ಕಲ್ಲೂರು ಗ್ರಾಮದ ಸ್ಮಶಾನ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಪಾಲೆಷ್ಟು.

ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ವಾಗುತ್ತಿರುವ ಪರಿಶಿಷ್ಟ ರ ಸ್ಮಶಾನ ಅಭಿವೃದ್ಧಿ ಕಾಮಗಾರಿ ಸುಮಾರು 16 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದ್ದು ಅದರ ಸಂಪೂರ್ಣ ಜವಾಬ್ದಾರಿ ತುಮಕೂರು ನಿರ್ಮಿತಿ ಕೇಂದ್ರವು ನಿರ್ವಹಣೆ ಮಾಡುತ್ತಿದೆ.

ಆದರೆ ಕಾಮಗಾರಿ ಯನ್ನು ಮಾತ್ರ ಸ್ಥಳೀಯ ಗುತ್ತಿಗೆದಾರರು ಮಾಡುತ್ತಿದ್ದು ಕಾಮಗಾರಿ ಮಾತ್ರ ಬಹಳ ಕಳಪೆಯಾಗಿ ಕಂಡುಬರುತ್ತಿದೆ ಎಂಬುದು ಸ್ಥಳೀಯರ ಆರೋಪ. ಕಾಮಗಾರಿ ನೆಡೆಯುತ್ತೀರುವ ಸ್ಥಳವು ಮರಳು ಮಿಶ್ರಣ ವಾಗಿರುವ ಸ್ಥಳವಾಗಿದ್ದು ಕಟ್ಟಡ ಕಾಮಗಾರಿ ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೂಕ್ತ ಕ್ರಮವಹಿಸದೆ ತಮಗೆ ಇಷ್ಟ ಬಂದಂತೆ ಮಾಡುತ್ತಿದ್ದಾರೆ. ಸಮರ್ಪಕವಾಗಿ ಮತ್ತು ಸೂಕ್ತ ರೀತಿಯಲ್ಲಿ ಸಾಮಾಗ್ರಿಗಳನ್ನು ಬಳಕೆ ಮಾಡದೇ ಕಾಮಗಾರಿ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಸರ್ಕಾರ ಪರಿಶಿಷ್ಟರ ಸಮುದಾಯದ ಅಭಿವೃದ್ಧಿ ಸಾಕಷ್ಟು ಅನುದಾನವನ್ನು ನೀಡಿದರು ಸಹ ಅಧಿಕಾರಿಗಳು ಮಾತ್ರ ಗುತ್ತಿಗೆ ದಾರರೊಂದಿಗೆ ಶಾಮಿಲಾಗಿ ಕಳಪೆ ಕಾಮಗಾರಿ ಮಾಡಲು ಸಹಕಾರ ನೀಡುತ್ತೀರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ.ಇನ್ನೂ ಈ ಕಳಪೆ ಕಾಮಗಾರಿ ಯ ವಿಚಾರದಲ್ಲಿ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರ ದ ಅಧಿಕಾರಿಗಳನ್ನು ವಿಚಾರಣೆ ಮಾಡಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಬದಲಾಗಿ ಗುತ್ತಿಗೆದಾರರ ಪರವಾಗಿ ವಕಲತ್ ವಹಿಸುವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸರ್ಕಾರದ ಯೋಜನೆಯನ್ನು ಅನುಷ್ಠಾನ ಕ್ಕೆ ತರುತ್ತಾರೆ ಎಂಬುದು ತಿಳಿಯುತ್ತದೆ.

Leave a Reply

Your email address will not be published. Required fields are marked *

error: Content is protected !!