ಪ್ರಧಾನಿ ಮೋದಿ ಬಳಸುವ ಕಾರು 12 ಕೋಟಿ ರೂ ಮೌಲ್ಯದ್ದು…..!

ನವದೆಹಲಿ, ಡಿ. 28 (ಯುಎನ್‌ ಐ)- ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುವ ವಸ್ತ್ರಗಳು, ಬಳಸುವ ವಸ್ತುಗಳ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ ಭೇಟಿ ವೇಳೆ ಮೋದಿ ಅವರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸಿದ್ದರು.

ಈ ಹಿಂದೆ ಅವರು ಧರಿಸಿದ್ದ ಮೇಬಾಶ್ ಸನ್ ಗ್ಲಾಸ್ ಕೂಡ ಸುದ್ದಿಯಾಗಿತ್ತು. ಈಗ ಹೊಸದಾಗಿ ಮೋದಿ ಬಳಸುತ್ತಿರುವ Mercedes-Benz Maybach ಎಸ್‌ 650 ಎಲ್ಲರ ಗಮನ ಸೆಳೆದಿದೆ. ಇತ್ತೀಚಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್ ದೆಹಲಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಹೈದರಾಬಾದ್ ಹೌಸ್‌ಗೆ ಆಗಮಿಸಿದ ಮೋದಿ ಅವರು ಮೊದಲು ಬಾರಿ ಈ ಕಾರಿನಲ್ಲಿ ಕಾಣಿಸಿ ಕೊಂಡರು. ಈ ನಡುವೆ ಮೋದಿ ಬೆಂಗಾವಲು ಪಡೆಯಲ್ಲಿ ಮತ್ತೊಮ್ಮೆ ಈ ವಾಹನ ಮತ್ತೆ ಕಾಣಿಸಿಕೊಂಡಿತ್ತು. ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಈ ಕಾರು ಸುಮಾರು 12 ಕೋಟಿ ರೂಗಳಿಗೆ ಹೆಚ್ಚು ಎಂದು ತಿಳಿದುಬಂದಿದೆ.

error: Content is protected !!