ಭಾರತದಲ್ಲಿ ಒಮೈಕ್ರಾನ್ ಮೊದಲ ಸಾವು.

ಉದಯ್‍ಪುರ: ಕಳೆದ ವಾರ ರಾಜಸ್ಥಾನದ ಉದಯ್‍ಪುರದಲ್ಲಿ ವ್ಯಕ್ತಿಯೊಬ್ಬರು ಒಮೈಕ್ರಾನ್ ಸೋಂಕಿನಿಂದ ಸಾವನ್ನಪ್ಪಿದ್ದು, ಭಾರತದಲ್ಲಿ ಒಮೈಕ್ರಾನ್‍ನಿಂದ ದಾಖಲಾದ ಮೊದಲ ಸಾವು ಇದಾಗಿದೆ.

ಈ ಬಗ್ಗೆ ದೃಢೀಕರಿಸಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, “ತಾಂತ್ರಿಕವಾಗಿ ಇದು ಒಮೈಕ್ರಾನ್ ಸಂಬಂಧಿತ ಸಾವು. ಅವರಿಗೆ ವಯಸ್ಸಾಗಿತ್ತು, ಮಧುಮೇಹದಂತಹ ಕೊಮೊರ್ಬಿಡಿಟಿಗಳು ಸಹ ಇದ್ದವು ಎಂದು ಹೇಳಿದ್ದಾರೆ.

ಜಿನೋಮ್ ಸೀಕ್ವೆನ್ಸಿಂಗ್‍ನಲ್ಲಿ ಒಮೈಕ್ರಾನ್ ಸೋಂಕಿಗೆ ಒಳಗಾದ 73 ವರ್ಷದ ವ್ಯಕ್ತಿಯು ಎರಡು ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಡಿಸೆಂಬರ್ 31ರಂದು ಉದಯಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ವ್ಯಕ್ತಿ ಡಿಸೆಂಬರ್ 15ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು ಮತ್ತು ಜ್ವರ, ಕೆಮ್ಮು ಇದ್ದ ಕಾರಣ ಉದಯ್‍ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 25 ರಂದು ಪಡೆದ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶದಲ್ಲಿ ಒಮೈಕ್ರಾನ್ ಸೋಂಕಿಗೆ ಒಳಗಾಗಿರುವುದು ತಿಳಿದು ಬಂದಿತು ಎಂದು ಉದಯಪುರ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ (ಸಿಎಂಎಚ್‍ಒ) ಡಾ ದಿನೇಶ್ ಖರಾಡಿ ಹೇಳಿದ್ದಾರೆ.

error: Content is protected !!