ಮೊಟೇರಾ ಸ್ಟೇಡಿಯಂ ಪಿಚ್ ಹೇಗಿತ್ತು ಗೊತ್ತಾ…!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಮೂರನೇ ಪಂದ್ಯ ಸ್ಪಿನ್ನರ್ಗಳ ದಾಳಿಗೆ ಬ್ಯಾಟ್ಸ್ಮನ್ಗಳು ಚೇತರಿಸಿಕೊಳ್ಳಲಾಗದೆ ಪಂದ್ಯ ಎರಡನೇ ದಿನದಲ್ಲಿಯೇ ಅಂತ್ಯವಾಗಿತ್ತು. ಹೀಗಾಗಿ ಪಿಚ್ ಗುಣಮಟ್ಟದ ಬಗ್ಗೆ ವಿವಾದವೆದ್ದಿದೆ. ಹಾಗಾಗಿ ಅಂತಿಮ ಪಂದ್ಯದ ಪಿಚ್ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಮೊಟೇರಾ ಸ್ಟೇಡಿಯಂನ ಪಿಚ್ ಹೇಗಾದರೂ ಇರಲಿ. ಆದರೆ ಇತಿಹಾಸವನ್ನು ಗಮನಿಸಿದರೆ ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಇತಿಹಾಸದಲ್ಲಿ ವೇಗಿಗಳಿಗಿಂತ ಸ್ಪಿನ್ನರ್‌ಗಳೇ ಈ ಅಂಗಳದಲ್ಲಿ ಹೆಚ್ಚಿ ವಿಕೆಟ್ ಕಬಳಿಸಿದ್ದಾರೆ. 60 ಶೇಕಡಾಕ್ಕೂ ಅಧಿಕ ವಿಕೆಟ್‌ಗಳು ಈ ಅಂಗಳದಲ್ಲಿ ಸ್ಪಿನ್ನರ್‌ಗಳ ಪಾಲಾಗಿದೆ.

ಆದರೆ ಈ ಪಿಚ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಫಿಗರ್ ವೇಗದ ಬೌಲರ್‌ನ ಹೆಸರಿನಲ್ಲಿದೆ ಎಂಬುದು ಕುತೂಹಲಕಾರಿ ಸಂಗತಿ. 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕಪಿಲ್ ದೇವ್ ಬರೊಬ್ಬರಿ 9 ವಿಕೆಟ್ ಪಡೆದಿದ್ದರು. ಇದು ಈ ಅಂಗಳದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವಾಗಿತ್ತು.

ಈ ಕ್ರೀಡಾಂಗಣದಲ್ಲಿ ಒಟ್ಟು ಈವರೆಗೆ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದ 10 ಕ್ಕಿಂತ ಕಡಿಮೆ ವಿಕೆಟ್‌ಗಳನ್ನು 3 ಸಂದರ್ಭದಲ್ಲಿ ಮಾತ್ರವೇ ಸ್ಪಿನ್ನರ್‌ಗಳು ಪಡೆದಿದ್ದಾರೆ. 2005 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅತಿ ಹೆಚ್ಚು 29 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಹಂಚಿಕೊಂಡಿದ್ದರು. ಇದಕ್ಕೂ ಹಿಂದೆ 1994 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸ್ಪಿನ್ನರ್‌ಗಳಿಗೆ 26 ವಿಕೆಟ್‌ಗಳನ್ನು ನೀಡಿದ್ದರೆ, 2001 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳು 25 ವಿಕೆಟ್ ಪಡೆದುಕೊಂಡಿದ್ದರು. ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪಿನ್ನರ್‌ಗಳು 28 ವಿಕೆಟ್‌ಗಳನ್ನು ಕಬಳಿಸಿದ್ದರು.

ಮೊಟೇರಾ ಸ್ಟೇಡಿಯಂನಲ್ಲಿ ವೇಗಿಗಳು ಒಂದು ಪಂದ್ಯದಲ್ಲಿ 21 ವಿಕೆಟ್ ಪಡೆದಿರುವುದು ಉತ್ತಮ ಪ್ರದರ್ಶನವಾಗಿದೆ. 2008 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಂದಿದ್ದಾಗ ಡೇಲ್ ಸ್ಟೇಯ್ನ್ ನೇತೃತ್ವದ ಹರಿಣಗಳ ಬೌಲಿಂಗ್ ಪಡೆ ಮೇಲುಗೈ ಪಡೆದು ಇನ್ನಿಂಗ್ಸ್ ಹಾಗೂ 90 ರನ್‌ಗಳ ಜಯವನ್ನು ಸಾಧಿಸಿತ್ತು.

Leave a Reply

Your email address will not be published. Required fields are marked *

error: Content is protected !!