ಕೋವಿಡ್ ನಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗೆ ನಂಬಿಕೆ ಬಂದಿದೆ: ಡಿಎಚ್ಒ ಡಾ ನಾಗೇಂದ್ರಪ್ಪ.

ತುಮಕೂರು.:ಕಳೆದ 10 ತಿಂಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿ ಹೋರಾಡಿದ ಎಲ್ಲರಿಗೂ ಜಿಲ್ಲಾ ಸರ್ಜನ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಂದಿರುವ ಎಲ್ಲಾ ಪ್ರಶಂಸೆಗಳು ಸಲ್ಲಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ತಿಳಿಸಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸ್ವರ ಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆ(ರಿ), ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಸೊಬಗು ಎಂಬ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ತೋರಿದ, ಧೈರ್ಯ ಮತ್ತು ಸೇವೆಯನ್ನು ಗಮನಿಸಿ ಹಲವಾರು ಪ್ರಶಂಸೆಗಳು ಸಂದಿವೆ. ಸರಕಾರಿ ಸೇವೆ ಎಂದರೆ ಮೂಗು ಮುರಿಯುತ್ತಿದ್ದ ಜನರು ಕೋವಿಡ್‌ನಿಂದ ಸರಕಾರಿ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತಾಗಿದೆ.ಇದೇ ರೀತಿ ಕೋವಿಡ್ 2ನೇ ಅಲೆಯನ್ನು ತೆಡಯಲು ನಾವೆಲ್ಲರೂ ಸಿದ್ದರಾಗೋಣ ಎಂದು ವಿಶ್ವಾಸ ತುಂಬಿದರು.

ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಮಾತನಾಡಿ, ಕಳೆದ 20 ವರ್ಷಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವರಸಿಂಚನ ಸಂಸ್ಥೆ, ಮಲ್ಲಿಕಾರ್ಜುನ ಕೆಂಕೆರೆ ಅವರ ನೇತೃತ್ವದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ನೀಡುವ ಜೊತೆಗೆ, ಹೊಸ ಕಲಾವಿದರನ್ನು ಕ್ಷೇತ್ರಕ್ಕೆ ಪರಿಚಯಿಸಿದೆ.ಕಲಾವಿದರಿಗೆ ವರ್ಗ, ವರ್ಣ ಬೇಧವಿಲ್ಲ. ಕಲೆಯೇ ಅವರ ಜೀವಾಳ ಎಂದರು.

ಲೋಕಾಯುಕ್ತ ಡಿವೈಎಸ್ಪಿ ಸಿ.ಆರ್.ರವೀಶ್ ಮಾತನಾಡಿ,ಕೋರೋನಾದಿಂದಾಗಿ ನಾಡಿನ ಜನರು ಹಲವಾರು ಸಂಘರ್ಷಗಳನ್ನು ಎದುರಿಸಬೇಕಾಯಿತು.ಸಾಮಾನ್ಯ ಜನರು 15-20 ನಿಮಿಷಗಳ ಕಾಲ ಬಳಸಬಹುದಾದ ಪಿಪಿಇ ಕಿಟ್‌ನ್ನು ಶೂಶ್ರಷಕ ಸಿಬ್ಬಂದಿ 8 ರಿಂದ 10 ಗಂಟೆಗಳ ಕಾಲ ತೊಟ್ಟು ಕೆಲಸ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ತಡೆಯಲು ಕೆಲಸ ಮಾಡಿದ್ದಾರೆ. ಕೋವಿಡ್‌ನಿಂದ ವೈದ್ಯಕೀಯ ಕ್ಷೇತ್ರದ ವಿಶ್ವರೂಪ ದರ್ಶನ ನಾಡಿನ ಜನತೆಗೆ ಆಗಿದೆ ಎಂದರು.

ಪತ್ರಕರ್ತ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ,ಸಂಗೀತ ಮತ್ತು ಸಾಹಿತ್ಯದಲ್ಲಿ ತಾಯಿಯ ಆಂತಕರಣ ಮತ್ತು ಬುದ್ದನ ಕರುಣೆ ಅಡಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಜನ ಟಿ.ಎ.ವೀರಭದ್ರಯ್ಯ ಮಾತನಾಡಿ, ಕಳೆದ ೮ ರಿಂದ ೧೦ ತಿಂಗಳಿಂದ ಕೋವಿಡ್ ಸೇವೆಯಲ್ಲಿ ತೊಡಗಿರುವ ಆಸ್ಪತ್ರೆಯ ಸಿಬ್ಬಂದಿಗೆ ಮಾನಸಿಕ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಂಗೀತವನ್ನು ಇತ್ತೀಚಗೆ ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಅಳವಡಿಸಿ ಕಳ್ಳಲಾಗುತ್ತಿದೆ.ಹೆರಿಗೆ ವಾರ್ಡುಗಳಲ್ಲಿ ಲಘು ಸಂಗೀತಕ್ಕೆ ಅದ್ಯತೆ ನೀಡಲಾಗಿದೆ. ಜನರು ನಾವೆಲ್ಲರೂ ಕೋವಿಡ್ ಮುಕ್ತವಾಗಿದ್ದೇವೆ ಎಂದುಕೊಂಡಿದ್ದಾರೆ. ಆದರೆ ಇದು ತಪ್ಪು, ಇಷ್ಟು ನಿರ್ಲಕ್ಷ ಸಲ್ಲದು, ಸರಕಾರದ ನಿಯಮದಂತೆ ಮಾಸ್ಕ್ ಧರಿಸಿ, ಎರಡನೇ ಅಲೆಯನ್ನು ಎದುರಿಸಲು ಸಜ್ಜಾಗಿ ಎಂದು ಸಲಹೆ ನೀಡಿದರು.

ಸ್ವರಸಿಂಚನ ಸುಗಮ ಸಂಗೀತ, ಜಾನಪದ ಕಲಾ ಸಂಸ್ಥೆಯ ಕಾರ್ಯದರ್ಶಿ ಕೆಂಕೆರೆ ಮಲ್ಲಿಕಾರ್ಜುನ ಮಾತನಾಡಿ, ಕಳೆದ 5 ವರ್ಷಗಳಿಂದ ಜಿಲ್ಲಾಅಸ್ಪತ್ರೆಯ ಸಿಬ್ಬಂದಿಗೆ ಸುಗಮ ಸಂಗೀತದ ತರಬೇತಿ ನೀಡಿ, ಅವರಿಂದಲೇ ಕಾರ್ಯಕ್ರಮ ಏರ್ಪಡಿಸುವ ಕೆಲಸ ಮಾಡಲಾಗುತ್ತಿದೆ.ಕಳೆದ ವರ್ಷ ಕೊವೀಡ್ ನಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ವರ್ಷ ಹಬ್ಬದ ರೀತಿಯಲ್ಲಿ ಆಯೋಜಿಸಲಾಗಿದೆ.ಇದಕ್ಕಾಗಿ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದಗಳು ಎಂದರು.

ವೇದಿಕೆಯಲ್ಲಿ ಇತ್ತೀಚಗೆ ನಿವೃತ್ತರಾದ, ವರ್ಗಾವಣೆಗೊಂಡ, ಬಡ್ತಿ ಪಡೆದ ವೈದ್ಯರು,ಇತರೆ ಸಿಬ್ಬಂದಿ ಅವರಿಗೆ ಅಭಿನಂದಿಸಲಾಯಿತು.ಕಲಾ ಸಾಧಕರಾದ ಡಾ.ಗೀತಾ ಹೆಚ್.ಕೈವಾರ, ಶ್ರೀಮತಿ ದೀಪ್ತಿ ಪ್ರಶಾಂತ್ ವಿ.ಪುಣ್ಯೇಶ್‌ಕುಮಾರ್ ಮತ್ತು ಲೋಕೇಶ್ ಬಾಬು ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ನೀಲಾಲಯ ನೃತ್ಯ ಕೇಂದ್ರದ ಶ್ರೀಮತಿ ಬಾಲ ವಿಶ್ವನಾಥ್, ಜಲದಿ ಸಾಂಸ್ಕೃತಿಕ ಸಂಸ್ಥೆಯ ಜಲಧಿ ರಾಜು ಉಪಸ್ಥಿತರಿದ್ದರು. ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ.ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!