ಆರ್ಥಿಕವಾಗಿ ಸಬಲರಾಗಿದ್ರೆ ಮಾತ್ರವೇ ಸಮಾಜ ನಮ್ಮನ್ನು ಗುರುತಿಸುತ್ತದೆ: ಡಾ ಶ್ರೀಧರ್

ತಿಪಟೂರು: ಆರ್ಥಿಕವಾಗಿ ಸಬಲರಾಗಿದ್ರೆ ಮಾತ್ರವೇ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಡಾ ಶ್ರೀಧರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶಿಕ್ಷಕರ ಭವನದಲ್ಲಿ ಶ್ರೀ ಆದಿಜಾಂಬವ ಪರಿಶಿಷ್ಟ ಜಾತಿ ವಿವಿದೋದ್ದೆಶ ಸಹಕಾರಿ ಸಂಘ ಹಮ್ಮಿಕೊಂಡಿದ್ದ 7 ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರಜಾಪ್ರಭುತ್ವದ ಮೂಲ ಆಶಯದಂತೆ ಸಹಕಾರಿ ಕ್ಷೇತ್ರದಲ್ಲಿ “ಎಲ್ಲರಿಗಾಗಿ ಒಬ್ಬರು, ಒಬ್ಬರಿಗಾಗಿ ಎಲ್ಲರೂ” ಎಂಬ ಸಹಕಾರಿ ಮಂತ್ರದಂತೆ ನಾವು ನಡೆಯಬೇಕು. ನಿತ್ಯ ದುಡಿದು ಬದುಕುವ ವರ್ಗಕ್ಕೆ ನಮ್ಮದೆ ಆದಂತಹ ಸಹಕಾರಿ ಬ್ಯಾಂಕ್ ಇದ್ದಾಗ ನಮಗೆ ಸಹಕಾರಿಯಾಗುತ್ತದೆ ಎಂದರು.

ಈ ದೇಶಕ್ಕೆ ಒಂದು ಸಂವಿಧಾನ ವಿಲ್ಲದೆ ಇದ್ದಾಗ ಆಶಾಕೀರಣವಾಗಿ ಬಂದವರು ಡಾ. ಬಿ ಆರ್ ಅಂಬೇಡ್ಕರ್, ಅವರು ತಳ ಸಮುದಾಯಗಳ ಅಭಿವೃದ್ದಿಗಾಗಿ ಅಂದೇ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿದ್ದರು, ಅದನ್ನು ಪ್ರತಿಯೊಬ್ಬರು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಜನರು ಆರ್ಥಿಕವಾಗಿ ಸಬಲರಾಗದಿದ್ರೆ ಸಮಾಜ ಅವರನ್ನ ಬೇರೆಯದೆ ರೀತಿಯಾಗಿ ನೋಡುತ್ತದೆ. ಆರ್ಥಿಕವಾಗಿ ಸಬಲರಾಗಿದ್ರೆ ಮಾತ್ರವೇ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು, ಉದ್ಯಮಿಯಾಗಲು ಯಾವುದೇ ಶಿಕ್ಷಣ ಬೇಕಾಗಿಲ್ಲ ವ್ಯವಹಾರ ಜ್ಞಾನ, ದೃಡ ಸಂಕಲ್ಪ ವೊಂದಿದ್ದರೆ ಸಾಕು ಯಾರು ಬೇಕಾದ್ರೂ ಉದ್ಯಮಿಯಾಗಬಹುದು ಎಂದರು.

ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ.

ಎಸ್ ಎಸ್ ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನ‌ ನೀಡಿ ಗೌರವಿಸಿಲಾಯಿತು.ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಹಲವರಿಗೆ ಸನ್ಮಾನಿಸಿಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಕೋವಿಡ್ ಹಾಗೂ ಇತರೆ ಕಾರಣಗಳಿಂದ ಅಕಾಲಿಕವಾಗಿ ನಿಧನರಾದ ಆದಿಜಾಂಬವ ಸಮಾಜದ ಮುಖಂಡರುಗಳಿಗೆ ಶ್ರಧ್ದಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನರಸಿಂಹಮೂರ್ತಿ ಕೆಇಬಿ, ಮಹಾದೇವಯ್ಯ, ಕೆ ರಾಮಯ್ಯ, ಪಟ್ಟಾಭಿರಾಮು,ಮೈಲಾರಪ್ಪ, ರಾಜಶೇಖರ್, ಸಂತೋಷ್, ಪತ್ರಕರ್ತ ಕೃಷ್ಣ, ಹಾಗೂ ಹರ್ಷ,ರೋಹಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.

error: Content is protected !!