ತೈವಾನ್‌ನಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲು

ತೈಪೆ, ಜನವರಿ 03: ಪೂರ್ವ ತೈವಾನ್‌ನಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ. ಭೂಕಂಪವು ಎಷ್ಟು ಪ್ರಬಲವಾಗಿತ್ತು ಅಂದರೆ ರಾಜಧಾನಿ ತೈಪೆಯವರೆಗಿನ ಜನ ಕಂಪನವನ್ನು ಅನುಭವಿಸಿದ್ದಾರೆ.

ತೈವಾನ್‌ನಲ್ಲಿ ಸೋಮವಾರ ಸಂಜೆ ಈ ಪ್ರಬಲ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 6.2 ಇತ್ತು. ದೇಶದ ಪೂರ್ವ ಭಾಗದಲ್ಲಿ ಕಂಪನದ ಅನುಭವವಾಗಿದೆ ಎಂದು ಕೇಂದ್ರ ಹವಾಮಾನ ಬ್ಯೂರೋ ತಿಳಿಸಿದೆ. ಪ್ರಬಲ ಭೂಕಂಪದ ಹೊಡೆತಕ್ಕೆ ರಾಜಧಾನಿ ತೈಪೆ ಜನ ಮನೆ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.

error: Content is protected !!