ಗುಬ್ಬಿ. ಬೃಹತ್ ಜೂಜಾಟದ ಅಡ್ಡೆಯ ಮೇಲೆ.ಪೊಲೀಸರ ದಾಳಿ.

ಗುಬ್ಬಿ ತಾಲ್ಲೂಕಿನ ಗಡಿ ಪ್ರದೇಶ ಮತ್ತು ತುರುವೇಕೆರೆ ತಾಲ್ಲೂಕಿನ ನೇರಲಕಟ್ಟೆ ಗೊಲ್ಲರ ಹಟ್ಟಿಯ ಬೋಚಿಹಳ್ಳಿ ಗ್ರಾಮದ ಬಳಿಯಿರುವ ಜುಂಜಪ್ಪ ಎಂಬುವರ ಜಮೀನಿನಲ್ಲಿ ಜುಜೂಅಡ್ಡೆಯ ತುಮಕೂರು ಹೆಚ್ಚು ಎಸ್ಪಿ ಉದೇಶ್ ಟಿ.ಜೆ ಇವರ ಮಾರ್ಗದರ್ಶನದಲ್ಲಿ ಇಂದು ಸಂಜೆ ಕುಣಿಗಲ್ ಉಪವಿಭಾಗದ ಡಿ ವೈ ಎಸ್ ಪಿ ಮತ್ತು ವೃತ್ತ ನಿರೀಕ್ಷರು ಮತ್ತು ಸಿಬ್ಬಂದಿ ಸಂಜೆ ದಾಳಿ ನೆಡೆಸಿ ಪಣಕ್ಕಿಟ್ಟಿದ್ದಂತಹ 4.72.840. ನಗದು ಹಣ 12 ಮೊಬೈಲ್.02 ಕಾರುಗಳು.1 ದ್ವಿಚಕ್ರ ವಾಹನ.ಮತ್ತು 11 ಜನ ಆರೋಪಿಗಳನ್ನು ವಶ ಪಡೆದಿರುತ್ತಾರೆ. ಉಳಿದ 5 ಜನ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು ಅಡ್ಡೆಯಲ್ಲಿ ಹೊರ ಜಿಲ್ಲೆಯವರ ದರ್ಬಾರು. ಇತ್ತೀಚೆಗೆ ಗುಬ್ಬಿ ತಾಲ್ಲೂಕಿನ ಗಡಿ ಭಾಗದಲ್ಲಿ ಮತ್ತು ತುರುವೇಕೆರೆ ಗಡಿ ಭಾಗದಲ್ಲಿ ಜೂಜು ನೆಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದರು ಸಹ ಸ್ಥಳೀಯ ಪೊಲೀಸರು ಕ್ರಮ ವಹಿಸುತ್ತಿಲ್ಲ ವೆಂಬ ಆರೋಪಗಳು ಸ್ಥಳೀಯ ಗ್ರಾಮದ ನಿವಾಸಿಗಳಿಂದ ಕೇಳಿ ಬರುತ್ತಿವೆ.ರಾತ್ರಿ ವೇಳೆಯಲ್ಲಿ ಕಾರುಗಳು ಬೈಕ್ ನಲ್ಲಿ ಬರುವ ಕೆಲ ಅಪರಿಚಿತ ವ್ಯಕ್ತಿ ಗಳು ಗಡಿ ಭಾಗದ ಅರಣ್ಯ ಪ್ರದೇಶವನ್ನು ಆಶ್ರಯಿಸಿಕೊಂಡು ಜೂಜಟಾಕ್ಕೆ ಮುಂದಾಗುತ್ತಾರೆ ಎಂಬುದು ನೇರಲಕಟ್ಟೆ. ಮಲ್ಲದೇವನಹಳ್ಳಿ.ಬಿಳಿನಂದಿ.ಹಾಗೂ ಇನ್ನಿತರ ಗ್ರಾಮಸ್ಥರ ಆರೋಪವಾಗಿದೆ. ಇನ್ನೂ ಜೂಜು ಅಡ್ಡೆಯ ಮೇಲೆ ಬಂಧಿತರಾಗಿರುವವರಲ್ಲಿ ಹಾಸನ.ಮತ್ತು ಮಂಡ್ಯ. ಜಿಲ್ಲೆ ಯವರೆ ಹೆಚ್ಚಾಗಿದ್ದು ಸ್ಥಳೀಯರ ಸಹಾಯವಿಲ್ಲದೆ ಬೇರೆ ಜಿಲ್ಲೆ ಯಿಂದ ಈ ಜಿಲ್ಲೆ ಗೆ ಬಂದು ಜೂಜಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಬಹಳ ಅಚ್ಚರಿಯ ಸಂಗತಿ.

ಸಿಬ್ಬಂದಿಗಳಿಗೆ ಕಾರ್ಯಕ್ಕೆ ತುಮಕೂರು ಎಸ್ಪಿ ಪ್ರಶಂಸೆ. ಜೂಜು ಅಡ್ಡೆಯ ಮೇಲೆ ದಾಳಿ ನೆಡೆಸಿದ ತುಮಕೂರು ಹೆಚ್ಚು ವರಿ ಪೊಲೀಸ್ ಅಧೀಕ್ಷಕ ರಾದ ಉದೇಶ್.ಟಿ.ಜೆ.ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ರಮೇಶ್. ವೃತ್ತ ನಿರೀಕ್ಷಕ ಗುರು ಪ್ರಸಾದ್ ಹಾಗೂ ಸಿಬ್ಬಂದಿಗಳನ್ನು ಎಸ್ಪಿ ಡಾ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!