ಪಿಎಂ ಕಿಸಾನ್ ಸಮ್ಮಾನ್: 10ಕೋಟಿ ರೈತರಿಗೆ ಹಣ ಬಿಡುಗಡೆ: ಈಗಲೇ ಚೆಕ್ ಮಾಡಿಕೊಳ್ಳಿ.

ನವದೆಹಲಿ, ಜನವರಿ 1:  ದೇಶದ ಬೆನ್ನೆಲಬಾದ ಅನ್ನದಾತರಿಗೆ ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯೊಂದನ್ನು ನೀಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತನ್ನು ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಿದೆ. ಈ ಕಂತಿನಲ್ಲಿ ಸರ್ಕಾರ 10 ಕೋಟಿ ರೈತರಿಗೆ 20 ಸಾವಿರ ಕೋಟಿ ರೂ. ಹಣ ಬಿಡುಗಡೆಗೊಳಿಸಿದೆ. ಇದರೊಂದಿಗೆ ಪ್ರಧಾನಿ ಮೋದಿ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿಗೂ ಹೆಚ್ಚು ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಇದು 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ ನೀಡಲಿದೆ.

3 ಕಂತುಗಳಲ್ಲಿ ರೈತರಿಗೆ ಹಣ ಪಾವತಿ : 

3 ಕಂತುಗಳಲ್ಲಿ ರೈತರ ಖಾತೆಗೆ ವಾರ್ಷಿಕ 6,000 ರೂ. ಪ್ರತಿ 4 ತಿಂಗಳಿಗೊಮ್ಮೆ 2000 ರೂಪಾಯಿ ಕಂತು ಪಾವತಿಯಾಗುತ್ತದೆ. ಪಿಎಂ ಕಿಸಾನ್ ಪೋರ್ಟಲ್ ಪ್ರಕಾರ, ಯೋಜನೆಯ ಮೊದಲ ಕಂತು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ಬರುತ್ತದೆ. ಎರಡನೇ ಕಂತಿನ ಹಣ ಏಪ್ರಿಲ್ 1ರಿಂದ ಜುಲೈ 31ರೊಳಗೆ ರೈತರ ಖಾತೆಗೆ ಬರುತ್ತದೆ. ಮೂರನೇ ಕಂತಿನ ಹಣವನ್ನು ಆಗಸ್ಟ್ 1 ರಿಂದ ನವೆಂಬರ್ 30 ರೊಳಗೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ರೈತರು ಹೇಗೆ ಪರೀಕ್ಷೆ ಮಾಡುವುದು?

1. ಪಟ್ಟಿಯಲ್ಲಿ ರೈತರ ಹೆಸರನ್ನು ಪರಿಶೀಲಿಸಿಸಲು ಮೊದಲನೆಯದಾಗಿ ನೀವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in.2 ಗೆ ಭೇಟಿ ನೀಡಬೇಕು.

2. ವೆಬ್ ಸೈಟ್ ಮುಖಪುಟದಲ್ಲಿ  ರೈತರ ಕಾರ್ನರ್ 3 ಆಯ್ಕೆ ಮಾಡಿಕೊಳ್ಳಬೇಕು

3. ರೈತರ ಕಾರ್ನರ್ ವಿಭಾಗದಲ್ಲಿ, ನೀವು ಫಲಾನುಭವಿಗಳ ಪಟ್ಟಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

4. ನಂತರ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು

5. ಬಳಿಕ ನೀವು ಪಡೆಯಿರಿ ವರದಿಯನ್ನು ಕ್ಲಿಕ್ ಮಾಡಬೇಕು. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಖಾತೆಗೆ ಹಣ ಜಮೆಯಾಗದಿದ್ದರೆ ಏನು ಮಾಡಬೇಕು?

PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266

PM ಕಿಸಾನ್ ಸಹಾಯವಾಣಿ ಸಂಖ್ಯೆ: 155261

PM ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011-23381092, 23382401

PM ಕಿಸಾನ್ ಹೊಸ ಸಹಾಯವಾಣಿ: 011-24300606

PM ಕಿಸಾನ್ ಹೊಸ ಸಹಾಯವಾಣಿ: 011-24300606

PM ಕಿಸಾನ್ ಹೊಸ ಸಹಾಯವಾಣಿ: 011-24300606

PMಸಹಾಯವಾಣಿ: 0120-6025109 ಇ-ಮೇಲ್ ಐಡಿ: [email protected]

ಪಿಎಂ ಕಿಸಾನ್ ಹಣ ಬಿಡುಗಡೆಯಾಗದ್ದಲ್ಲಿ ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

error: Content is protected !!