“ಮಾಯಸಂದ್ರ ಜೈನ ಸಮುದಾಯದವರಿಂದ” ಕೋವಿಡ್ ಸೆಂಟರ್ ಸ್ಥಾಪಿಸಲು “ರಾಜಮಾತೆ ಸಮುದಾಯ” ಭವನ ಬಳಸಿಕೊಳ್ಳಲು ಶಾಸಕರಿಗೆ ಮನವಿ.

ತುರುವೇಕೆರೆ: ತಾಲೂಕಿನ ಶೆಟ್ಟಿಗೊಂಡನಹಳ್ಳಿ, ಮಾಯಸಂದ್ರ, ಮಾಚೇನಹಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಮಸಾಲಾ ಜಯರಾಮ್ ರವರು ತಮ್ಮ ಸ್ವಂತ ಖರ್ಚಿನಿಂದ ಲಕ್ಷಾಂತರ ರೂಗಳ ಮೌಲ್ಯದ ಜೀವರಕ್ಷಕ ಔಷಧಿಗಳನ್ನು ನೀಡಿದರು.

ಮಾಯಸಂದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ
ಡಾ.ಸುಪ್ರಿಯಾ ರವರಿಗೆ ಜೀವರಕ್ಷಕ ಔಷಧಿಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ತಾಲೂಕಿನ ಹಾಗೂ ಮಾಯಸಂದ್ರ ಹೋಬಳಿ ಜನತೆಯಲ್ಲಿ ಕೈಮುಗಿದು ಕೇಳಿಕೊಳ್ಳುವೆ, ಕೊರೋನದಂತಹ ಲಕ್ಷಣಗಳು ಕಾಣಿಸಿಕೊಂಡರೆ ಹೆದರದೆ ತಪಾಸಣೆ ನಡೆಸಿ ಸೋಂಕು ತಗುಲಿದ್ದರೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರೋನಾ ಮುಕ್ತರಾಗಿರಿ ಎಂದು ಜನತೆಗೆ ಮನವಿ ಮಾಡಿದರು.

ಸೋಂಕು ಪತ್ತೆ ಯಾಗುತ್ತಿದ್ದಂತೆ ಯಾರು ಸಹಾ ಹೋಂ ಕ್ವಾರಂಟೈನ್ ಆಗದೆ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯಿರಿ. ಚಿಕಿತ್ಸೆಗೆ ಅಗತ್ಯವಾದ ಆಕ್ಸಿಜನ್, ಜೀವರಕ್ಷಕ ಔಷಧಿ ಮಾತ್ರೆಗಳು, ವೆಂಟಿಲೇಟರ್, ಎಲ್ಲ ರೀತಿಯ ಸೌಲಭ್ಯಗಳು ಒದಗಿಸಲಾಗುವುದು. ಉದಾಸೀನ ಮಾಡಬೇಡಿ. ಹೋಂ ಕ್ವಾರಂಟೈನ್ ಇದ್ದರೆ ಮನೆಯ ಎಲ್ಲಾ ಸದಸ್ಯರಿಗೂ ಸೋಂಕು ಹರಡುತ್ತದೆ, ಮನೆಯಲ್ಲಿದ್ದ ಎಷ್ಟು ಸೋಂಕಿತರಿಗೆ ಉಸಿರಾಟದ ಪ್ರಮಾಣ 60-50 ಬಂದಾಗ ಆಸ್ಪತ್ರೆಗೆ ಬಂದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಉಸಿರಾಟದ ಪ್ರಮಾಣ 80- 90ರ ಆಸುಪಾಸಿನಲ್ಲೆ ಆಸ್ಪತ್ರೆಗೆ ಸೇರಿದರೆ ರೋಗಿಗಳಿಗೆ ಆಕ್ಸಿಜನ್ ನೀಡಿ ಬದುಕಿಸಬಹುದು. ನನ್ನ ಕ್ಷೇತ್ರದಲ್ಲಿ ಸಾವುನೋವುಗಳು ಎಂದರೆ ಮನಸ್ಸಿಗೆ ನೋವಾಗುವುದು. ಜನತೆಯ ಆರೋಗ್ಯ ದೃಷ್ಟಿಯಿಂದ ನಾನು ವೈಯಕ್ತಿಕವಾಗಿ ಯಾವುದೇ ಸಹಾಯ ಮಾಡಲು ಸಿದ್ದನಾಗಿದ್ದೇನೆ ಎಂದರು. ಅಲ್ಲದೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜೀವರಕ್ಷಕ ಔಷಧಿಗಳ ಪ್ರಮಾಣ ಕಡಿಮೆ ಇದ್ದರೆ ನನಗೆ ತಿಳುಹಿಸಿ ಇನ್ನೂ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ಸಂತ ಹಣದಿಂದಲೇ ನೀಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ಮಾಯಸಂದ್ರ ಗ್ರಾಮದ ಮುಖಂಡರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು ಹಾಗೂ ಗ್ರಾಮದ ಜೈನ ಸಮುದಾಯದ ಮುಖಂಡರು ಸ್ವಯಂ ಪ್ರೇರಿತರಾಗಿ ಬಂದು ಹೋಬಳಿಯಲ್ಲಿ ಕೋವಿಡ್ ಸೆಂಟರ್ ಸ್ಥಾಪಿಸುವುದಾದರೆ ತಮ್ಮ ಸಮುದಾಯದ ರಾಜೀ ಮಾತೆ ಸಮುದಾಯ ಭವನವನ್ನು ನೀಡುತ್ತೇವೆ ಎಂದು ತಿಳಿಸಿದರು. ಶಾಸಕರು ಸಂತೋಷದಿಂದ ಮುಂದಿನ ಅವುಗಳಲ್ಲಿ ಕೋವಿಡ್ ಪರಿಸ್ಥಿತಿ ಗಮನಿಸಿ ನಿರ್ಧಾರ ಕೈಗೊಳ್ಳಲಾಗುವುದು ಶೀಘ್ರದಲ್ಲೇ ವೈದ್ಯರನ್ನು ನೇಮಿಸಲಾಗುವುದು ಎಂದು ಜೈನ ಸಮುದಾಯದವರ ಮನವಿಯನ್ನು ಶ್ಲಾಘಿಸಿದರು ಅವರ‌ ತೀರ್ಮಾನಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಕೊರೋನಾ ಮೂರನೇ ಅಲೆಗೆ ಸರ್ಕಾರವು ಈಗಾಗಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕ್ರಮ ಕೈಗೊಳ್ಳಲಾಗಿದೆ.ಪೋಷಕರು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.ಹೆದರಬೇಡಿ ಮುಂಜಾಗ್ರತಾ ಕ್ರಮ ಅನುಸರಿಸಿ,ಸೋಂಕು ತಗುಲಿದರೇ ಸಕಾಲದಲ್ಲೇ ಚಿಕಿತ್ಸೆ ಪಡೆಯಿರಿ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಕೋರನಾ ಲಸಿಕೆ ಪಡೆದುಕೊಂಡು ಸುರಕ್ಷಿತವಾಗಿರಿ. ಲಸಿಕೆ ನೀಡಿ ಅನುಕೂಲ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಲಸಿಕೆ ಯಿಂದಾಗಿ ಸಾವು-ನೋವುಗಳ ಸಂಖ್ಯೆ ಕಡಿಮೆಯಾಗಿದೆ. ಮೊಟ್ಟಮೊದಲ ಬಾರಿಗೆ ವೈದ್ಯರಿಗೆ, ದಾದಿಯರಿಗೆ ,ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಿದ್ದು, ನಮ್ಮಗಳ ಆರೋಗ್ಯ ಹಾರೈಕೆ ಮಾಡಲೆಂದು ನೀಡಲಾಗಿತ್ತು. ಅದರಿಂದ ವೈದ್ಯರು ಸುರಕ್ಷಿತವಾಗಿ ನಮೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ತಾಲೂಕಿನ ಪರವಾಗಿ ಚಿರೃಣಿಯಾಗಿದ್ದೇವೆ ಎಂದರು.ಆಶಾ ಕಾರ್ಯಕರ್ತೆಯರ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲಾಗುವುದು, ತಾಲೂಕಿನಲ್ಲಿ ವೈದ್ಯರ ಹಾಗೂ ನರ್ಸ್, ಡಿ ಗ್ರೂಪ್ ನೌಕರರ ಕೊರತೆಯಿದ್ದು ಸಂಬಂಧಪಟ್ಟ ವಿದ್ಯಾಭ್ಯಾಸ ಮಾಡಿರುವವರು ತಾಲೂಕಿನಲ್ಲಿದ್ದರೆ ಆಸಕ್ತಿಯಾಗಿ ಕರ್ತವ್ಯಕ್ಕೆ ಸೇರಿರಿ ನಿಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಬೋರೇಗೌಡ. ಮಾಯಸಂದ್ರ ಆರೋಗ್ಯ ಇಲಾಖೆ ಸಿಬ್ಬಂದಿಗಳು. ಗ್ರಾ.ಪಂ. ಅಧ್ಯಕ್ಷರಾದ ಮಂಗಳ ಗೌರಮ್ಮ ಮುಖಂಡರಾದ ವಿ.ಬಿ.ಸುರೇಶ್. ಕಾಳಂಜಿಹಳ್ಳಿ ಸೋಮಶೇಖರ್. ನಾಗಲಾಪುರ ಮಂಜಣ್ಣ. ಮಾಯಸಂದ್ರ ಗ್ರಾಮದ ಜನಪ್ರತಿನಿಧಿಗಳು. ಜೈನ ಸಮುದಾಯದ ಮುಖಂಡರಾದ ಅನಂತ್ ಕುಮಾರ್. ಮದನ್ ಜೈನ್. ಪ್ರಭು ಜೈನ್. ಸುನಿಲ್ ಕುಮಾರ್. ಮಹಾವೀರ್ ಬಾಬು. ಪ್ರದೀಪ್ ಪುರೋಹಿತ್ (ಅರ್ಚಕರು) ವಿಪುಲ್ ಜೈನ್, ಪಂಚಾಕ್ಷರಯ್ಯ ಹಾಗೂ ಅಬೂಬಕ್ಕರ್, ಮುತಾವಲಿ. ಕರುನಾಡ ಸೇವಕರ ರಹಮತ್ ಉಲ್ಲಾ, ನಾರಾಯಣಸ್ವಾಮಿ. ಗ್ರಾ.ಪಂ. ಸದಸ್ಯರಾದ ಜೆ.ಸಿ.ಬಿ ಮಂಜುನಾಥ್. ಪೂರ್ಣಿಮ ವಾಸು. ಖಾದಿರ್ ಪಾಷಾ. ಶಿವರಾಜು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ವರದಿ- ಸಚಿನ್ ಮಾಯಸಂದ್ರ.

error: Content is protected !!