ಹತ್ತು ತಿಂಗಳು ಕಳೆದರೂ ಮುಗಿಯದ ಪೈಪ್ ಲೈನ್ ಕಾಮಗಾರಿ; ಬನಶಂಕರಿ 6ನೇ ಹಂತದ ವಜ್ರಹಳ್ಳಿ ಸುತ್ತಮುತ್ತ ನಿವಾಸಿಗಳಿಗೆ ಸಂಕಷ್ಟ

ಬೆಂಗಳೂರು: ಬಿಡಬ್ಲ್ಯುಎಸ್ ಎಸ್ ಬಿ(BWSSB) ಯ ಪೈಪ್ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಬನಶಂಕರಿ 6ನೇ ಹಂತದ ವಜ್ರಹಳ್ಳಿ 100 ಅಡಿ ಮುಖ್ಯ ರಸ್ತೆಯನ್ನು ಜನರ ಸಂಚಾರಕ್ಕೆ ಮುಚ್ಚಿ 10 ತಿಂಗಳುಗಳಿಗಿಂತಲೂ ಹೆಚ್ಚಾಗಿದೆ. ಎರಡೂ ಮಾರ್ಗಗಳಲ್ಲಿ ಸಂಚಾರ ಈಗ ಕೇವಲ ಅರ್ಧದಷ್ಟು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಮತ್ತು ಫುಟ್‌ಪಾತ್ ಅತಿಕ್ರಮಣದಿಂದ ಸುತ್ತಮುತ್ತಲ ನಿವಾಸಿಗಳಿಗೆ ರಸ್ತೆಯಲ್ಲಿ ಹೋಗುವುದೆಂದರೆ ತೀವ್ರ ಕಷ್ಟಕರವಾಗಿದೆ.

ತುರಹಳ್ಳಿ ಅರಣ್ಯದ ಮೂಲಕ ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆ ಸುಮಾರು 8 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಕನಕಪುರ ರಸ್ತೆಯ ಚೇಂಜ್‌ಮೇಕರ್ಸ್‌ ಸಂಸ್ಥೆಯ ಕಾರ್ಯದರ್ಶಿ ವಿ ಕೆ ಶ್ರೀವತ್ಸ ಮಾತನಾಡಿ, ಕಾವೇರಿ ನೀರು ಪೂರೈಕೆ 6ನೇ ಹಂತದ ಯೋಜನೆ ಕಳೆದ ಜನವರಿಯಲ್ಲಿ ಆರಂಭವಾಯಿತು. ಎರಡೂ ಬದಿಯ ದಟ್ಟಣೆಯು ರಸ್ತೆಯ ಅರ್ಧಭಾಗದಲ್ಲಿ ಒಮ್ಮುಖವಾಗುವುದರಿಂದ, ಇಲ್ಲಿಗೆ ಪ್ರಯಾಣಿಸಲು ಅತ್ಯಂತ ಕಷ್ಟಕರವಾಗಿದೆ. ಬೀದಿ ದೀಪಗಳೂ ಇಲ್ಲದಿರುವುದರಿಂದ ರಾತ್ರಿ ವೇಳೆ ಅಪಾಯಕಾರಿಯಾಗಿದೆ ಎಂದು ಹೇಳುತ್ತಾರೆ.

ಶೋಭಾ ಫಾರೆಸ್ಟ್ ವ್ಯೂ ಅಪಾರ್ಟ್ ಮೆಂಟ್ ನ ನಿವಾಸಿ ವಿಜಯನ್ ಗೋವಿಂದರಾಜನ್, ರಸ್ತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಡಿಯಲ್ಲಿ ಬರುತ್ತದೆ, ಇದು ಬಿಡಬ್ಲ್ಯುಎಸ್ಎಸ್ ಬಿ ತನ್ನ ಕೆಲಸವನ್ನು ಪೂರ್ಣಗೊಳಿಸಲು ಕಾಯುತ್ತಿದೆ. ಅತಿಯಾದ ನಿಧಾನಗತಿಯ ಕೆಲಸದಿಂದಾಗಿ, ರಸ್ತೆಯನ್ನು ಬಳಸುವ ಇತರ ವಾಹನಗಳ ಜೊತೆಗೆ ಭಾರೀ ಟ್ರಕ್‌ಗಳು, ಲಾರಿಗಳು, ಶಾಲಾ ಬಸ್‌ಗಳು ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ.

ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ 900 ಫ್ಲಾಟ್‌ಗಳಿವೆ. ವಾಜರಹಳ್ಳಿ ರಸ್ತೆಗೆ ಹೋಗುವ 200 ಮೀಟರ್ ರಾಷ್ಟ್ರಕೂಟ ರಸ್ತೆಯೂ ಹದಗೆಟ್ಟಿದೆ. ರಾಜಾಜಿನಗರದಿಂದ ಕನಕಪುರ ಕಡೆಗೆ ಹೋಗುವ ಜನರು ಕೂಡ ಈ ರಸ್ತೆಯನ್ನು ಬಳಸುತ್ತಾರೆ. ಇಲ್ಲಿ ಸಂಚಾರ ಅಪಾಯಕಾರಿಯಾಗಿದೆ ಎಂದು ಅಪಾರ್ಟ್ ಮೆಂಟ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಡಾ ಅಜಿತ್ ಹೇಳುತ್ತಾರೆ.

ಕಾವೇರಿ, ಬಿಡಬ್ಲ್ಯುಎಸ್ ಎಸ್ ಬಿ ಕಾರ್ಯಕಾರಿ ಎಂಜಿನಿಯರ್ ಆರ್ ಶ್ರೀನಿವಾಸ್, ಭಾರೀ ಮಳೆಯಿಂದಾಗಿ ಇಲ್ಲಿನ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದೆ. ಈ ಸಂಪೂರ್ಣ 100 ಅಡಿ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು, ಮಳೆಯಿಂದಾಗಿ ಸುಮಾರು ಒಂದು ತಿಂಗಳ ಕಾಲ ಇದು ಜಲಾವೃತವಾಗಿತ್ತು. ನಾವು ಮೊದಲು ಎಲ್ಲಾ ನೀರನ್ನು ತೆಗೆಯಬೇಕಾಗಿತ್ತು. ಡಿಸೆಂಬರ್ ಅಥವಾ ಜನವರಿ 2022 ರ ಹೊತ್ತಿಗೆ ರಸ್ತೆ ಜನತೆಗೆ ಲಭ್ಯವಾಗಲಿದೆ ಎನ್ನುತ್ತಾರೆ.

ವಾಜರಹಳ್ಳಿ 100 ಅಡಿ ರಸ್ತೆಯ ಪೈಪ್‌ಲೈನ್ ಕಾಮಗಾರಿ 5 ಕಿ.ಮೀ ವರೆಗೆ ಪೂರ್ಣಗೊಂಡಿದ್ದು, ಮಧ್ಯದಲ್ಲಿ ತೇಪೆಗಳಿದ್ದು, ಅಲ್ಲಿ ಡಾಂಬರೀಕರಣ ಮಾಡಬಹುದು ಎಂದು ಶ್ರೀನಿವಾಸ್ ಹೇಳುತ್ತಾರೆ. ತುರಹಳ್ಳಿ ಅರಣ್ಯದ ಮೂಲಕ ಒಂದು ಕಿಮೀ ರಸ್ತೆ ಹಾದು ಹೋಗಿದ್ದು, ಪೈಪ್‌ಲೈನ್‌ ಹಾಕಲು ಅರಣ್ಯ ಇಲಾಖೆಯಿಂದ ಇನ್ನೂ ಅನುಮತಿ ಪಡೆದಿಲ್ಲ ಎಂದರು.

error: Content is protected !!