ಗುಬ್ಬಿ(ಚೇಳೂರು):ಇಟ್ಟಿಗೆ ತಯಾರಿಗೆ ಅಕ್ರಮ ಮಣ್ಣು ಸಾಗಾಣಿಕೆ ಕಂಡು ಕಾಣದಂತಿದೆಯೇ ಕಂದಾಯ ಇಲಾಖೆ?

ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಕೋಣನಕಲ್ಲು ಗ್ರಾಮದಲ್ಲಿ ಇಟ್ಟಿಗೆ ತಯಾರಿಕೆಗೆ ಸ್ಥಳೀಯ ವ್ಯಕ್ತಿ ಗಳು ಹಿಡುವಳಿ ಜಮೀನಿನಲ್ಲಿ ಅಕ್ರಮ ವಾಗಿ ಮಣ್ಣು ಸಾಗಾಣಿಕೆ ಮಾಡುತ್ತೀರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಅನುಮತಿ ಪಡೆಯದೆ ಮಣ್ಣು ಸಾಗಾಣಿಕೆಗೆ ಮುಂದಾದ ಪ್ರಭಾವಿಗಳು: ಸರ್ಕಾರದ ಯಾವುದೇ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಕಾನೂನು ಬಾಹೀರವಾಗಿ ಕೃಷಿ ಭೂಮಿಯ ಮಣ್ಣನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದು ಇಟ್ಟಿಗೆ ತಯಾರಿಸಲು ಸ್ಥಳೀಯ ವ್ಯಕ್ತಿಗಳು ಯಂತ್ರಗಳ ಮೂಲಕ ಮಣ್ಣು ತೆಗೆದು ಸಾಗಿಸುತ್ತಿದ್ದಾರೆ. ಇವರ ಮಣ್ಣು ಸಾಗಾಣಿಕೆ ಇಂದ ರಸ್ತೆ ಗಳು ಹಾಳಾಗಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ರಸ್ತೆ ಸಂಪೂರ್ಣ ವಾಗಿ ಹದಗೆಟ್ಟಿದೆ. ಇದರ ಜೊತೆಗೆ ರಸ್ತೆ ರ ಧೂಳಿ ನಿಂದ ಜನತೆಯ ಆರೋಗ್ಯ ಹದಗೆಡುವ ಸ್ಥಿತಿ ತಲುಪಿದೆ ಎಂಬುದು ಸ್ಥಳೀಯರ ಆರೋಪ.

ಜಮೀನಿನಲ್ಲಿ ಸುಮಾರು 20 ಅಡಿಗಳಷ್ಟು ಗುಂಡಿ ತೆಗೆದ ವ್ಯಕ್ತಿಗಳು.ಯಾವುದೇ ಕೃಷಿ ಜಮೀನಿನಲ್ಲಿ ಕೃಷಿಗೆ ಸಂಬಂಧಿಸಿದಂತೆ ಸುಮಾರು 4ರಿಂದ 5 ಅಡಿಗಳಷ್ಟು ಗುಂಡಿ ತೆಗೆಯಲು ಅವಕಾಶವಿರುತ್ತದೆ ಆದರೆ ಈ ಕೃಷಿ ಜಮೀನಿನಲ್ಲಿ ಸುಮಾರು 20 ಅಡಿಗಳಷ್ಟು ಗುಂಡಿ ತೆಗೆದು ಯಾವುದೇ ಕೃಷಿ ಚಟುವಟಿಕೆ ಉಪಯೋಗವಾಗದ ರೀತಿಯಲ್ಲಿ ಕಂಡುಬರುತ್ತದೆ.

ಕಂಡರು ಕಾಣದ ರೀತಿಯ ವರ್ತನೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು. ಅಕ್ರಮ ವಾಗಿ ಮಣ್ಣು ಸಾಗಿಸುತ್ತಿರುವ ಬಗ್ಗೆ ಚೇಳೂರು ಹೋಬಳಿಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಣ್ಣು ಸಾಗಾಣಿಕೆ ವಿಚಾರ ಗಮನಕ್ಕೆ ತಂದರು ಸಹ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಹೋಗದೆ ಮೌನವಾಗಿ ರುವುದ ಗಮನಿಸಿದರೆ ಈ ಭಾಗದ ಕಂದಾಯ ನಿರೀಕ್ಷರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಇಂತಹ ಅಕ್ರಮ ಮಣ್ಣು ಸಾಗಾಣಿಕೆ ವ್ಯಕ್ತಿ ಗಳ ಜೋತೆ ಶಾಮೀಲಾಗಿದ್ದಾರ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಕ್ರಮ ವಹಿಸುವ ಭರವಸೆ ನೀಡಿದ ಗುಬ್ಬಿ ತಹಶೀಲ್ದಾರ್ ಅಕ್ರಮ ಮಣ್ಣು ಸಾಗಾಣಿಕೆ ವಿಚಾರವಾಗಿ ಸಂಬಂಧ ಪಟ್ಟ ಚೇಳೂರು ಹೋಬಳಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಥಳ ಪರೀಶೀಲನೆ ಮಾಡಿ ವರದಿ ನೀಡುವಂತೆ ತಿಳಿಸಿದ್ದು ಅದರಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜಮೀನಿನಲ್ಲಿ ಮಣ್ಣು ಸಾಗಿಸುವುದನ್ನು ನಿಲ್ಲಿಸಿ ಜಮೀನಿನ ಮಾಲೀಕರಿಗೆ ತಿಳುವಳಿಕೆ ನೀಡಿ ಮಣ್ಣು ಸಾಗಾಣಿಕೆ ಮುಂದುವರೆದರೆ ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದ್ದಾರೆ ಪುನಃ ಅಕ್ರಮ ವಾಗಿ ಮಣ್ಣು ಸಾಗಾಣಿಕೆ ಕಂಡುಬಂದರೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ ಯಾಗಿ ಕಾನೂನು ಬಾಹೀರವಾಗಿ ನಿಸರ್ಗದ ಒಡಲು ವಾಣಿಜ್ಯ ಉದ್ದೇಶ ಕ್ಕೆ ಬಳಸುವ ವ್ಯಕ್ತಿ ಗಳ ಮೇಲೆ ತಾಲೂಕು ಆಡಳಿತ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಕ್ರಮಕ್ಕೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!