ಹೊಸ ವರ್ಷಾಚರಣೆ ಹಾಗೂ ವೀಕೆಂಡ್ ರಜೆ ಹಿನ್ನೆಲೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಸಾಗರ.

ಬನ್ನೇರುಘಟ್ಟ, ಜ.2: ಹೊಸ ವರ್ಷಾಚರಣೆ ಹಾಗೂ ವೀಕೆಂಡ್ ರಜೆ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನದತ್ತ ಮುಖ ಮಾಡಿದ್ದಾರೆ. ಉದ್ಯಾನವನದ ಅಧಿಕಾರಿಗಳು ಕೋವಿಡ್ ನಿಯಮದ ಜೊತೆಗೆ ಪ್ರವಾಸಿಗರ ಅರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಪ್ರವಾಸಿಗರು ಕುಟುಂಬಸ್ಥರ ಹಾಗೂ ಸ್ನೇಹಿತರ ಜೊತೆಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಚ್ಛಂದವಾಗಿ ಸುತ್ತಾಡುತ್ತಾ ಪ್ರಾಣಿ, ಪಕ್ಷಿಗಳ ಸೌಂದರ್ಯವನ್ನ ಸವಿದಿದ್ದಾರೆ

ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗರೋಪಾದಿಯಲ್ಲಿ ಪ್ರವಾಸಿಗರ ದಂಡೆ ಹರಿದು ಬಂದಿದೆ. ಹೊಸವಾರ್ಷಾಚರಣೆ ಹಾಗೂ ವೀಕೆಂಡ್ ರಜೆ ಅದುದರಿಂದ ಹೆಚ್ಚಿನ ಪ್ರವಾಸಿಗರು ಬನ್ನೇರುಘಟ್ಟಕ್ಕೆ ಆಗಮಿಸಿದ್ದರಿಂದ ಉದ್ಯಾನವನದ ಅಧಿಕಾರಿಗಳಿಗೆ ಪ್ರವಾಸಿಗರನ್ನ ನಿಯಂತ್ರಣ ಮಾಡಲು ಕೊಂಚ ಸಮಸ್ಯೆ ಎದುರಾಯಿತು. ಮಧ್ಯಾಹ್ನದ ಬಿಸಿಲಿನ ವೇಳೆಯು ಸಹ ಪ್ರವಾಸಿಗರು ಟಿಕೆಟ್ ಕೌಂಟರ್ ಬಳಿ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಝೂ ಹಾಗೂ ಸಫಾರಿಯಲ್ಲಿನ ಆನೆ, ಸಿಂಹ, ಜಿಂಕೆ,ಕರಡಿ‌ ಸೇರಿದಂತೆ ವಿವಿಧ ಬಗೆಯ ಪ್ರಾಣಿ ಪಕ್ಷಿಗಳನ್ನ ನೋಡುವ ಮೂಲಕ ಸಂತಸಗೊಂಡರು.

ನಿನ್ನೇ ಹೊಸ ವರ್ಷಾಚರಣೆಯಾದ ಕಾರಣ ನಿನ್ನೇಯು ಸಹ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನದತ್ತ ಆಗಮಿಸಿದ್ದರು. ಇಂದು ಪ್ರವಾಸಿಗರು ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪ್ರವಾಸಿಗರನ್ನ ನಿಯಂತ್ರಣ ಮಾಡಲು ಉದ್ಯಾನವನದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೊಂಚ ಸಮಸ್ಯೆ ಉಂಟಾಯಿತು.‌ ಪ್ರವಾಸಿಗರ ಅರೋಗ್ಯ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು ಅಲ್ಲಲ್ಲಿ ಸಿಬ್ಬಂದಿಗಳನ್ನ ನಿಯೋಜನೆ ಮಾಡಿ ಮೈಕ್ ಮೂಲಕ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವಂತೆ ಪ್ರವಾಸಿಗರಿಗೆ ಹೇಳಲಾಯಿತು. ಅದ್ರು ಸಹ ಕೆಲ ಪ್ರವಾಸಿಗರು ಮಾಸ್ಕ್ ಹಾಕದೆ ಸಾಮಾಜಿಕ ಅಂತರವನ್ನು ಪಾಲಿಸದೆ ನಿರ್ಲಕ್ಷ್ಯ ಮಾಡಿದ್ದು ಕಂಡು ಬಂತು. ಇನ್ನೂ ಹಬ್ಬ ಹರಿದಿನಗಳಲ್ಲಿ ಹಾಗೂ ರಜೆ ದಿನ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿವುದಕ್ಕಿಂತ ಬೇರೆ ದಿನಗಳಲ್ಲಿ ಆಗಮಿಸಿದ್ರೆ ಅವರಿಗೆ ಟಿಕೆಟ್ ದರದಲ್ಲಿಯೂ ರಿಯಾಯಿತಿ ಸಿಗುತ್ತದೆ. ಜೊತೆಗೆ ಕೋವಿಡ್ ನಿಯಮಗಳನ್ನ ಪಾಲನೆ ಮಾಡಿಕೊಂಡು ಪ್ರಾಣಿ- ಪಕ್ಷಿಗಳನ್ನ ನೋಡಬಹುದಾಗಿದೆ ಎಂದು ಪ್ರವಾಸಿಗರಲ್ಲಿ ಕೋವಿಡ್ ನಿಯಮ ಪಾಲನೆ ಮಾಡುವಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಿನೇ ದಿನೇ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರ ಜೊತೆಗೆ ವಿವಿಧ ಪ್ರಭೇದದ ಪ್ರಾಣಿ- ಪಕ್ಷಿಗಳಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿ ಪ್ರಖ್ಯಾತಿಗಳಿಸಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸಹ ಕೋವಿಡ್ ನಿಯಮವನ್ನೇ ಪಾಲನೆ ಮಾಡಿ ವಿವಿಧ ಬಗೆಯ ಪ್ರಾಣಿ ಪಕ್ಷಿಗಳನ್ನ ನೋಡುವ ಮೂಲಕ ಸಂತಸಗೊಳ್ಳಲಿ ಎನ್ನುವುದೇ ನಮ್ಮ ಆಶಯವಾಗಿದೆ.

error: Content is protected !!