ವಾಹನಗಳಿಗೆ ನೀಡದೆ ಎಲ್ಲೆಂದರಲ್ಲಿ ಕಸ ಎಸೆದವರಿಗೆ ದಂಡ

ತುಮಕೂರು : ಮಹಾನಗರ ಪಾಲಿಕೆ ವ್ಯಾಪ್ತಿ 35 ವಾರ್ಡುಗಳ ನಾಗರಿಕರು ತಮ್ಮ ಮನೆಯಲ್ಲಿ   ಉತ್ಪತ್ತಿಯಾಗುವ ಕಸವನ್ನು ಮಹಾನಗರಪಾಲಿಕೆಯ ಕಸದ ವಾಹನಗಳಿಗೆ ನೀಡದೇ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಎಸೆಯುತ್ತಿರುವುದು   ಸ್ವಚ್ಚತಾ ಸ್ಥಳ ಪರಿವೀಕ್ಷಣೆಯ ಸಮಯದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಕಂಡುಬಂದಿದ್ದು,   ಮನೆಯ ತ್ಯಾಜ್ಯವನ್ನು ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪಾಲಿಕೆ ವಾಹನಗಳಿಗೆ ನೀಡುವಂತೆ ಹಲವು ಬಾರಿ ಸೂಚಿಸಿದ್ದರೂ ಸಹ ಕೆಲವು ವಾರ್ಡುಗಳ ನಾಗರಿಕರು ಕಸವನ್ನು ಪ್ರತ್ಯೇಕಿಸಿ ನೀಡುತ್ತಿಲ್ಲದ ಕಾರಣ ನಗರದ ಸ್ವಚ್ಛತೆ ಹಾಗೂ ನೈರ್ಮಲೀಕರಣ ಕಷ್ಟ ಸಾಧ್ಯವಾಗುತ್ತಿದೆ.

ಪಾಲಿಕೆ ವ್ಯಾಪ್ತಿ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ   ಯಾವುದೇ ವೇಳೆಯಲ್ಲಿ ಕಸ/ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಎಸೆಯುವವರಿಗೆ ಪಾಲಿಕೆಯಿಂದ ದಂಡ ವಿಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದುನಿಯಮವನ್ನು ಉಲ್ಲಂಘಿಸಿ ಕಸ ಎಸೆದವರ ಛಾಯಾಚಿತ್ರ ಸಮೇತ ಪಾಲಿಕೆ ಕಛೇರಿಗೆ ಕಳುಹಿಸಿದರಿಗೆ ಗೌರವಧನದೊಂದಿಗೆ ಸೂಕ್ತ ಬಹುಮಾನ ನೀಡಲಾಗುವುದು.   ನಗರವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯುವ ಪಾಲಿಕೆಯ   ಪ್ರಯತ್ನಕ್ಕೆ ಸಾರ್ವಜನಿಕರು ಕೈ ಜೋಡಿಸಿ ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ

error: Content is protected !!