ತಾಲ್ಲೂಕಿನಲ್ಲಿ ಯಾವುದೇ ಪ್ರದೇಶ ಕತ್ತಲಾದರೂ, ರಾಮಸಾಗರ ಗ್ರಾಮವು ಕತ್ತಲಾಗದು! :ಶ್ರೀಮತಿ ಮಂಜುಳಾ ಶಿವಲಿಂಗು.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ರಾಮಸಾಗರ ಗ್ರಾಮದ ಪ್ರಸಿದ್ದ ಶ್ರೀವರದರಾಜ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ “ಸ್ವಚ್ಛತಾ” ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೈತಾರ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಬೀರನಕೆರೆ-ರಾಮಸಾಗರ, ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಮಂಜುಳಾ ಶಿವಲಿಂಗುರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಶ್ರೇಷ್ಠತೆ ಮೆರೆದಿದೆ.ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಹಲವು ರೀತಿಯ ಯೋಜನೆಗಳನ್ನು ಶ್ರೀಕ್ಷೇತ್ರವು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದಲ್ಲಿ ಪಡೆದುಕೊಂಡ ಹಲವಾರು ಮಂದಿ ಅಭಿವೃದ್ಧಿ ಹೊಂದಿದ್ದಾರೆ. ಹೀಗೆಯೇ ಕ್ಷೇತ್ರದ ಸೇವೆ ಇನ್ನೂ ಹೆಚ್ಚಿನದಾಗಿ ಮುಂದುವರೆದು ನಮ್ಮ ಗ್ರಾಮೀಣ ಪ್ರದೇಶಗಳು ಹೆಚ್ಚಿನ ರೀತಿ ಅಭಿವೃದ್ಧಿಗೊಳ್ಳಬೇಕು ಹಾಗೂ ಗ್ರಾ.ಪಂ. ಚುನಾವಣೆಯ ನಂತರ ಲಾಕ್ ಡೌನ್ ನಿಂದ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಕಾರ್ಯಗಳಿಗೆ ಒತ್ತು ನೀಡಲಾಗುವುದು. ಗ್ರಾಮದ ಅಭಿವೃದ್ಧಿಗಳಿಗೆ ಸರ್ಕಾರದ ಅನುದಾನಗಳ ಜೊತೆಗೆ ಇಂತಹ ಸಂಘ ಸಂಸ್ಥೆಗಳು, ದಾನಿಗಳ ಸಹಾಯ ಪಡೆದು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ಇತಿಹಾಸ ಪ್ರಸಿದ್ಧ ಶ್ರೀ ವರದರಾಜಸ್ವಾಮಿ ದೇವಾಲಯವಾದ ರಾಮಸಾಗರ ಚಿಕ್ಕ ಗ್ರಾಮವಾಗಿದ್ದು, ಆದರೂ ಸಹ 40 ಸೋಲಾರ್ ಲೈಟ್ ಗಳನ್ನು ಅಳವಡಿಸಲಾಗಿದೆ. ತಾಲೂಕಿನಲ್ಲಿ ಯಾವ ಪ್ರದೇಶಗಳಲ್ಲಿ ಕತ್ತಲೆ ಯಾದರೂ,ನಮ್ಮ ರಾಮಸಾಗರ ಗ್ರಾಮ ಎಂದಿಗೂ ಕತ್ತಲೆಯಾಗದು ಎಂದರು. ಗ್ರಾಮದಲ್ಲಿ ಶೀಘ್ರದಲ್ಲಿ ಶುದ್ಧಕುಡಿಯುವ ನೀರಿನ ಘಟಕವನ್ನು ಆರಂಭಿಸಲಾಗುವುದು ಹಾಗೂ ಸ್ವಚ್ಛತೆಗಾಗಿ ಬಾಕ್ಸ್ ಚರಂಡಿಗಳನ್ನು, ಎರೆಹುಳು ಗೊಬ್ಬರದ ಹೊಂಡಗಳನ್ನು ಸದ್ಯದಲ್ಲೇ ನಿರ್ಮಿಸಲಾಗುವುದು ಗ್ರಾಮದ ಅಭಿವೃದ್ಧಿಯೇ ನಮ್ಮ ಗುರಿ ಎಲ್ಲರ ಸಹಕಾರವಿರಲಿ ಶ್ರೀ ಸ್ವಾಮಿಯ ದಯೆ ಎಲ್ಲರ ಮೇಲಿರಲಿ, ಮೂರನೆಯ ಅಲೆಯಿಂದ ಎಲ್ಲರೂ ಸುರಕ್ಷಿತವಾಗಿರೊಣ ಎಂದು ಮನವಿ ಮಾಡಿದರು.

ಮಾಯಸಂದ್ರ ವಲಯ ಸಿ.ಹೆಚ್.ಸಿ. ಪ್ರಬಂಧಕ ಉಮೇಶ್ ರವರು ಮಾತನಾಡಿ 2019 -20 ನೇ ಸಾಲಿನಲ್ಲಿ ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರಶಸ್ತಿ ದೊರೆಯಿತು. ಇದರಿಂದ ನಮ್ಮ ಪೂಜ್ಯರಾದ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರ ಮನಸ್ಸಿನಲ್ಲಿ ರಾಜ್ಯದ ಎಲ್ಲಾ ಭಾಗದ ಧಾರ್ಮಿಕ ಕ್ಷೇತ್ರಗಳು ಸ್ವಚ್ಛತೆ ಯಿಂದಿರಲು ಸ್ವಚ್ಛತಾ ಕಾರ್ಯಕ್ರಮವನ್ನು ಪ್ರಾರಂಭಿಸೋಣ ಎಂಬ ಮನೋಭಾವದಿಂದ ವರ್ಷದಲ್ಲಿ ಎರಡು ಬಾರಿ ಈ ಯೋಜನೆಯನ್ನು ಹಮ್ಮಿಕೊಂಡಿದ್ದು, ರಾಜ್ಯದ 196 ತಾಲೂಕುಗಳನ್ನು ಅನುಷ್ಠಾನಗೊಂಡಿದೆ. 4000 ದೇವಸ್ಥಾನಗಳು ಸ್ವಚ್ಛತೆ ಗೊಂಡಿವೆ. ಅದರಂತೆ ತಾಲೂಕಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾಯಸಂದ್ರ ವಲಯ ಮಟ್ಟದಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರದ ಯೋಜನೆ ವತಿಯಿಂದ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಮನವಿಮಾಡಿದರು. ಜೊತೆಗೆ ಶ್ರೀ ಕ್ಷೇತ್ರ ಯೋಜನೆ ವತಿಯಿಂದ ಗ್ರಾಮೀಣ ಪ್ರದೇಶಗಳಿಗೆ ನೀಡುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಂಗಳಮ್ಮ. ರಮ್ಯಾ. ಕೋಮಲ. ತಾಯಮ್ಮ. ವೆಂಕಟೇಶ್. ಅಶ್ವಥ್. ಗಿರೀಶ್. ಬಾಲಾಜಿ. ಗಣೇಶ್. ಚೇತನ್. ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಮದ ನರಸಿಂಹಮೂರ್ತಿ ಪ್ರಾರ್ಥನೆ ಗೀತೆ ಹಾಡಿದರು. ಗೋವಿಂದರಾಜು ಸ್ವಾಗತ ಬಯಸಿದರು. ಸಂಸ್ಥೆಯ ಪ್ರತಿನಿಧಿ ಯಶ್ವಂತ್ ನಿರೂಪಿಸಿ, ವಂದಿಸಿದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!