ಗುಬ್ಬಿ: ರೇಷ್ಮೆ ಸೀರೆ ತಯಾರಕರ ಮತ್ತು ಮಾರಾಟಗಾರರ ಮೇಲೆ ಸಿ.ಎಸ್.ಪುರ ಪೊಲೀಸ್ ಪೇದೆ ರಾಜು ದೊಡ್ಡಣ್ಣನವರ್ ದರ್ಪ.

ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮದ ರೇಷ್ಮೆ ಸೀರೆ ತಯಾರಿಕೆ ಘಟಕದ ಮೇಲೆ ಸಿ.ಎಸ್.ಪುರ ಪೊಲೀಸ್ ಠಾಣೆ ಪೇದೆ ರಾಜು ದೊಡ್ಡಣ್ಣನವರ್ ಎಂಬ ಪೇದೆ ಇಂದು ಏಕ ಏಕಿ ಗ್ರಾಮದ ಸೀರೆತಯಾರಿಕೆ ಘಟಕಗಳು ಮತ್ತು ರೇಷ್ಮೆ ಸೀರೆ ಮಳಿಗೆ ಮೇಲೆ ದಾಳಿ ನೆಡೆಸಿ ಸುಮಾರು 20 ಕ್ಕೂ ಹೆಚ್ಚು ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆದು ಗ್ರಾಮಸ್ಥರ ಆಕ್ರೋಶ ಕ್ಕೆ ಕಾರಣವಾದ ಘಟನೆ ನೆಡೆದಿದೆ.

ಇಂದು ಎಂದಿನಂತೆ ಕಲ್ಲೂರು ಗ್ರಾಮಕ್ಕೆ ಗಸ್ತು ಬಂದ ಈ ಸಿಬ್ಬಂದಿ ಗ್ರಾಮದ ಮುಖ್ಯ ರಸ್ತೆ ಗಳಲ್ಲಿ ಇರುವ ರೇಷ್ಮೆ ಸೀರೆ ಅಂಗಡಿ ಹಾಗೂ ತಯಾರಿಕೆ ಘಟಕಗಳ ಮೇಲೆ ಯಾವುದೇ ಅನುಮತಿ ಪಡೆಯದೆ ಅಂಗಡಿಗೆ ವ್ಯಾಪಾರ ಮಾಡುವ ನೆಪದಲ್ಲಿ ಬಂದು ದಾಳಿ ನೆಡೆಸಿ ಅಂಗಡಿಯಲ್ಲಿ ಇದ್ದ ಸೀರೆ ಹಾಗೂ ಮಾಲಿಕರು ಮೊಬೈಲ್ ಪೋನ್ ಪಡೆದು ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಅಂಗಡಿ ಮಾಲೀಕರು ಪೊಲೀಸ್ ಪೇದೆಯ ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಇದು ಸಲದೆಂಬತೆ ರೇಷ್ಮೆ ಸೀರೆಗಳ ತಯಾರು ಮಾಡುವ ಸ್ಥಳಗಳಿಗೆ ಹೋಗಿ ತಯಾರಿಸುವುದನ್ನು ನಿಲ್ಲಿಸುವಂತೆ ಹಾಗೂ ನಿಮ್ಮ ಅಂಗಡಿಗಳನ್ನು ಬಂದ್ ಮಾಡುವಂತೆ ಇಲ್ಲಾವಾದರೆ ನಿಮ್ಮ ಗಳ ಮೇಲೆ ಕೇಸುದಾಖಲಿಸುದಾಗಿ ನಮಗೆ ದರ್ಪದಿಂದ ದುರ್ವತನೆ ತೋರಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ಥಳೀಯರು ಸರ್ಕಾರ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರು ಸಹ ಗ್ರಾಮದ ಹೆಚ್ಚು ವಾಹಿವಾಟಿನ ಜವಳಿ ಅಂಗಡಗಳು ಪ್ರತಿನಿತ್ಯ ವು ನೂರಾರು ಸಂಖ್ಯೆಯಲ್ಲಿ ಮುಂಭಾಗ ಅಂಗಡಿ ಮುಚ್ಚಿ ಹಿಂಭಾಗದ ದ್ವಾರ ಮೂಲಕ ಹೊರ ಜಿಲ್ಲೆ ಗಳಿಂದ ಹಾಗೂ ಇತರೆ ನಗರ ಪ್ರದೇಶಗಳಿಂದ ಬರುವ ಗ್ರಾಹಕರೊಂದಿಗೆ ಲಕ್ಷಾಂತರ ವಹಿವಾಟು ನೆಡೆಸುತ್ತಾರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಂಗಡಿ ಮಾಲೀಕರು ವ್ಯಾಪಾರ ನೆಡೆಸುತ್ತಿದ್ದರು ಸಹ ಯಾರು ಅವರನ್ನು ಪ್ರಶ್ನೆ ಮಾಡುವುದಿಲ್ಲ ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ಜನರು ಯಾವುದೇ ಸಾಮಾಜಿಕ ಅಂತರ ವಿಲ್ಲದೆ ವ್ಯಾಪಾರ ಕ್ಕೆ ಮುಂದಾಗುತ್ತಿದ್ದಾರೆ ಅವರ ವಿರುದ್ಧ ಕ್ರಮ ವಹಿಸದ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಬಡಪಾಯಿ ನೇಕಾರರ ಮನೆಗಳಿಗೆ ದಾಳಿ ಮಾಡಿ ರೇಷ್ಮೆ ಸೀರೆ ತಯಾರುಮಾಡದಂತೆ ಹೆದರಿಸುವುದು ತಯಾರಾದ ಸೀರೆಗಳನ್ನು ಸೀಜ್ ಮಾಡುವುದು ಮಾಡುತ್ತಿರುವುದು ಸರಿಯಲ್ಲ ಕಾನೂನು ಎಲ್ಲರೂ ಸಹ ಒಂದೆ ಪ್ರತಿಯೊಬ್ಬ ರಿಗೆ ಸೂಕ್ತ ನಿದರ್ಶನ ನೀಡಬೇಕು ಅದನ್ನು ಬಿಟ್ಟು ದುರ್ವತನೆ ತೋರುವುದು ಸರಿಯಲ್ಲ ಸಾರ್ವಜನಿಕ ಸೇವೆ ಸಲ್ಲಿಸುವ ಅಧಿಕಾರಿಗಳು ಜನತೆಯೊಂದಿಗೆ ಉತ್ತಮ ಬಾಂದವ್ಯ ಹೊಂದಬೇಕು ಅದನ್ನು ಹೊರತುಪಡಿಸಿ ಯಾವುದೇ ಸೂಚನೆ ನೀಡದೆ ಏಕ ಏಕಿ ಮನೆಗಳು ಸಣ್ಣ ವ್ಯಾಪಾರ ಅಂಗಡಿಗಳ ಮೇಲೆ ದಾಳಿ ನೆಡೆಸುವುದು ಸೂಕ್ತ ವಲ್ಲ ಕೋವೀಡ್ ನಿಯದಂತೆ ಅಂಗಡಿಗಳನ್ನು ತೆರೆಯುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮವಹಿಸಬೇಕು ಇಲ್ಲಾವಾದರೆ ಯಾವುದೇ ಅಂಗಡಿಗಳ ತೆರೆಯದಂತೆ ಎಲ್ಲರಿಗೂ ತಿಳಿಸಬೇಕು ಎಂದರು.

ಇನ್ನೂ ಸಾರ್ವಜನಿಕರೊಂದಿಗೆ ದುರ್ನಡತೆ ತೋರುವ ಸಿಬ್ಬಂದಿ ಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಸೂಕ್ತ ಕ್ರಮ ವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್. ಸದಸ್ಯ ರಾದ ಸಿದ್ದರಾಜು.ಹಾಗೂ ಗ್ರಾಮಸ್ಥರು ಹಾಜರಿದ್ದರು.

ರೇಷ್ಮೆ ಸೀರೆ ತಯಾರಿಕಾ ಘಟಕದ ಮಾಲೀಕರೊಂದಿಗೆ ಪೇದೆ ವಾಗ್ವಾದ

Leave a Reply

Your email address will not be published. Required fields are marked *

error: Content is protected !!