ಗುಬ್ಬಿ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಸೌಜನ್ಯವಿಲ್ಲದ ದುರ್ನಡತೆಯ ಪೊಲೀಸ್ ಪೇದೆ ಶಂಕರೇಗೌಡ.

ಗುಬ್ಬಿ :- ತಾಲ್ಲೂಕಿನ ಗುಬ್ಬಿ ಪೊಲೀಸ್ ಠಾಣೆ ಸಿಬ್ಬಂದಿ ಶಂಕರಗೌಡ ಎಂಬ ಪೇದೆ ಸರ್ಕಾರ ಲಾಕ್ ಡೌನ್ ಮಾಡಿರುವ ಉದ್ದೇಶವನ್ನಿಟ್ಟುಕೊಂಡು ಕೆಲವು ಸಾರ್ವಜನಿಕರು ಆಸ್ಪತ್ರೆಗಳಿಗೆ ಹಾಗೂ ಕೆಲವು ರೈತರು ಮನೆಯಿಂದ ತೋಟಗಳಿಗೆ ಸಂಚರಿಸುವುದನ್ನು ನೋಡಿಕೊಂಡು ಅವರನ್ನು ಅಡ್ಡಗಟ್ಟಿ ಅವರಿಗೆ ಲಾಕ್ ಡೌನ್ ಸಮಯವನ್ನು ಮೀರಿ ರಸ್ತೆಯಲ್ಲಿ ಸಂಚರಿಸುತ್ತಿದ್ದಿರ ಎಂಬ ಕುಂಟು ನೆಪವೊಡ್ಡಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಕೆಲವು ಸಾರ್ವಜನಿಕರಲ್ಲಿ ಆರೋಪಗಳು ಕೇಳಿಬರುತ್ತದೆ..

ಕೆಲವು ರೈತರು ತಮ್ಮ ಸಂಬಂಧಿಗಳು ಅಣ್ಣ-ತಮ್ಮ ಅಪ್ಪ-ಅಮ್ಮ ಹಾಗೂ ಸಹೋದರರು ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರನ್ನು ನೋಡಿಕೊಂಡು ಅವರಿಗೆ ಬೇಕಾದ ಸಮವಸ್ತ್ರವನ್ನು ಇತ್ಯಾದಿ ವಿವರಗಳ ಬಗ್ಗೆ ತಿಳಿದುಕೊಂಡು ಬರಲು ಹೋಗುತ್ತಿರುವ ನಮಗೆ ಆಸ್ಪತ್ರೆಯ ಚೀಟಿಯನ್ನು ತೆಗೆದುಕೊಂಡು ಬನ್ನಿ ಎಂದು ಕೇಳುತ್ತಾರೆ ನಮ್ಮ ಸಂಬಂಧಿಕರು ನಮ್ಮ ಸಹೋದರರು ಆಸ್ಪತ್ರೆಯಲ್ಲಿರುವಾಗ ನಾವು ಚೀಟಿಯನ್ನು ಹೇಗೆ ತೆಗೆದುಕೊಂಡು ಬರಲು ಸಾಧ್ಯ ಎಂದು ಕೆಲವು ಸಾರ್ವಜನಿಕರಲ್ಲಿ ಮಾತುಗಳು ಕೇಳಿಬರುತ್ತಿವೆ.

ಗುಬ್ಬಿ ಪೊಲೀಸ್ ಠಾಣೆ ಸಿಬ್ಬಂದಿ ಶಂಕರೇಗೌಡ ಎಂಬ ವ್ಯಕ್ತಿ ಕೆಲವು ರೈತರು ಗಳನ್ನು ತಡೆದು ನಿಲ್ಲಿಸಿ ನೂರಾರು ಪ್ರಶ್ನೆ ಕೇಳುತ್ತಾರೆ.
ವಾಹನದ ಹತ್ತಿರ ವಾಹನದ ಕೀ ತೆಗೆದುಕೊಂಡು ಹೋಗುತ್ತಾರೆ .
ನಾವೇನಾದರೂ ಪ್ರಶ್ನಿಸಿದರೆ ನಮ್ಮಗಳ ವಿರುದ್ಧ ನೂರಾರು ಕೇಸ್ ಗಳನ್ನು ದಾಖಲಿಸುತ್ತೇವೆ ಎಂದು ಬೆದರಿಸುತ್ತಾರೆ ಎಂದು ದೂರುಗಳಿವೆ.

ನಮ್ಮಂತ ಬಡರೈತರು ಗಳನ್ನು ಗುರುತಿಸುತ್ತಾರೆ . ಸರ್ಕಾರವೇ ಆಸ್ಪತ್ರೆಗೆ ಹೋಗುವುದಕ್ಕೆ ಅವಕಾಶ ಕೊಟ್ಟಿದ್ದರು ಶಂಕರೇಗೌಡ ಎಂಬ ಪೊಲೀಸ್ ಇಲಾಖೆ ಸಿಬ್ಬಂದಿ ಆಸ್ಪತ್ರೆ ಹೋಗುವಂತಹ ಕೆಲವು ಸಾರ್ವಜನಿಕರನ್ನು ಅಡ್ಡಗಟ್ಟಿ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ತೊಂದರೆಗಳನ್ನು ನೀಡುತ್ತಾರೆ.

ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಕಟ್ಟಿ-ನಿಟ್ಟಿನ ಕ್ರಮ ಕೈಗೊಳ್ಳಬೇಕು.
ಆಸ್ಪತ್ರೆಗೆ ಸಂಚರಿಸುವಂತ ರೋಗಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೆಲವು ಸಾರ್ವಜನಿಕರು ಹಳ್ಳಿಗಳಲ್ಲಿ ಟೀಕೆ-ಟಿಪ್ಪಣಿಗಳು ಹರಿದಾಡುತ್ತಿವೆ.

ಸೌಜನ್ಯ ವಿಲ್ಲದೆ ಪೊಲೀಸ್ ಪೇದೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಮಾನವೀಯತೆ ಉಳ್ಳ ಸಾಕಷ್ಟು ಸಿಬ್ಬಂದಿ ಗಳು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಕೆಲವು ಸಮಯದಲ್ಲಿ ಸ್ಥಳೀಯ ಸಮಸ್ಯೆ ರೈತರ ಸಮಸ್ಯೆ ಅರಿತು ಸಾರ್ವಜನಿಕ ರಿಗೆ ಸಹಾಯ ಮಾಡುವ ಮನೋಭಾವ ವಿರುವ ಸಿಬ್ಬಂದಿ ಗಳ ನಡುವೆ ಇಂತಹ ಸೌಜನ್ಯ ವಿಲ್ಲದ ಸಿಬ್ಬಂದಿ ಗಳಿಂದ ಇಲಾಖೆ ಗೌರವಕ್ಕೆ ಧಕ್ಕೆಯಾಗುವುದು ಮಾತ್ರ ಸತ್ಯ.

error: Content is protected !!