ಮುಂಬೈನಲ್ಲಿ ಹೊಸವರ್ಷಕ್ಕೆ ಕುತ್ತು; 144 ಸೆಕ್ಷನ್ ಜಾರಿ

ಮುಂಬೈ, ಡಿಸೆಂಬರ್ 30: ಕರೋನವೈರಸ್‍ನ ಹೊಸ ರೂಪಾಂತರಿ ತಳಿ ಒಮೈಕ್ರಾನ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ಡಿಸೆಂಬರ್ 30 ರಿಂದ ಜನವರಿ 7, 2022 ರವರೆಗೆ ಮುಂಬೈನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇರುವುದರಿಂದ ಹೊಸವರ್ಷವನ್ನು ಗಮನದಲ್ಲಿಟ್ಟುಕೊಂಡು ಈ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.

ಆದೇಶವು 2021ರ ಡಿಸೆಂಬರ್ 30 ರಿಂದ 7ನೇ ಜನವರಿ 2022ರವರೆಗೆ ಜಾರಿಯಲ್ಲಿರುತ್ತದೆ. ಇನ್ನು ರೆಸ್ಟೋರೆಂಟ್‍ಗಳು, ಹೋಟೆಲ್‍ಗಳು, ಬಾರ್‍ಗಳು, ಪಬ್‍ಗಳು, ರೆಸಾರ್ಟ್‍ಗಳು ಮತ್ತು ಕ್ಲಬ್‍ಗಳು ಸೇರಿದಂತೆ ಎಲ್ಲೆಡೆ ಪಾರ್ಟಿಗಳನ್ನು ಡಿಸೆಂಬರ್ 30 ರಿಂದ ಜನವರಿ 7 ರವರೆಗೆ ನಿಷೇಧಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 188 ರ ಅಡಿಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆ 1897 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ 2005 ಮತ್ತು ಅನ್ವಯವಾಗುವ ಇತರ ಕಾನೂನು ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರೋನವೈರಸ್‍ನ ಮೊದಲ ಮತ್ತು ಎರಡನೇ ಅಲೆಯಲ್ಲೂ ಸಂಕಷ್ಟ ಪರಿಸ್ಥಿತಿ ಎದುರಿಸಿದ್ದ ಮಹಾರಾಷ್ಟ್ರ ಒಮೈಕ್ರಾನ್ ಪ್ರಕರಣಗಳಲ್ಲಿಯೂ ಗಣನೀಯ ಏರಿಕೆ ಕಂಡಿದೆ. ಒಟ್ಟು 252 ಒಮೈಕ್ರಾನ್ ಪ್ರಕರಣಗಲು ದಾಖಲಾಗಿದ್ದು, ದೇಶದಲ್ಲಿ ಇದು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಏತನ್ಮಧ್ಯೆ, ರಾಜ್ಯದಲ್ಲಿ ಒಟ್ಟಾರೆ ಕೋವಿಡ್ -19 ಪ್ರಕರಣಗಳ ಸಂಖ್ಯೆ 3,900 ಕ್ಕೆ ತಲುಪಿದೆ ಮತ್ತು ದೈನಂದಿನ ಸಂಖ್ಯೆ ಒಂದು 1,728 ರಷ್ಟು ಏರಿಕೆಯಾಗಿದೆ.

error: Content is protected !!