ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ರಾಸ್ ಟೇಲರ್ ನಿವೃತ್ತಿ ಘೋಷಣೆ

ಜಿಂಬಾಬ್ವೆ, ಡಿ 30: ನ್ಯೂಜಿಲೆಂಡ್ ಮಿಡಲ್‌ ಆರ್ಡರ್‌ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿಯುವ ಸಮಯದಲ್ಲಿ ಈ ಘೋಷಣೆ ಮಾಡಿದ್ದಾರೆ. ರಾಸ್‌ ಟೇಲರ್‌ ಈ ವಿಷಯವನ್ನು ಟ್ವೀಟರ್‌ ನಲ್ಲಿ ಬರದುಕೊಂಡಿದ್ದಾರೆ. ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ, ನನ್ನ 17 ವರ್ಷಗಳ ಅದ್ಭುತವಾದ ಇನ್ನಿಂಗ್ಸ್ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು, “ಎಂದು ಟೇಲರ್ ಹೇಳಿದ್ದಾರೆ.

ರಾಸ್‌ 2006ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ ಮೆಕ್ಲಿನ್‌ ಪಾರ್ಕ್‌ ನಡೆದ ಏಕ ದಿನ ಪಂದ್ಯದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದ್ದರು. ಈವರೆಗೆ ಅವರು 233 ODI ಗಳಲ್ಲಿ21 ಶತಕ ಒಳಗೊಂಡಂತೆ 8,576 ರನ್ ಗಳಿಸಿದ್ದಾರೆ. ಟೇಲರ್ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಅಂದರೆ 112 ಟೆಸ್ಟ್‌ಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ನಂತರ ಅವರು ನಿವೃತ್ತರಾಗಲಿದ್ದಾರೆ.

error: Content is protected !!