ಗುಬ್ಬಿ: ಕಲ್ಲೂರಿನ ಪರಿಶಿಷ್ಟರ ಜಾಗ ಒತ್ತುವರಿ. ಕಂಡರು ಕಾಣದ ಸ್ಥಿತಿಯಲ್ಲಿ ಕಂದಾಯ ಅಧಿಕಾರಿಗಳು.

ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ರುವ ಪರಿಶಿಷ್ಟ ರಿಗೆ ಮೀಸಲಾಗಿರುವ ಸರ್ಕಾರಿ ಜಮೀನು ಕೆರೆಗೆ ಹೊಂದಿಕೊಡಂತ್ತಿದ್ದು ಈ ಜಾಗವನ್ನು ಸರ್ಕಾರವು ಸ.ನಂ.342.ಆಗಿದ್ದು ವಿಸ್ತೀರ್ಣ 0.20 ಗುಂಟೆ ಜಮೀನು ಕಲ್ಲೂರು ವಿ.ಪಿ.ಗೆ ಆಕ್ವೈರ್ ಮಾಡಿ ಆದೇಶ ಮಾಡಿದ್ದು ಈ ಜಾಗವನ್ನು ಪರಿಶಿಷ್ಟ ಸಮುದಾಯ ದವರು ಸ್ಮಾಶನ ಮಾಡಿಕೊಳ್ಳಲು ಮೀಸಲಾಗಿಟ್ಟಿದ್ದರು.ಹಾಗಾಗಿ ಈ ಜಾಗದಲ್ಲಿ ಯಾವ ಕಟ್ಟಡವನ್ನು ನಿರ್ಮಾಣ ಮಾಡದೆ ಖಾಲಿ ಬಿಟ್ಟ ಪರಿಣಾಮ ಇಂದು ಈ ಜಾಗದಲ್ಲಿ ಕೆರೆ ಸಮೀಪವಿರುವ ತೋಟಗಳ ಮಾಲೀಕರು ಕಾಲಕ್ರಮೇಣ ಈ ಪರಿಶಿಷ್ಟರ ಸ್ವತ್ತನ್ನು ಒತ್ತುವರಿ ಮಾಡಿಕೊಂಡು ಕೇವಲ 0.5 ಗುಂಟೆಯಷ್ಟು ಜಾಗವನ್ನು ಮಾತ್ರ ಬಿಟ್ಟ ದ್ದಾರೆ ಎಂಬುದು ಸ್ಥಳೀಯ ಸಾರ್ವಜನಿಕರ ಆರೋಪವಾಗಿದೆ.

ಜಾಗವನ್ನು ತೆರವುಗೊಳಿಸಿ ಎಂದು ಮನವಿ ಸಲ್ಲಿಸಿದರು ಕ್ರಮವಹಿಸದ ಅಧಿಕಾರಿಗಳು. ಈ ಪರಿಶಿಷ್ಟ ರ ಜಾಗ ಒತ್ತು ವರಿಯಾಗಿದ್ದು ಹಲವು ಬಾರಿ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಕೇವಲ ನೆಪಮಾತ್ರಕ್ಕೆ ತೆರವು ಮಾಡುವ ಬರವಸೆ ನೀಡುವ ಅಧಿಕಾರಿಗಳು ಇತ್ತಕಡೆ ಗಮನಹರಿಸುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.ಸಮಸ್ಯೆ ಬಗೆಹರಿಯದಿದ್ದರೆ ತಾಲೂಕು ಕಛೇರಿ ಮುಂದೆ ಮತ್ತು ಜಿಲ್ಲಾಧಿಕಾರಿ ಗಳ ಕಛೇರಿಯ ಮುಂಭಾಗ ಸಮುದಾಯದ ಮುಖಂಡರು ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಪರಿಶಿಷ್ಟರ ಜಾಗ ತೆರವು ಮಾಡಲು ಕ್ರಮವಹಿಸಲಾಗುವುದು.ತಹಶೀಲ್ದಾರ್. ಕಲ್ಲೂರು ಗ್ರಾಮದ ಸ.ನಂ.342 ಜಾಗವು ಒತ್ತುವರಿ ವಿಚಾರವಾಗಿ ಗುಬ್ಬಿ ತಹಶೀಲ್ದಾರ್ ರವರಿಗೆ ಕರ್ನಾಟಕ ರಾಜ್ಯ ಕೃಷಿ ರೈತಬಂಧು ವೇಧಿಕೆಯ ಪಧಾಧಿಕಾರಿಗಳು ಭೇಟಿಯಾಗಿ ಒತ್ತು ವರಿಮಾಡಿರುವ ಜಾಗವನ್ನು ಗುರುತಿಸಿ ಬೆಳೆದಿರುವ ಅಡಿಕೆ ಮತ್ತು ಇನ್ನೀತರೆ ಮರಗಳನ್ನು ತೆರವು ಮಾಡಿಸಿ ಜಾಗವನ್ನು ಬಿಡಿಸಿ ಸಮುದಾಯದ ಮುಖಂಡರಿಗೆ ಹಸ್ತಾಂತರ ಮಾಡುವಂತೆ ಮನವಿ ಮಾಡಿದ್ದು ಅದಕ್ಕೆ ಸ್ಪಂದನೆ ನೀಡಿದ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ಶೀಘ್ರವಾಗಿ ಯಾರೆ ವ್ಯಕ್ತಿ ಗಳು ಜಾಗವನ್ನು ಒತ್ತು ವರಿ ಮಾಡಿದರು ಜಾಗವನ್ನು ಬಿಡಿಸಿ ಕೊಡಲು ಕ್ರಮವಹಿಸಲಾಗುವುದು ಎಂದು ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!