ಗ್ರಾಮೀಣ ಭಾಗದ ಜನರ ಜೀವದ ಜೊತೆ ಕಲ್ಲುಗಣಿಗಾರಿಕೆ ಮಾಲೀಕರ ಚೆಲ್ಲಾಟ: ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಆನಂದ್ ಕುಮಾರ್

ತಿಪಟೂರು: ಕಲ್ಲು ಗಣಿಗಾರಿಕೆ ಗಳಲ್ಲಿ ಅಕ್ರಮವಾಗಿ ನಿಷೇದಿತ ರಿಗ್ ಬ್ಲಾಸ್ಟ್ ಮಾಡುವ ಮೂಲಕ ಕ್ರಷರ್ ಮಾಲೀಕರುಗಳು ಗ್ರಾಮೀಣ ಭಾಗದ ಜನರ ಹಾಗೂ ರೈತರ ಜೀವ ಮತ್ತು ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಣಿಕಿಕೆರೆ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಆನಂದ್ ಕುಮಾರ್ ಕಲ್ಲು ಗಣಿಗಾರಿಕೆಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಿಮ್ಮರಾಯನಹಳ್ಳಿಯಲ್ಲಿರುವ ಅನುಪಮಾ ಎಂಟರ್ ಪ್ರೈಸಸ್ ಕ್ರಷರ್

ತಾಲ್ಲೂಕಿನ ತಿಮ್ಮರಾಯನಹಳ್ಳಿ ಸರ್ವೆ ನಂ 15 ರಲ್ಲಿ ಭಾರತ್ ಮಾಲ ಪರಿಯೋಜನೆಗೆ ರಾಷ್ಟ್ರೀಯ ಹೆದ್ದಾರಿ 206 ರ ರಸ್ತೆ ಕಾಮಗಾರಿಗೆ ಮಾತ್ರ ಜಲ್ಲಿ ಎಂ ಸ್ಯಾಂಡ್ ಪೂರೈಕೆ ಮಾಡಲು ಕಲ್ಲುಗಣಿಗಾರಿಕೆಗೆ ಅನುಪಮಾ ಎಂಟರ್ ಪ್ರೈಸಸ್ ಎಂಬ ಖಾಸಗಿ ಕಂಪನಿಗೆ ಸರ್ಕಾರ ಗುತ್ತಿಗೆ ನೀಡಿದೆ. ಆದರೆ ಗಣಿಗಾರಿಕೆ ನಡೆಸುತ್ತಿರುವ  ಕಂಪನಿ ಕಲ್ಲು ಗಣಿಗಾರಿಕೆ ನಿಯಮಗಳನ್ನ ಗಾಳಿಗೆ ತೂರಿ ಅಪಾಯಕಾರಿ ರಿಗ್ ಬ್ಲಾಸ್ಟ್ ನಡೆಸುತ್ತಿದ್ದಾರೆ.  ರಿಗ್ ಬ್ಲಾಸ್ಟ್ ನಿಷೇದವಿದ್ದರು ಸಹ ಎರಡ್ಮೂರು ಬೋರ್ ವೆಲ್ ಲಾರಿಗಳ ಮೂಲಕ ಬಂಡೆಗಳ ಮೇಲೆ ಹತ್ತಾರು ಅಡಿ ಆಳಕ್ಕೆ ರಂದ್ರ ಕೊರೆದು ಅವೈಜ್ಞಾನಿಕವಾಗಿ ಬ್ಲಾಸ್ಟ್ ಮಾಡಲಾಗುತ್ತಿದೆ. ಒಮ್ಮೆ ಬ್ಲಾಸ್ಟ್ ಆಯಿತೆಂದರೆ ಹಿರೋಶಿಮಾ ನಾಗಸಾಕಿಯ ಅಣುಬಾಂಬ್ ಸ್ಪೋಟದಂತೆ  ಕಲ್ಲು ಬಂಡೆಗಳು ಸ್ಪೋಟಗೊಂಡು ದೂಳು ಆಗಸದತ್ತ  ಚಿಮ್ಮುತ್ತದೆ. ಬೃಹತ್ ಗ್ರಾತ್ರದ ಕಲ್ಲುಗಳು ಹಾರಿ ಬಂದು ಅಕ್ಕಪಕ್ಕದ ರೈತರು  ಬೆಳೆದ ರಾಗಿ  ಬೆಳೆ ಮೇಲೆ ಅಪ್ಪಳಿಸುತ್ತಿದೆ. ಸ್ಪೋಟದ ರಭಸಕ್ಕೆ ಒಮ್ಮೆಲೆ ಭೂಮಿ ಗಡ ಗಡ ನಡುಗುತ್ತದೆ, ಸುತ್ತ ಮೂರ್ನಾಲ್ಕು ಗ್ರಾಮಗಳ ಮನೆಗಳಲ್ಲಿ ಪಾತ್ರೆಗಳು ನೆಲಕ್ಕೆ ಅಪ್ಪಳಿಸುತ್ತವೆ. ಸ್ಪೋಟದ ತೀವ್ರತೆಗೆ ಮನೆಗಳೆಲ್ಲ ಬಿರುಕುಬಿಟ್ಟಿದ್ದು ಗೋಡೆಗಳು ಕುಸಿದು ಬೀಳುವ ಹಂತದಲ್ಲಿವೆ. ರಿಗ್ ಬ್ಲಾಸ್ಟ್ ನಿಂದ ಸುತ್ತ ಮುತ್ತ ಹಳ್ಳಿ ಬೋರ್ ವೆಲ್ ಗಳಲ್ಲಿ ನೀರು ಬತ್ತಿಹೋಗುತ್ತಿದ್ದು ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ ಈಗೆ ಮುಂದುವರಿದರೆ ರೈತರು ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಅನುಪಮಾ ಎಂಟರ್ ಪ್ರೈಸಸ್ ಕ್ರಷರ್ ನಲ್ಲಿ ನಿಂತಿರುವ ರಿಗ್ ಬ್ಲಾಸ್ಟ್ ಮಾಡುವ ಬೊರ್ ವೆಲ್ ಲಾರಿಗಳು, ಬಂಡೆ ಬ್ಲಾಸ್ಟ್ ಆಗುತ್ತಿರುವುದು

ಇಷ್ಟೇ ಅಲ್ಲದೆ ರಸ್ತೆ ಭಾರ ಮೀತಿಯನ್ನ ಉಲ್ಲಂಘನೆ ಮಾಡಿ ಗ್ರಾಮೀಣ ಭಾಗದ ರಸ್ತೆಗಳಲ್ಲಿ 16 ರಿಂದ 20 ಟನ್ ಭಾರ ಮಿತಿಯನ್ನ ಹೊಂದಿರುವ 10 ಚಕ್ರದ ಲಾರಿಗಳು ಹಾಗೂ 12 ಚಕ್ರದ ಲಾರಿಗಳಲ್ಲಿ 30 ರಿಂದ 50 ಟನ್  ನಷ್ಟು ಭಾರಿ ಪ್ರಮಾಣದಲ್ಲಿ ಜಲ್ಲಿ ಎಂ ಸ್ಯಾಂಡ್ ಸಾಗಿಸುತ್ತಿದ್ದು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ. ತಿಮ್ಮರಾಯನಹಳ್ಳಿ ಯಿಂದ ಎನ್ ಎಚ್ 206 ರವರೆಗೆ ಸಂಪೂರ್ಣವಾಗಿ ರಸ್ತೆ ಹಾಳಾಗಿದ್ದು 2 ರಿಂದ 3 ಅಡಿ ಆಳದ ಗುಂಡಿ ಗೊಟರುಗಳುಂಟಾಗಿ ಡಾಂಬರು ರಸ್ತೆಯೇ ಮಾಯವಾಗಿದೆ. ದೊಡ್ಡ ಮಾರ್ಪನಹಳ್ಳಿ, ಆದಿನಾಯಕನಳ್ಳಿ, ತಿಮ್ಮರಾಯನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿದ್ದು  ನಿತ್ಯ ನರಕ ಅನುಭವಿಸುವಂತಾಗಿದೆ.

ಭಾರ ಮಿತಿ ಇಲ್ಲದ ಲಾರಿಗಳಿಂದ ಗ್ರಾಮದ ರಸ್ತೆಗಳು ಹಾಳಾಗಿರುವುದು

ಮಳೆಗಾಲವಾಗಿರೋದ್ರಿಂದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಟ್ಲು ಗದ್ದೆಯಂತಾಗಿ ದ್ವಿಚಕ್ರ ಸವಾರರು ಸಂಚರಿಸಲಾಗದೆ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಮಳೆ ಇಲ್ಲದೇ ಇದ್ದರೆ ಲಾರಿ ಚಲಿಸುವ ರಭಸಕ್ಕೆ ದೂಳು ರಸ್ತೆಯನ್ನ ಆವರಿಸುತ್ತದೆ, ದೂಳಿನಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳು, ರೈತರು ಬೆಳೆದಿರುವ ಬೆಳೆಗಳಿಗೆ ಹಾನಿಯಾಗುತ್ತಿದೆ. ರಾಗಿ, ಹೂ, ತೆಂಗು ಸೇರಿದಂತೆ ಹಲವು ಬೇಳೆಗಳ ಮೇಲೆ ದೂಳು ಆವರಿಸುತ್ತಿದ್ದು ಸಂಪೂರ್ಣ ವಾಗಿ ಬೆಳೆ ಹಾಳಾಗುತ್ತಿದೆ. ದೂಳಿನಿಂದ ಜನರು ಹಲವಾರು ರೋಗ ರುಜಿನಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದುಂಟು,

ಕ್ರಷರ್ ಲಾರಿಗಳು ಹಾಡಹಗಲೇ ರಾಜರೋಷವಾಗಿ ರಸ್ತೆ ಭಾರ ಮೀತಿಯನ್ನ ಉಲ್ಲಂಘನೆ ಮಾಡುತ್ತಿದ್ದರೂ ಹೆದ್ದಾರಿಗಳಲ್ಲಿ, ನಗರಗಳಲ್ಲಿ ವಾಹನಗಳನ್ನ ಅಡ್ಡೆ ಹಾಕಿ ದಂಡ ವಿದಿಸುವ ಆರ್ ಟಿ ಓ ಅಧಿಕಾರಿಗಳು ಕ್ರಷರ್ ಲಾರಿಗಳ ಮೇಲೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂಬ ಅನುಮಾನ ಕಾಡುತ್ತಿದೆ.  

ಸರ್ಕಾರ, ಜಿಲ್ಲಾಧಿಕಾರಿಗಳು, ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಿಷೇದಿತ ರಿಗ್ ಬ್ಲಾಸ್ಟ್ ನಡೆಸುತ್ತಿರುವ ಕ್ರಷರ್ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಂಡು ಕ್ರಷರ್ ಅನುಮತಿಯನ್ನ ರದ್ದುಪಡಿಸಬೇಕು, ಗ್ರಾಮೀಣ ಭಾಗದ ಜನರ ಹಾಗೂ ರೈತರನ್ನ ಜೀವ ಜೀವನವನ್ನ ಉಳಿಸಬೇಕು.  ಇಷ್ಟೇ ಅಲ್ಲದೆ ತಿಮ್ಮರಾಯನಹಳ್ಳಿವರೆಗೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಕಾಂಕ್ರಿಟ್  ರಸ್ತೆಯನ್ನ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

error: Content is protected !!