ಐಸಿಸ್ ಉಗ್ರ ಸಂಘಟನೆ ನಂಟು ಶಂಕೆ: ಉಳ್ಳಾಲದ ಮಾಜಿ ಶಾಸಕನ ಮೊಮ್ಮಗನ ಪತ್ನಿಯನ್ನು ಬಂಧಿಸಿದ ಎನ್ಐಎ!

ಮಂಗಳೂರು: ಐಸಿಸ್ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಮೊಮ್ಮಗನ ಪತ್ನಿ ಮರಿಯಮ್ ಅಲಿಯಾಸ್ ದೀಪ್ತಿ ಮಾರ್ಲರನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು ಮಂಗಳೂರಿನ ನಿವಾಸದಿಂದ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

ದೆಹಲಿಯ ಎನ್‌ಐಎಯಲ್ಲಿ ಸಹಾಯಕ ತನಿಖಾಧಿಕಾರಿಯಾಗಿರುವ ಡಿಎಸ್‌ಪಿ ಕೃಷ್ಣ ಕುಮಾರ್ ನೇತೃತ್ವದ ಎನ್‌ಐಎ ಅಧಿಕಾರಿಗಳ ತಂಡ ಪೊಲೀಸ್ ಇನ್ಸ್‌ಪೆಕ್ಟರ್ ಅಜಯ್ ಸಿಂಗ್ ಮತ್ತು ಮೋನಿಕಾ ಧಿಕ್ವಾಲ್ ಅವರೊಂದಿಗೆ ಉಳ್ಳಾಲದ ಮಾಸ್ತಿಕಟ್ಟೆಯ ಬಿಎಂ ಕಾಂಪೌಂಡ್‌ನಲ್ಲಿರುವ ಅವರ ನಿವಾಸದಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಇವರು ದಿವಂಗತ ಇದಿನಬ್ಬ ಅವರ ಮೊಮ್ಮಗ ಅಬ್ದುಲ್ ರಹಿಮಾನ್ ಅವರ ಪತ್ನಿ. ಆಗಸ್ಟ್ 2021ರಲ್ಲಿ ಅಬ್ದುಲ್ ರಹಿಮಾನ್ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಅವರ ನಿವಾಸದ ಮೇಲೆ ಎನ್ಐಎ ದಾಳಿ ನಡೆಸಿತ್ತು.

error: Content is protected !!