ಮಹಿಳಾ ದಿನದ ವಿಶೇಷ ಬಜೆಟ್ ನಲ್ಲಿ ಮಹಿಳೆಯರಿಗೆ ಅನ್ಯಾಯ: ಅಂಗನವಾಡಿ ನೌಕರರಿಂದ ಪ್ರತಿಭಟನೆ.

ತುಮಕೂರು: 2021-22 ರ ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸದೇ ಕೇವಲ ಹೆಸರಿಗಷ್ಟೇ ಮಹಿಳಾ ದಿನಾಚರಣೆ ವಿಶೇಷ ಬಜೆಟ್ ಎಂದು ಮಂಡಿಸಿದ ರಾಜ್ಯ ಸರ್ಕಾರದ ವಿರುದ್ದ ಜಿಲ್ಲೆಯ ವಿವಿದೆಡೆ ಅಂಗನವಾಡಿ ನೌಕರ ಮಹಿಳೆಯರು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷೆ ಗೌರಮ್ಮ ಮಾತನಾಡಿ ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕರೋನಾ ಸಂಧರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಶರತ್ತಗಳಿಲ್ಲದೆ  ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸದ ಒತ್ತಡದಿಂದ 35 ಜನ , ಕರೋನಾ ಕೆಲಸ ಮಾಡುವಾಗ 28 ಜನರು ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ. ೧೭೩ ಜನರಿಗೆ ಕರೋನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದು ಕೊಂಡಿದ್ದಾರೆ. ರಾಜ್ಯದ ಹೈಕೋರ್ಟ್ ಕರೋನಾ ಸಂಧರ್ಭದಲ್ಲಿ ಮಕ್ಕಳಿಗೆ – ಮಹಿಳೆಯರ ಅಪೌಷ್ಠಿಕತೆಯನ್ನು ತಡೆಯಲು ಪೌಷ್ಠಿಕ ಆಹಾರ ಫಲಾನುಭವಿಗಳಿಗೆ ತರಲುಪಿಸುವುದನ್ನು ಖಾತ್ರಿ ಪಡಿಸಬೇಕೆಂದೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿತ್ತು. ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆಗಳಿಂದ ಸರ್ಕಾರದ ಘನತೆಯನ್ನು ಕಾಪಾಡಿದ್ದು ಇದೇ ಅಂಗನವಾಡಿ ನೌಕರರು ಎಂದರು.

ಹೆಸರಿಗೆ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ಬಜೆಟ್‌ನ್ನು ಮಂಡಿಸಿ, ಮಹಿಳಾ ವಿರೋಧೀ ನೀತಿ ಅನುಸರಿಸಿರುವುದನ್ನು ನಾವು ಖಂಡಿಸುತ್ತೇವೆ. ಮಾತ್ರವಲ್ಲದೇ ನಮ್ಮ ಇಲಾಖೆಯ ಶಿಫಾರಸ್ಸುಗಳನ್ನು ಬಜೆಟ್ ಅಂತಿಮ ಗೊಳಿಸುವಾಗ ಸೇರ್ಪಡೆ ಮಾಡಬೇಕೆಂದೂ ಒತ್ತಾಯಿಸುತ್ತೆವೆ ಜೊತೆಗೆ ಹೆಚ್ಚುವರಿ ಕೆಲಸಗಳನ್ನ ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ, ಸ್ತ್ರೀ ಶಕ್ತಿ, ಚುನಾವಣಾ ಮುಂತಾದ ಕೆಲಸಗಳ ಬಹಿಷ್ಕರಿಸುತ್ತಿದ್ದೆವೆ. ಮಾತ್ರವಲ್ಲದೆ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ಮಾಡುವುದಿಲ್ಲ ಎಂದರು.

ತಿಪಟೂರಿನಲ್ಲಿ ಪ್ರತಿಭಟನೆ ನಡಸಿದ ಅಂಗನವಾಡಿ ನೌಕರ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ದ ಅಸಮದಾನ ವ್ಯಕ್ತ ಪಡಿಸಿದ್ರು. ಶಿವಮ್ಮ ಮಾತನಾಡಿ ಕರೋನಾ ಸಾಂಕ್ರಾಮಿಕ ಭಯಂಕರತೆ ಇದ್ದಾಗಲೂ ಮಲೆನಾಡು, ಗುಡ್ಡಗಾಡು, ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಾಗ್ರಿಗಳನ್ನು ಮನೆಮನೆಗೆ ಹಂಚಿದ್ದು, ಕ್ವಾರಂಟೈನ್ ಆದ ಸ್ಥಳಗಳಿಗೆ ಮಾಸ್ಕ್, ಸ್ಯಾನಿಟೈಜರ್, ಮಾತ್ರೆಗಳು ಇಲ್ಲದಿದ್ದರೂ ತಮ್ಮ ಕೈಯಿಂದ ಎಲ್ಲವನ್ನು ಖರ್ಚು ಮಾಡಿ ಕೊಂಡು ಆಹಾರ ವಿತರಣೆ ಮಾಡಿದ್ದಾರೆ, ಕರೋನಾ ರೋಗಿಗಳನ್ನು ಸಂತೃಪ್ತಿಸಿದ್ದು ಮಾತ್ರವಲ್ಲದೇ ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಕೂಡಾ ಎದೆಗುಂದದೆ ಕೆಲಸ ಮಾಡಿದ್ದೆವೆ ಎಂದರು.

Leave a Reply

Your email address will not be published. Required fields are marked *

error: Content is protected !!