ಗುಬ್ಬಿ(ಸಿ.ಎಸ್.ಪುರ). ಜನತೆ ಕೊರೋನಾ ನಿಯಂತ್ರಣ ಕ್ಕೆ ಸಹಕಾರ ನೀಡಬೇಕು. ಸಿ.ಎಸ್.ಪುರ ಠಾಣೆ ಪಿಎಸ್ಐ ಸೋಮಶೇಖರ್ ಮನವಿ.

ಕೊರೋನಾ ಸೊಂಕು ದಿನನಿತ್ಯ ವು ಸಹ ವ್ಯಾಪಕವಾಗಿ ಹರಡುತ್ತಿದ್ದು ಇದರ ನಿಯಂತ್ರಣ ಸಲುವಾಗಿ ಸರ್ಕಾರ ಲಾಕ್ ಡೌನ್ ಆದೇಶ ಮಾಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸುವ ಮೂಲಕ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ಸೊಂಕು ಹರಡದಂತೆ ಕಾಳಜಿ ವಹಿಸುವುದು ಸೂಕ್ತ ಎಂದು ಸಿ.ಎಸ್.ಪುರ ಪೊಲೀಸ್ ಠಾಣೆ ಪಿ ಎಸ್ ಐ ಸೋಮಶೇಖರ್ ಜನತೆಯಲ್ಲಿ ಮನವಿ ಮಾಡಿದರು.

ಮಾಧ್ಯಮ ಗ ಮೂಲಕ ಸಾರ್ವಜನಿಕ ರಿಗೆ ಮನವಿ ಮಾಡಿದರು.ಕೊರೋನಾ ಎರಡನೇ ಅಲೆ ಸಾಕಷ್ಟು ವೇಗವಾಗಿ ಸೊಂಕು ಹರಡುತ್ತಿದ್ದು ಮಾನವನ ಜೀವವನ್ನೇ ತೆಗೆದುಕೊಳ್ಳುವ ಸ್ಥಿತಿ ಗೆ ಸೊಂಕು ಮುಂದಾಗಿದೆ ಈ ಪರಿಸ್ಥಿತಿ ಯಲ್ಲಿ ನಮ್ಮ ಜೀವನವನ್ನು ನಾವೇ ಕಾಪಾಡಿಕೊಳ್ಳಲು ಪ್ರಯತ್ನ ಮಾಡಬೇಕು.ಹಾಗಾಗಿ ಸಾರ್ವಜನಿಕರು ಅದಷ್ಟು ಇತರರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಕಡ್ಡಾಯವಾಗಿ ಮಾಸ್ಕ್ ಧರಿಸುವುದು.ಸ್ಯಾನಿಟೈಸರ್ ಬಳಸುವುದು . ಗುಂಪು ಸೇರದಿರುವುದು ಹಾಗೂ ಕೊರೋನಾ ಲಕ್ಷಣಗಳು ಕಂಡರೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ.ಸಾರ್ವಜನಿಕರು ಅನಾವಶ್ಯಕ ವಾಗಿ ಮನೆಯಿಂದ ಹೊರಬರಬಾರದು ಅವಶ್ಯಕತೆ ಇದ್ದರೆ ಮಾತ್ರ ಹಾಗೂ ಅಗತ್ಯ ವಸ್ತು ಖರೀದಿಸಲು ಮಾತ್ರ ಬರುವುದು ಸೂಕ್ತ. ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಮಾತ್ರ ಸಾರ್ವಜನಿಕರ ಸಂಚಾರಕ್ಕೆ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

ಸರ್ಕಾರದ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡದಂತೆ ನಿಗಾವಹಿಸಿ.ಸಾರ್ವಜನಿಕ ಆರೋಗ್ಯ ದ ದೃಷ್ಟಿಯಿಂದ ಸರ್ಕಾರ ಲಾಕ್ ಡೌನ್ ಆದೇಶ ಮಾಡಿದ್ದು ಪ್ರತಿಯೋಬ್ಬರು ಸಹ ನಿಯಮಗಳನ್ನು ಪಾಲಿಸಬೇಕು ಯಾರಾದರೂ ಸರ್ಕಾರ ದ ಆದೇಶವನ್ನು ಧಿಕ್ಕರಿಸಿ ದರೆ ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗುವಂತೆ ಸರ್ಕಾರ ಸೂಚಿಸಿದೆ ಆದ್ದರಿಂದ ಸಾರ್ವಜನಿಕರು ಸರ್ಕಾರ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.ಈ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣ ಮಾಡುವ ಜವಾಬ್ದಾರಿ ಪ್ರತಿ ನಾಗರಿಕರ ಮೇಲಿದೆ ಎಂದರು.

ಕೊರೋನಾ ಸೊಂಕಿತರು ಧೈರ್ಯದಿಂದ ಚಿಕಿತ್ಸೆ ಪಡೆಯಬೇಕು.ಕೊರೋನಾ ಸೊಂಕಿತರು ಸೊಂಕು ಧೃಡ ಪಟ್ಟ ನಂತರ ಯಾವುದೇ ಕಾರಾಣಕ್ಕೂ ಭಯಪಡಬೇಡಿ ಪ್ರಾರಂಭ ದಲ್ಲಿ ಚಿಕಿತ್ಸೆ ಪಡೆದರೆ ಯಾವುದೆ ತೊಂದರೆಗಳು ಎದುರಾಗುವುದಿಲ್ಲ ಜೊತೆಗೆ ಸರ್ಕಾರ ಸೊಂಕಿತರ ಚಿಕಿತ್ಸೆ ಗಾಗಿ ಆಯಾ ತಾಲೂಕು ಕೇಂದ್ರಗಳ.ವ್ಯಾಪ್ತಿಯಲ್ಲಿ ಕೊವೀಡ್ ಸೆಂಟರ್ ತೆರೆದಿದ್ದು ಚಿಕಿತ್ಸೆ ಪಡೆದು ಗುಣಮುಖರಾಗಬಹುದು.ಯಾವುದೇ ಅಂತಕಗಳಿಗೆ ಒಳಗಾಗದೆ ಚಿಕಿತ್ಸೆಪಡೆಯಬೇಕು ಎಂದು ಸೊಂಕಿತರಿಗೆ ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!