ಹೊಸವರ್ಷ-2022: ತುರ್ತು ಪರಿಸ್ಥಿತಿಗೆ 108 ಸಕಲ ಸಿದ್ದತೆ: ಅಮರ್ ನಾಥ್

ತುಮಕೂರು: ಹೊಸವರ್ಷಾಚರಣೆ ಸಂದರ್ಭದಲ್ಲಿ ಅಪಘಾತಗಳು ಹೆಚ್ಚಾಗಿದ್ದು ತುರ್ತು ಸಂದರ್ಭದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಲು 108 ಆರೋಗ್ಯ ಕವಚ ಆಂಬ್ಯುಲೆನ್ಸ್ ತುರ್ತು ಸೇವೆಗೆ ಸದಾ ಸಿದ್ಧವಾಗಿದೆ ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿವಿಕೆ ಸಂಸ್ಥೆಯ ತುಮಕೂರು ಜಿಲ್ಲಾ ವ್ಯವಸ್ಥಾಪಕರಾದ ಅಮರ್ ನಾಥ್ ತಿಳಿಸಿದ್ದಾರೆ.

ಕೋವಿಡ್ 19, ಓಮಿಕ್ರಾನ್ ಆತಂಕ,ಕರ್ನಾಟಕ ಬಂದ್ ಬಿಸಿ ನಡೆವೆ ಕರ್ನಾಟಕದಲ್ಲಿ ನೂತನ 2022 ಹೊಸವರ್ಷವನ್ನ ಆಚರಣೆ ಮಾಡಲಾಗುತ್ತಿದೆ. ಹೊಸವರ್ಷ ಅಂದ್ರೆ ಯುವಕ ಯುವತಿಯರಿಗೆ ಉಲ್ಲಾಸ , ಉತ್ಸಾಹ , ಸಂಭ್ರಮ , ಸಡಗರ , ಕುಣಿದು , ಕುಡಿದು , ಕುಪ್ಪಳಿಸಬೇಕೆನ್ನುವ ಬಯಕೆ, ಈ ಮಧ್ಯೆ ಕುಡಿದು ವಾಹನ ಚಾಲನೆ ಮಾಡಿ ಸಾಕಷ್ಟು ಮಂದಿ ಅಪಘಾತಳಿಗೆ ತುತ್ತಾಗುವುದು ಸಾಮಾನ್ಯವಾಗಿರುತ್ತದೆ.

ಸಾಮಾನ್ಯವಾಗಿ ಹೊಸ ವರ್ಷಾಚರಣೆಯಲ್ಲಿ ಸರಾಸರಿ ಶೇ .30 ರಿಂದ 35 ರಷ್ಟು ಅಪಘಾತ ಪ್ರಕರಣಗಳು ಪ್ರತಿ ವರ್ಷ ವರದಿಯಾಗುತ್ತಿದೆ. ಅಪಘಾತದಲ್ಲಿ ಉಂಟಾಗುವ ಸಾವು – ನೋವು ತಡೆಯುವ ದೃಷ್ಟಿಯಿಂದ 108 ಆಂಬ್ಯು ಲೆನ್ಸ್ ಸೇವೆಯು ರಾಜ್ಯ ಪೊಲೀಸ್ ಇಲಾಖೆ ಯೊಂದಿಗೆ ನಿಕಟ ಸಹಕಾರ ಹೊಂದಿದೆ .

ವಿಶೇಷ ತಜ್ಞರನ್ನು ನೇಮಕ : ತುರ್ತು ಸಂದರ್ಭವನ್ನು ನಿರೀಕ್ಷಿಸುವ ಪ್ರದೇಶ ಗಳಲ್ಲಿ ಹೆಚ್ಚುವರಿ ಆಂಬ್ಯುಲೆನ್ಸ್ ಅನ್ನು ನಿಯೋಜಿಸ ಲಾಗುತ್ತಿದೆ . ಸುಮಾರು 3 ಸಾವಿರ ಮಂದಿಗೆ ಚಿಕಿತ್ಸೆ ನೀಡಲು ಸಜ್ಜಾಗಿದ್ದಾರೆ ತುರ್ತು ಚಿಕಿತ್ಸೆಗೆ ಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಆಮ್ಲಜನಕ ಸೇರಿ ದಂತೆ ಎಲ್ಲ ವಸ್ತುಗಳು ತುರ್ತು ವಾಹನ ದಲ್ಲಿ ಸಿದ್ಧವಿದ್ದು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ವಿಶೇಷ ತಜ್ಞರನ್ನು ನೇಮಿಸಿದ್ದು , ಅದರಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ .

ರಾಜ್ಯದಲ್ಲಿ 746 ಆಂಬ್ಯುಲೆನ್ಸ್ 108 ವಾಹನಗಳು ಕೆಲಸ ಮಾಡುತ್ತಿದ್ದು , ತುಮ ಕೂರು ಜಿಲ್ಲೆಯಲ್ಲಿ ಒಟ್ಟು 35 ತುರ್ತು ವಾಹನಗಳು ಸೇವೆ ನೀಡುತ್ತಿವೆ . ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 4 , ಚಿಕ್ಕನಾಯಕನಳ್ಳಿ 3 , ಕುಣಿಗಲ್ 3 , ತಿಪಟೂರು 2 , ತುರುವೇಕೆರೆ 2 , ಸಿರಾ 5 , ಮಧುಗಿರಿ 3 , ಪಾವಗಡ 5 , ಕೊರಟಗೆರೆ 3 , ತುಮಕೂರುಗ್ರಾಮಾಂತರ , ತುಮಕೂರು ನಗರದಲ್ಲಿ 2 ವಾಹನಗಳು ಇವೆ ಹೊಸ ವರ್ಷದಲ್ಲಿ ರಾತ್ರಿಯಿಡೀ ಆಯಾಕಟ್ಟಿನ ಸ್ಥಳಗಳು ಸೇರಿದಂತೆ ಎಲ್ಲೆಡೆ ಸಿದ್ಧವಿರುತ್ತವೆ.

ಅದರಲ್ಲೂ ಹೆಚ್ಚು ಅಪಘಾತ ವಾಗುವ ಹೆದ್ದಾರಿಗಳಲ್ಲಿ , ಹಾಟ್‌ಸ್ಪಾಟ್ ಗಳಲ್ಲಿ ಪೋಲಿಸ್ ಇಲಾಖೆ , 108 ವಾಹನ ತುರ್ತು ಸೇವೆಗೆ ಸಿದ್ಧವಿರುತ್ತವೆ . ಜಿಲ್ಲೆಯ ಲ್ಲಿನ 8 ಆಂಬ್ಯುಲೆನ್ಸ್‌ಗಳು , ವಿಶೇಷ ತಜ್ಞ ಸಿಬ್ಬಂದಿ ನಿಯೋಜಿಸಲಾಗಿದ್ದು , ಅವರು ಸ್ಥಳ ದಲ್ಲೇ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಾರೆ . ಸಾರ್ವಜನಿಕರು ಎಲ್ಲಿಯೇ ಅಪಘಾತ ಸಂಭವಿಸಿದರೂ ಕೊಡಲೇ 108 ಸಂಖ್ಯೆಗೆ ಕರೆ ಮಾಡಿ ಜೀವ ರಕ್ಷಣೆ ಮಾಡಲು ಸಹಕರಿಸುವಂತೆ ಕೋರಿದ್ದಾರೆ.

error: Content is protected !!