ತುರುವೇಕೆರೆ: ಮುತ್ತುಗದಹಳ್ಳಿ ಗ್ರಾ.ಪಂ. ವತಿಯಿಂದ ಕೊರೋನಾವಾರಿಯರ್ಸ್‌ಗಳಿಗೆ ಸುರಕ್ಷಾ ಪರಿಕರಣಗಳ ವಿತರಿಸಿದ- ಅಧ್ಯಕ್ಷ ಎಂ.ಆರ್.ಗಿರೀಶ್.

ಮುತ್ತುಗದಹಳ್ಳಿ ಗ್ರಾ.ಪಂ. ವತಿಯಿಂದ ಕೊರೋನಾ ವಾರಿಯರ್ಸ್‌ಗಳಿಗೆ ಸುರಕ್ಷಾ ಪರಿಕರಣಗಳ ವಿತರಿಸಿದ- ಅಧ್ಯಕ್ಷರಾದ ಎಂ.ಆರ್.ಗಿರೀಶ್.

ತುರುವೇಕೆರೆ:ತಾಲೂಕಿನ ಮಾಯಸಂದ್ರ ಹೋಬಳಿಯ ಮುತ್ತುಗದಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷರಾದ ಎಂ.ಆರ್.ಗಿರೀಶ್ ರವರ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಕೊರೋನಾ ವಾರಿಯರ್ಸ್ ಗಳಾದ ಸ್ಥಳೀಯ ಆಶಾ,ಅಂಗನವಾಡಿ,ಆರೋಗ್ಯ ಇಲಾಖೆ ಸೇರಿದಂತೆ ಗ್ರಾ.ಪಂ. ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷಾ ಪರಿಕರಣಗಳಾದ ಉತ್ತಮ ಗುಣಮಟ್ಟದ ಫೇಸ್ ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಜರ್, ಪಲ್ಸ್ ಆಕ್ಸಿಮೀಟರ್ ವಸ್ತುಗಳನ್ನು ಸೋಮವಾರ ಮುತ್ತುಗದಹಳ್ಳಿ ಗ್ರಾಮದಲ್ಲಿ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು ಒಂದೆಡೆ ವಿಶ್ವಾದ್ಯಂತ ಕೊರೋನಾ ಎಂಬ ಮಹಾಮಾರಿಯು ಆವರಿಸಿದೆ. ಬಡವರು, ನಿರ್ಗತಿಕರು, ಶ್ರಮಿಕ ವರ್ಗದ ಜನತೆಯ ಪಾಡು ಹೇಳತೀರದಂತಾಗಿದೆ. ಲಾಕ್ ಡೌನ್ ಗಳಿಂದ ಆರ್ಥಿಕ ಸಮಸ್ಯೆಯು ಉಂಟಾಗಿದೆ. ಮತ್ತೊಂದೆಡೆ ನಮಗಾಗಿ ತಮ್ಮ ಜೀವದ ಹಂಗನ್ನು ತೊರೆದು ರಾಜ್ಯಾದ್ಯಂತ ಕೋವಿಡ್-19 ವಿರುದ್ಧ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳಾದ ವೈದ್ಯರು, ನರ್ಸ್ ಗಳು, ಆಶಾ, ಅಂಗನವಾಡಿ, ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ತಮ್ಮ ಸೇವೆಗಳನು ಮಾಡುತ್ತಿದ್ದಾರೆ.ನಮ್ಮ ತಾಲೂಕು ಆಡಳಿತ ಸೇವೆಯ ಬಗ್ಗೆ ನಾವೆಲ್ಲರೂ ಗೌರವಿಸಬೇಕು. ತಾಲೂಕು ಆಡಳಿತಕ್ಕೆ ಸಹಕರಿಸಬೇಕು ಎಂದು ಸೇವೆಯನ್ನು ಶ್ಲಾಘಿಸಿದರು. ಅಲ್ಲದೆ ತಾಲೂಕಿನಲ್ಲಿಸೇವೆ ಸಲ್ಲಿಸುತ್ತಿರುವ ಎಲ್ಲಾ ಕೊರೋನಾ ವಾರಿಯರ್ಸ್ ಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಸ್ಥಳೀಯ ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ನಿಮ್ಮೊಂದಿಗೆ ನಾವೆಲ್ಲರೂ ಇರುವುದಾಗಿ ಧೈರ್ಯ ತುಂಬಿದರು. ಅವರನ್ನು ಪ್ರೋತ್ಸಾಹಿಸಿದರು ಹಾಗೂ ಕೊರೋನಾ ಮುಂಜಾಗೃತ ಕ್ರಮಕ್ಕಾಗಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಸ್ಯಾನಿಟೈಸೇಷನ್ ಸಿಂಪಡನೆ ಈಗಾಗಲೇ ಮಾಡಿಸಲಾಗಿದೆ. ಕೋವಿಡ್ ನಿಯಂತ್ರಣಗೊಳಿಸುವ ಸಲುವಾಗಿ ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದು ಸಂತೋಷವಾಗಿದೆ. ಆದರೂ ಯಾರು ಸಹಾ ಉದಾಸೀನತೆ ತೋರದೆ ಎಚ್ಚರದಿಂದಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಿ, ಆಗಾಗೇ ಸಾಬೂನುಗಳಿಂದ ಕೈತೊಳೆದುಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೊರೋನಾದಂತಹ ಲಕ್ಷಣ ಕಂಡು ಬಂದರೆ ಕೂಡಲೇ ಕೋವಿಡ್ ತಪಾಸಣೆ ನಡೆಸಿ ಪಾಸಿಟಿವ್ ಬಂದರೆ ಹೆದರದೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಚಿಕಿತ್ಸೆ ಪಡೆದು ಕೊರೋನಾ ಮುಕ್ತರಾಗಬೇಕು. 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಾ, ಸಹಕರಿಸಬೇಕು ಭಯಬೇಡ ಎಚ್ಚರದಿಂದಿರಿ ಎಂದು ಸ್ಥಳೀಯ ಜನತೆಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು,ಪಿ.ಡಿ.ಒ.ಸುಭಾಷ್, ಮಾವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆ.ನೀ.ಅಧಿಕಾರಿ ಶ್ರೀಧರ್, ಗ್ರಾಮಲೆಕ್ಕಾಧಿಕಾರಿ ಗೋಪಾಲ್, ಗ್ರಾ‌.ಪಂ.ಸಿಬ್ಬಂದಿ ಮಂಜುನಾಥ್, ಸಹಾ ಸಿಬ್ಬಂದಿಗಳು, ಗ್ರಂಥಾಲಯ ಸಹಾಯಕರಾದ ಜಯಕುಮಾರ್ ಸೇರಿದಂತೆ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು, ಹಿರಿಯ ಮುಖಂಡರು ಭಾಗವಹಿಸಿದ್ದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!