ಗುಬ್ಬಿ.ಹಲವು ಅನುಮಾನಗಳ ಸುತ್ತ ಹರಗಲದೇವಿ ಗುಡ್ಡ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣ..!!

ಗುಬ್ಬಿ ತಾಲೂಕು ಕಡಬ ಹೋಬಳಿ ಹರಗಲ ದೇವಿ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಭಾನುವಾರ ತಮಿಳುನಾಡು ಮೂಲದ ಶ್ರೀಗಂಧ ಕಳ್ಳರು ಮರ ಕಡಿಯುವ ವೇಳೆ ಗುಬ್ಬಿ ವಲಯ ಅರಣ್ಯಾಧಿಕಾರಿಗಳು ದಾಳಿ ಮಾಡಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸತಿರುವು ಪಡೆದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.

ಗುಬ್ಬಿ ವಲಯ ಅರಣ್ಯಾಧಿಕಾರಿ ಬಿ.ಹೆಚ್.ದುಗ್ಗಪ್ಪ ಅವರು ಶ್ರೀಗಂಧ ಕಳ್ಳರ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಶ್ರೀಗಂಧ ಕಳ್ಳರ ಬಳಿ ನಾಡ ಬಂದೂಕು ಇತ್ತು ಅವರು ನಮ್ಮ ಸಿಬ್ಬಂದಿಗಳ ಮೇಲೆ ನಾಡ ಬಂದೂಕಿನಿಂದ ಗುಂಡಿನ ದಾಳಿಗೆ ಮುಂದಾದರು ಈ ಸಂಧರ್ಭದಲ್ಲಿ ನಾನು ನನ್ನ ಬಳಿಇದ್ದ ಇಲಾಖೆಯ DBBL ಬಂದೂಕಿನಿಂದ ಗುಂಡಿನ ಪ್ರತಿದಾಳಿ ನಡೆಸಿದೆ ಎಂದು ಪತ್ರಕರ್ತರಿಗೆ ಫೋನ್ ನಲ್ಲಿ ಹೇಳಿಕೆ ನೀಡಿದ್ದಾರೆ.
ಆದರೆ ದುಗ್ಗಪ್ಪ ಅವರು ಗುಬ್ಬಿ ಠಾಣೆಗೆ ನೀಡಿರುವ ದೂರಿನಲ್ಲಿ ಎಲ್ಲೂ ಕೂಡ ಶ್ರೀಗಂಧ ಕಳ್ಳರ ಬಳಿ ಇದ್ದ ನಾಡ ಬಂದೂಕಿನ ಬಗ್ಗೆ ಉಲ್ಲೇಖವಿಲ್ಲ, FIR ನಲ್ಲಿಯೂ ದಾಖಲಾಗಿಲ್ಲ.

ಹರಗಲದೇವಿ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದ ಒಟ್ಟಾರೆ ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.
ಆರೋಪಿಗಳ ಬಳಿ ಇದ್ದ ನಾಡ ಬಂದೂಕು ಎಲ್ಲಿದೆ..?
ಅಥವಾ ಬಂದೂಕು ಇತ್ತೆ ಇಲ್ಲವೇ ಬಗ್ಗೆ ಜವಾಬ್ದಾರಿಯುತ ಹೇಳಿಕೆ ನೀಡಬೇಕಾದ ವಲಯ ಅರಣ್ಯಾಧಿಕಾರಿಗಳ ದ್ವಂದ್ವ ಹೇಳೆಕೆಗೆ ಮೇಲಾಧಿಕಾರಿಗಳು ಉತ್ತರಿಸಬೇಕಿದೆ.
ಒಟ್ಟಾರೆ ಸಾರ್ವಜನಿಕರಲ್ಲಿ ಮೂಡಿದ ಪ್ರಶ್ನೆ ದುಗ್ಗಪ್ಪ ಅವರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ಹೀರೋಯಿಸಂ ತೋರಲು ಆರೋಪಿಗಳ ಮೇಲೆ ಮನಬಂದಂತೆ ಥಳಿಸಿದ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಕ್ರಮ ಜರಗಿಸುವರೇ..?

error: Content is protected !!