕಾರ, ನಾನು ಎಲ್ಲಿಯೂ ನೋಡಿರಲಿಲ್ಲ. ನಿಂತೊಗಿರೊ ಬಸ್ಸಿನ ಮೇಲೆ ಕೂತ್ಕೊಂಡು ಡ್ರೈವಿಂಗ್ ಮಾಡಿದಂಗೆ ಡಕೋಟ ಎಕ್ಸ್ ಪ್ರೆಸ್ ಸ್ಟೇರಿಂಗ್ ಇಡ್ಕೊಂಡು ಮಕ್ಕಳ ತರ ಆಡ್ತಾವ್ನೆ.

ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆಜಿ ಅಕ್ಕಿ ಕೊಟ್ಟಿದ್ದೆ. ನಮ್ಮಪ್ಪನ ಮನೆಯಿಂದ ಏನೂ ತಂದುಕೊಟ್ಟಿಲ್ಲ ನಾನು ನಿಮ್ಮ ಹಣದಲ್ಲಿ ನಿಮಗೆ ಕೊಟ್ಟಿದ್ದೆ….ಯಡಿಯೂರಪ್ಪ ಈಗ 5 k g ಕೊಡ್ತಿದ್ದಾನೆ. ಏನ್ ಅವರಪ್ಪನ ಮನೆಯಿಂದ ತಂದು ಕೊಡ್ತಿದ್ದಾನಾ.ಅವರ ಪ್ರನಾಳಿಕೆ ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಬ್ಯಾಂಕ್ ಸೊಸೈಟಿ ಒಂದು ಲಕ್ಷ ಸಾಲ ಮನ್ನಾ ಮಾಡ್ತಿವಿ ಅಂದ್ರು. ಕೊರೊನಾ ಬಂದ್ರು ಮಾಡ್ಲಿಲ್ಲ…2010- 11 ರಲ್ಲಿ ಬರಗಾಲ ಇದೆ ಸಾಲ ಮನ್ನಾ ಮಾಡಿ ಅಂತಾ ಉಗ್ರಪ್ಪ ಕೇಳಿದ್ರೆ ಪ್ರಿಂಟ್ ಮಶಿನ್ ಇಲ್ಲಾ ಎಂದ ಯಡಿಯೂರಪ್ಪ.ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ರು. ನಾನು ಮುಖ್ಯಮಂತ್ರಿಯಾಗಿದ್ದಾಗ 22 ಲಕ್ಷದ ಜನರಿಗೆ 50 ಸಾವಿರ ಸಾಲ ಮನ್ನಾ ಮಾಡಿದ್ದೆನೆ.ಯಡಿಯೂರಪ್ಪನಿಗೆ ಏನೂ ರೋಗ ಬಂದಿದೆ…ಒಂದು ಕ್ಷಣನೂ ಇವರು ಅಧಿಕಾರದಲ್ಲಿ ಇರಬಾರದು ಎಂದರು.

ವಿಜಯೇಂದ್ರನ ಆಫಿಸ್ ನಲ್ಲಿ ಹೊಟೇಲ್ ನಂತೆ ಟ್ರಾನ್ಸ್‌ಫರ್ ಗೆ ದರ ಹಾಕಿದ್ದಾರೆ.

ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೊಳ್ತಿದ್ದ….ಮಗ ಆರ್ ಟಿ ಜಿ ಎಸ್ ಮಾಡಿಸ್ಕೊಂಡವ್ನೆ.ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೊಳ್ತಿದ್ದ….ಮಗ ಆರ್ ಟಿ ಜಿ ಎಸ್ ಮಾಡಿಸ್ಕೊಂಡವ್ನೆ. ವಿಜಯೇಂದ್ರನ ಆಫಿಸ್ ನಲ್ಲಿ ಹೋಟೆಲ್ ನಲ್ಲಿ ದರ ಹಾಕಿದಂತೆ….ಒಂದೊಂದು ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಇಂತಿಷ್ಟು ಎಂದು ಬೋರ್ಡ್ ಹಾಕಿದ್ದಾರೆ . ಎಲ್ಲರೂ ಲಂಚ ಕೊಟ್ಟು ಬರಬೇಕು..ಲಂಚಕೊಟ್ಟಿಲ್ಲ ಅಂತಾ ಅಧಿಕಾರಿಗಳು ಅವರ ಎದೆ ಮುಟ್ಟಿ ನೋಡಿಕೊಂಡು ಹೇಳಲಿ.ಲಂಚಕೊಟ್ಟು ಬಂದ ಅಧಿಕಾರಿಗಳು ಹೆಂಗೆ ಜನರ ಕೆಲಸ ಮಾಡುತ್ತಾರೆ. ನನ್ನ ಅವದಿಯಲ್ಲಿ ಸಿದ್ದರಾಮಯ್ಯನಿಗೆ ದುಡ್ಡು‌ಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದಿದಿನಿ ಅಂತಾ ಒಬ್ಬ ಅಧಿಕಾರಿ ಹೇಳಿದ್ರೆ….ಅಂದೇ ರಾಜಕೀಯ ನಿವೃತ್ತಿ ಪಡೆಯುತ್ತೆನೆ…

ಬೆಲೆ ಏರಿಕೆ ವಿರುದ್ದ ಸಿದ್ದು ಗುದ್ದು.

ನರೇಂದ್ರ ಮೋದಿ…ಅಚ್ಚೇದಿನ್ ಆಯೇಗಾ…ನಾ ಖಾವೂಂಗಾ…ನಾ ಖಾನೇ ದೂಂಗ. ಮನಮೊಹನ್ ಸಿಂಗ್ ಅವದಿಯಲ್ಲಿ ಒಂದು ಗ್ಯಾಸ್ ಸಿಲಿಂಡರ್ 350 ಇದ್ದ ಬೆಲೆ 9೦೦ ರೂಪಾಯಿ ಆಗಿದೆ. ಇದೇನಾ ಅಚ್ಚೆ ದಿನ್‌ .ಪೆಟ್ರೋಲ್ ಬೆಲೆ 50 ರೂ ಇತ್ತು ಇಂದು ನೂರು ರೂ ಆಗಿದೆ…. ಪೆಟ್ರೋಲ್ ಬೆಲೆ ಹೆಚ್ಚಾದಾಗ ಎಲ್ಲಾ ಬೆಲೆಯೂ ಹೆಚ್ಚಾಗುತ್ತದೆ. ಇದರ ಜೊತೆ ನಾವು ಕೊಟ್ಟ ಅಕ್ಕಿಯನ್ನ ಕಡಿಮೆ ಮಾಡಿದ್ದಾರೆ. ಜಿಡಿಪಿ ಕುಸಿದಿದೆ, ನಿರುದ್ಯೋಗ ಸಮಸ್ಯೆ ಇದೆ….ಪುಲ್ವಾಮ, ಕಾಮನ್ ಸಿವಿಲ್ ಕೊರ್ಟ್, ಎನ್ ಆರ್ ಸಿ ತರ್ತನಿ ಅಂತಾ ಜನರ ಭಾವನೆಗಳನ್ನು ಕೆರಳಿಸೊದು‌ ಮಾಡ್ತಾರೆ. ಯಾರಿಗೆ ಫ್ಯಾಸಿಸ್ಟ್ ಮನೋಬಾವ ಇದೆ ಅವರು ಭಾವಾನಾತ್ಮಕ ವಿಚಾರ ಚರ್ಚೆ ಮಾಡ್ತಾರೆ. ಇವರು ಬಡತನದ ಬಗ್ಗೆ ಚರ್ಚಿಸೊದೆ ಇಲ್ಲಾ..ಮನ್ ಕಿ ಬಾತ್ ನಲ್ಲಿ ಬಡತನ, ನಿರುದ್ಯೋಗ, ಜಿಡಿಪಿ ಬಗ್ಗೆ ಮಾತಾಡಿದ್ದಾರಾ‌‌.ಜನರಿಗೆ ಬೇಕಾಗಿರೊದು ಅದು ಅದರ ಬಗ್ಗೆ ಇವರು ಮಾತಾಡೊದೆ ಇಲ್ಲಾ. ಬಡವರು ಮದ್ಯಮ ವರ್ಗ ಉದ್ದಿಪನ ಆಗಬೇಕೆ ಹೊರತು ನಾವು ಅಧಿಕಾರಕ್ಕೆ ಬರೊದಲ್ಲ.

Leave a Reply

Your email address will not be published. Required fields are marked *

error: Content is protected !!