ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಮರೆಯಾದ ತುಮಕೂರಿನ ಪ್ರತಿಭೆ: ಶಂಕರ್ ರಾವ್ ಇನ್ನಿಲ್ಲ

ಪಾಪಾ ಪಾಂಡು’ ಸೇರಿ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಶಂಕರ್ ರಾವ್ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಇಂದು (ಅಕ್ಟೋಬರ್ 18 )ರ ಬೆಳಿಗ್ಗೆ 6.30 ರ ಸುಮಾರಿಗೆ ನಿಧನ ಹೊಂದಿದ್ದಾರೆ. ಶಂಕರ್ ರಾವ್ ನಿಧನಕ್ಕೆ ಹಲವು ಧಾರಾವಾಹಿ ನಟ-ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪಾಪಾ ಪಾಂಡುಧಾರಾವಾಹಿಯಲ್ಲಿ ಬಾಸ್ ಪಾತ್ರ ನಿರ್ವಹಿಸಿದ್ದ ಶಂಕರ್ ರಾವ್, ರಮೇಶ್ ಅರವಿಂದ್ ನಿರ್ದೇಶನದ ’ಬಿಸಿ-ಬಿಸಿಸಿನಿಮಾದ ಪಕ್ಕದ ಮನೆಯ ಅಂಕಲ್ ಪಾತ್ರದಿಂದಲೂ ಸಾಕಷ್ಟು ಖ್ಯಾತಿ ಗಳಿಸಿದ್ದರು. ’ಪರ್ವ’, ’ಸಿಲ್ಲಿ-ಲಲ್ಲಿಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ.

ತುಮಕೂರಿನಲ್ಲಿ ಹುಟ್ಟಿ ಬೆಳೆದ ಶಂಕರ್ ರಾವ್ ಎಳವೆಯಿಂದಲೇ ಸಿನಿಮಾ ಪ್ರೇಮಿ. ಶಾಲಾ ದಿನಗಳಲ್ಲಿ ನಟನೆಯ ಬಗ್ಗೆ ಅಭಿರುಚಿ ಬೆಳೆಸಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಣ್ಣ ವಯಸ್ಸಿಗೆ ತಂದೆ ಕಳೆದುಕೊಂಡ ಶಂಕರ್ ರಾವ್ ಮನೆಯ ಜವಾಬ್ದಾರಿ ನಿಭಾಯಿಸುವ ಜೊತೆಗೆ ನಟನೆಯ ಹವ್ಯಾಸವನ್ನೂ ಮುಂದುವರೆಸಿದರು. ೧೯೫೬ರಲ್ಲಿ ಬೆಂಗಳೂರಿಗೆ ಬಂದ ಶಂಕರ್ ರಾವ್, ’ಗೆಳೆಯರ ಬಳಗತಂಡ ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ’ನಟರಂಗತಂಡದಲ್ಲಿಯೂ ಸಕ್ರಿಯರಾಗಿದ್ದರು. ಇವರ ಅಭಿನಯ ಚತುರತೆ ಗಮನಿಸಿ ನಿರ್ಮಾಪಕರೊಬ್ಬರು ’ಯಾರ ಸಾಕ್ಷಿಸಿನಿಮಾದಲ್ಲಿ ಅವಕಾಶ ನೀಡಿದರು. ಅಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಶಂಕರ್ ರಾವ್ ನಟಿಸಿದರು

error: Content is protected !!