ಸಚಿವ ರಮೇಶ್ ಜಾರಕಿಹೋಳಿಯ ರಾಸಲೀಲೆ ಸಿಡಿ ರಿಲೀಸ್.

ರಾಜ್ಯ ರಾಜಕಾರಣದಲ್ಲಿ ಮತ್ತೆ ಹಸಿಬಿಸಿ ವಿಡಿಯೋ ಸಿಡಿ ರಿಲೀಸ್ ಆಗಿದ್ದು ಸಚಿವ ರಮೇಶ್ ಜಾರಕಿ ಹೋಳಿ ವಿರುದ್ದ ದೂರು ದಾಖಲಾಗಿದೆ.

ಉತ್ತರ ಕರ್ನಾಟಕದ ಪ್ರಭಾವಿ ಮಂತ್ರಿ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿ ಹೋಳಿ ಯುವತಿಯೊಂದಿಗೆ ನಡೆಸಿರುವ ರಾಸಲೀಲೆ ಇದೀಗ ಬಟಾಬಯಾಲಾಗಿದೆ.ನಾಗರೀಕ ಹಕ್ಕು ಹೋರಾಟ ಸಮೀತಿ ಅಧ್ಯಕ್ಷ ದಿನೇಶ್ ಕಲ್ಲಳ್ಳಿ ಈ ಸಿಡಿಯನ್ನ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಗೆ ದೂರು ನೀಡಿ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಉದ್ಯೋಗ ಕೇಳಿಕೊಂಡು ಬಂದ ಯುವತಿಯನ್ನ ಉದ್ಯೋಗ ನೀಡುವ ಭರವಸೆ ನೀಡಿ ಮಂಚಕ್ಕೆ ಕರೆದು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಪ್ರಭಾವಿ ಮಂತ್ರಿಯನ್ನ ವಿರೋದಿಸಲಾಗದ ಯುವತಿ ಗೌಫ್ಯವಾಗಿ ರಾಸಲೀಲೆಯನ್ನ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಬಳಿಕ ಯುವತಿ ದಿನೇಶ್ ಕಲ್ಲಳ್ಳಿಯನ್ನ ಸಂಪರ್ಕಿಸಿ ವಿಡಿಯೋವನ್ನ ನೀಡಿ ಸಚಿವ ರಮೇಶ್ ಜಾರಕಿಹೋಳಿ ಪ್ರಭಾವ ಶಾಲಿಯಾಗಿದ್ದು ನಮ್ಮ ಕುಟುಂಬ ಅವರನ್ನ ಎದುರಿಸಲು ಸಾಧ್ಯವಿಲ್ಲ. ಈಗಾಗಿ ನನ್ನ ನೆರವು ಕೊರಿಕೊಂಡು ಯುವತಿ ಬಂದಿದ್ದಳು, ನೀವೆ ಪೊಲೀಸರಿಗೆ ದೂರು ದಾಖಲಿಸಿ ಎಂದು ಸಿಡಿಯನ್ನ ನನಗೆ ನೀಡಿದ್ದಾರೆ ಎಂದು ದಿನೇಶ್ ಕಲ್ಲಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!