ಹೊಸ ವರ್ಷದ ಶುಭಾಶಯ ಕೋರಿದ ರಾಮನಾಥ್ ಕೋವಿಂದ್, ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್

ನವದೆಹಲಿ, ಡಿಸೆಂಬರ್ 31: 2021 ಇಂದು ಕೊನೆಗೊಳ್ಳುತ್ತಿದೆ. 2022 ಹೊಸ ವರ್ಷ ಪ್ರಾರಂಭವಾಗುತ್ತಿದೆ. ಕಳೆದು ಹೋದದನ್ನು ಮರೆತು ಹೊಸತು ಗುರಿ, ಬದುಕು, ಧ್ಯೇಯ ಉತ್ಸಾಹದೊಂದಿಗೆ ಮುಂದಿನ ಹೆಜ್ಜೆ ಇಡಲು ದೈಹಿಕವಾಗಿ, ಮಾನಸಿಕವಾಗಿ ಅಣಿಯಾಗುತ್ತಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾರತೀಯ ನಾಗರಿಕರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

“ಹೊಸ ವರ್ಷದ ಹೊಸ ಅರುಣೋದಯವು ನಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಭ್ರಾತೃತ್ವದ ಚೈತನ್ಯವನ್ನು ಪುನರುಜ್ಜೀವನಗೊಳಿಸಲಿ. ನಮ್ಮ ಸಮಾಜ ಮತ್ತು ದೇಶ ಪ್ರಗತಿ ಸಾಧಿಸುವ ಪ್ರಯತ್ನಿಸುವ ಬಗ್ಗೆ ಹೊಸ ವರ್ಷದಲ್ಲಿ ಸಂಕಲ್ಪ ಮಾಡೋಣ” ಎಂದು ಹೇಳಿದರು.

“ಹೊಸ ವರ್ಷದ 2022 ರ ಸಂತೋಷದಾಯಕ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ನಮ್ಮ ಎಲ್ಲಾ ದೇಶವಾಸಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ತಿಳಿಸುತ್ತೇನೆ. ಹೊಸ ವರ್ಷ, 2022, ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಉತ್ತಮ ಆರೋಗ್ಯ ಮತ್ತು ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ ಎಂದು ಕೋವಿಂದ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹೊಸ ವರ್ಷದ ಸಂದೇಶದಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಕೇಳಿಕೊಂಡಿದ್ದಾರೆ. ಸೋಂಕುಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಪರಿಗಣಿಸಿ ದಯವಿಟ್ಟು ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬೇಡಿ. ಮನೆಯಲ್ಲಿಯೇ ಇರಲು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಒತ್ತಾಯಿಸಿದರು. ಜನರು ಮತ್ತು ಸರ್ಕಾರ ಒಟ್ಟಾಗಿ ಹಿಂದಿನಂತೆ ಕೊರೊನಾವನ್ನು ಸೋಲಿಸೋಣ ಎಂದು ಹೇಳುತ್ತಾ ದೇಶದ ಜನರು ಸಂತೋಷದಿಂದ ಇರಲಿ ಎಂದು ಹಾರೈಸಿದರು

ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಅವರು, “ನಮ್ಮ ದೇಶ ಮತ್ತು ಇಡೀ ಜಗತ್ತು ಆದಷ್ಟು ಬೇಗ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ, ಇಡೀ ದೇಶವು ಅಭಿವೃದ್ಧಿ ಹೊಂದಲಿ, ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ಧಿಯಾಗಲಿ, ಎಲ್ಲರೂ ಆರೋಗ್ಯವಾಗಿರಲಿ ಮತ್ತು ಸಂತೋಷವಾಗಿರಲಿ ಎಂದು ಹೇಳಿದರು.

ಟ್ವಿಟರಿನಲ್ಲಿ ಪಿಎಂ ನರೇಂದ್ರ ಮೋದಿ, ಹೊಸ ವರ್ಷದ ಮೊದಲ ದಿನ, 2022 ಅನ್ನು ದೇಶದ ಅನ್ನದಾತರಿಗೆ ಸಮರ್ಪಿಸಲಾಗುವುದು. ಪಿಎಂ-ಕಿಸಾನ್‍ನ 10ನೇ ಕಂತನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 12ಕ್ಕೆ ಬಿಡುಗಡೆ ಮಾಡಲಾಗುವುದು. ಇದರ ಅಡಿಯಲ್ಲಿ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳು 20 ಸಾವಿರ ಕೋಟಿ ರೂ.ಗಳ ಮೊತ್ತವನ್ನು ವರ್ಗಾವಣೆ ಮಾಡುವ ಮೂಲಕ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದರು.

error: Content is protected !!