ಒಮಿಕ್ರಾನ್ ; ಭಾರತದಲ್ಲಿ 2ನೇ ಸಾವು

ಉದಯಪುರ, ಡಿಸೆಂಬರ್ 31: ದೇಶದಲ್ಲಿ ದಿನೇ ದಿನೇ ಒಮಿಕ್ರಾನ್ ಹಾವಳಿ ತೀವ್ರಗೊಳ್ಳುತ್ತಿದೆ. ಮಹಾರಾಷ್ಟ್ರದ ಪಿಂಪ್ರಿ ಚಿಂಚ್ ವಾಡ್ ನಲ್ಲಿ ಮೊದಲ ಒಮಿಕ್ರಾನ್ ರೋಗಿ ಸಾವಿಗೀಡಾಗಿದ್ದರೆ, ಎರಡನೇ ಸಾವು ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಎಂಎಚ್ಒ ಡಾ ದಿನೇಶ್ ಖಾರಾಡಿ, ಉದಯಪುರದ ಲಕ್ಷ್ಮೀನಾರಾಯಣ ನಗರದ 73 ವರ್ಷದ ವ್ಯಕ್ತಿಯೊಬ್ಬರು ಪೋಸ್ಟ್ ಕೋವಿಡ್ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ವೃದ್ಧ ರೋಗಿಗೆ ಡಿಸೆಂಬರ್ 21 ಮತ್ತು 22 ರಂದು ಕರೊನಾ ಪರೀಕ್ಷೆ ನಡೆಸಿದಾಗ ನೆಗಟಿವ್ ವರದಿ ಬಂದಿತ್ತು. ಆದರೆ, ಡಿಸೆಂಬರ್ 25 ರಂದು ನಡೆಸಿದ ಪರೀಕ್ಷೆಯಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು ಎಂದು ಹೇಳಿದ್ದಾರೆ.

ಡಾ.ದಿನೇಶ್ ಖಾರಾಡಿ ಹೇಳಿಕೆ ಪ್ರಕಾರ, ಮೃತ ವ್ಯಕ್ತಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿದ್ದರು. ಈ ಸ್ಥಿತಿಯಲ್ಲಿ ವೈರಸ್ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಲ್ಲದೆ ಮಧುಮೇಹ ಹೊಂದಿರುವ ರೋಗಿ ಹೆಚ್ಚಿನ ಪ್ರಮಾಣದಲ್ಲಿ ಅಪಾಯ ಇರುತ್ತದೆ ಎಂದರು.

ರಾಜಸ್ಥಾನದಲ್ಲಿ ಇಲ್ಲಿಯವರೆಗೆ 69 ಒಮಿಕ್ರಾನ್ ರೋಗಿಗಳು ಪತ್ತೆಯಾಗಿದ್ದು, ಒಮೈಕ್ರಾನ್ ಸೋಂಕಿತರ ವಿಷಯದಲ್ಲಿ ರಾಜಸ್ಥಾನವು ದೇಶದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ.

error: Content is protected !!