ರಜನೀಕಾಂತ್ ಪ್ರತಿಷ್ಠಾನ;ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ತಮಿಳನಾಡು, ಡಿಸೆಂಬರ್ 28: ತಮಿಳನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದವಾಗುತ್ತಿರುವ ಯುವಕ ಮತ್ತು ಯುವತಿಯರಿಗೆ ರಜನೀಕಾಂತ್ ಪ್ರತಿಷ್ಠಾನ ಸಹಾಯಹಸ್ತ ಚಾಚಿದೆ

ಇದಕ್ಕಾಗಿ ಸೂಪರ್ -100 ಬ್ಯಾಚ್ ಹೆಸರಿನ ಪ್ರತ್ಯೇಕ ವಿಧಾನವನ್ನ ರೋಪಿಸುತ್ತಿದೆ. ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಪ್ರಜಾಸೇವೆಗೆ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ಡಿಸೆಂಬರ್ 12 ರಂದು ರಜನಿಕಾಂತ್ ತಮ್ಮ ಹುಟ್ಟುಹಬ್ಬದ ದಿನದಂದು ಈ ಶಿಕ್ಷಣ ಕ್ರಾಂತಿಯನ್ನ ಪ್ರಕಟಿಸಿದ್ದಾರೆ. ರಜನಿಕಾಂತ್ ಫೌಂಡೇಶನ್ ವತಿಯಿಂದ ರಾಜ್ಯದ ಯುವಕ ಯುವತಿಯರಿಗೆ ಸುವರ್ಣ ಅವಕಾಶ ಕಲ್ಪಿಸಿದ್ದಾರೆ.

100 ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಅವರಿಗೆ ಸ್ಪರ್ಧಾತ್ಮಕ ಪರಿಕ್ಷೆಗಳಿಗಾಗಿ ಬೇಕಾದ ಶಿಕ್ಷಣವನ್ನ ಕೊಡಿಸಲಿದ್ದಾರೆ. ಈ ಶಿಕ್ಷಣ ಸಂಪೂರ್ಣ ಉಚಿತ. ಪ್ರಸ್ತುತ ಸೂಪರ್-100 ಬ್ಯಾಚ್ ನ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ರಜನಿಕಾಂತ್ ಫೌಂಡೇಶನ್ ತಿಳಿಸಿದೆ.

error: Content is protected !!