ತುರುವೇಕೆರೆ: ಮಾಯಸಂದ್ರ ಗ್ರಾಮದಲ್ಲಿ ಶ್ರೀರಾಮಾಂಜನೇಯ ಯುವಕ ಸಂಘ ಹಾಗೂ ಬಜರಂಗದಳದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ, ಗ್ರಾಮದ ಶ್ರೀ ರಾಮಾಂಜನೇಯ ಯುವಕ ಸಂಘದ ವತಿಯಿಂದ, ವಿಶ್ವ ಹಿಂದೂ ಪರಿಷತ್ ತುಮಕೂರು ಜಿಲ್ಲಾ ಬಜರಂಗದಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಭಾರತೀಯ ರೆಡ್ ಕ್ರಾಸ್, ಜಿಲ್ಲಾ ಸರ್ಕಾರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು.

ಮಾಯಸಂದ್ರ ಗ್ರಾಮದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಬಜರಂಗದಳದ ತುಮಕೂರು ಜಿಲ್ಲಾ ಸಂಯೋಜಕರಾದ ಮಂಜು ಭಾರ್ಗವ್ ಸಹಾ ತಂಡದವರು ಹಾಗೂ ರಾಮಾಂಜನೇಯ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದ ಮುಖಂಡರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಚಾಲನೆ ನೀಡಿದರು.

ಈ ವೇಳೆ ಜಿಲ್ಲಾ ಸಂಯೋಜಕ ಮಂಜುಭಾರ್ಗವ್ ಮಾತನಾಡಿ ಜಿಲ್ಲೆಯಾದ್ಯಂತ ಕೋವಿಡ್ ನಿಂದ ಎಲ್ಲ ರಕ್ತನಿಧಿ ಕೇಂದ್ರ ಗಳಲ್ಲಿಯೂ ರಕ್ತದ ಅಭಾವ ಉಂಟಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಹೆರಿಗೆ, ಅಪಘಾತ, ಆತ್ಮಹತ್ಯೆ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು. ಕೊರೋನಾದಂತಹ ಸಮಯದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ ರೋಗಿಗಳಿಗೆ ಸಹಾಯವಾಗುತ್ತದೆ. ಇದರ ಹಿನ್ನೆಲೆಯಲ್ಲಿ ಬಜರಂಗದಳದ ವತಿಯಿಂದ ಈಗಾಗಲೇ ಜಿಲ್ಲಾಧ್ಯಂತ 5ರಿಂದ 6 ಶಿಬಿರಗಳನ್ನು ಮಾಡಿದ್ದು, ಸುಮಾರು 150 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ‌ ಕೋವಿಡ್ ಮುಗಿಯುವುದೊರಳಗೆ 5ರಿಂದ 10 ಶಿಬಿರಗಳನ್ನು ಮಾಡುವ ಸಂಕಲ್ಪವನ್ನು ಹೊಂದಿದ್ದೇವೆ. ಇಂದು ಮಾಯಸಂದ್ರ ಗ್ರಾಮದಲ್ಲಿ 15 ಮಂದಿ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದಾರೆ.ಸುಮಾರು 30 ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದೇವೆ. ತುರ್ತು ಸಮಯದಲ್ಲಿ ಅಗತ್ಯ ರೋಗಿಗಳಿಗೆ ನೀಡಲಿದ್ದೇವೆ ಎಂದರು. ಅಲ್ಲದೆ ರಕ್ತದಾನ ಮಾಡುವುದಕ್ಕೆ ಲಸಿಕೆ ಪಡೆದಂತಹ ಆರೋಗ್ಯವಂತ ವ್ಯಕ್ತಿಯು ಸಹಾ 14 ದಿನಗಳನ್ನು ಕಳೆದು ರಕ್ತದಾನ ಮಾಡಬಹುದು.

ಕೊರೋನಾ ಬಂದಂತಹ ವ್ಯಕ್ತಿಗಳು ಸಹ ಮೂರು ತಿಂಗಳು ಕಳೆದ ನಂತರ ರಕ್ತದಾನ ಮಾಡಬಹುದು. ಕೆಲವು ತಪ್ಪು ಮಾಹಿತಿಗಳಿಂದ ಯಾವುದೇ ಸಂಶಯ ಪಡದೇ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ. ಇಂತಹ ಸಂದರ್ಭದಲ್ಲಿ ಅನೇಕ ರೋಗಿಗಳಿಗೆ ನೆರವಾಗಲಿದೆ ಎಂದು ಮನವಿ ಮಾಡಿದರು. ನಮಗೆ ಸಹಕರಿಸುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸರ್ಕಾರಿ ರಕ್ತನಿಧಿ ಕೇಂದ್ರಕ್ಕೆ ಧನ್ಯವಾದವನ್ನು ತಿಳಿಸುವುದಾಗಿ ಹೇಳಿದರು ಹಾಗೂ ರಾಮಾಂಜನೇಯ ಯುವಕ ಸಂಘದ ಪದಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಕ್ಕೆ ಹೋಬಳಿಯ ಜನಪ್ರತಿನಿಧಿಗಳು ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಮಿಲನ್ ಪ್ರಮುಖ್ ಕಿರಣ್.ನಗರ ಸಹಾ ಸಂಯೋಜಕ ಶರತ್,ರಾಮಾಂಜನೇಯ‌ ಯುವಕ ಸಂಘದ ಅಧ್ಯಕ್ಷರಾದ ಅಂಗಡಿ‌ ಶಿವಶಂಕರ್. ಪದಾಧಿಕಾರಿಗಳಾದ‌ ಅರುಣ್,ಸುನೀಲ್,ಡಿ.ಸಿ.ಸಿ.ಬ್ಯಾಂಕ್ ಲೆಕ್ಕ ಪರಿಶೋಧಕ ಲಿಖಿತ್.ಸುನೀಲ್, ಮೋಹನ್, ಮತ್ತು ಕಾರ್ಯಕರ್ತರು.ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರಿಕ್ಷಕರಾದ ಶಂಕರೇಗೌಡ, ಯತೀರಾಜ್,ಸೇರಿದಂತೆ ಗ್ರಾಮದ ಮುಖಂಡರು ಮುಂತಾದವರಿದ್ದರು.

ವರದಿ- ಸಚಿನ್ ಮಾಯಸಂದ್ರ.

error: Content is protected !!