ನಾನು ನಿಮ್ಮೆಲ್ಲರ ಸೇವಕ: ನನ್ನನ್ನು ಸಾಮಾನ್ಯನಂತೆ ಕಾಣಿ: ಆರ್.ರಾಜೇಂದ್ರ

ಮಧುಗಿರಿ: ನನ್ನ ಗೆಲುವು ಕಾಂಗ್ರೆಸ್ ಮುಖಂಡರ, ಸದಸ್ಯರ, ಹಾಗೂ ಕಾರ್ಯಕರ್ತರ ಗೆಲುವಾಗಿದೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರಕ್ಕಿಂತ ಜನರ ವಿಶ್ಯಾಸ ಮುಖ್ಯ ಇದು ನನ್ನ ಗೆಲ್ಲುವಲ್ಲ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ,ಮತ ಚಲಾಯಿಸಿದ ಸದಸ್ಯರ ಹಾಗೂ ಕಾರ್ಯಕರ್ತರ ಗೆಲುವಾಗಿದ್ದು ನಮ್ಮ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಟೀಕಿಸಿದವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ನಾಯಕರೆಲ್ಲ ಒಗ್ಗಟ್ಟಿನ ಪ್ರದರ್ಶನದಲ್ಲಿ ನಮ್ಮ ಪಕ್ಷಕ್ಕೆ ಗೆಲುವಿನ ದರ್ಶನವಾಗಿದೆ ನನ್ನ ಗೆಲುವಿಗೆ ಟೊಂಕ ಕಟ್ಟಿ ಶ್ರಮಿಸಿದ ಅವರಿಲ್ಲರಿಗೂ ಅಭಾರಿಯಾಗಿದ್ದೇನೆ ಎಂದರು.

ಕಾರ್ಯಕರ್ತರು ಮುಂಬರುವ ವಿಧಾ ಸಭೆ ಚುನಾವಣೆಯಲ್ಲಿ ಇದೆ ಒಗಟ್ಟನ್ನು ಪ್ರದರ್ಶಿಸಿ ಕೆ.ಎನ್.ರಾಜಣ್ಣ ನವರ ಗೆಲುವಿಗೆ ಶ್ರಮ ವಹಿಸಬೇಕಿದೆ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಜಿಲ್ಲೆಯಿಂದ ಕನಿಷ್ಠ 9 ಜನ ಶಾಸಕರನ್ನು ಹಾರಿಸಿ ಕಳುಹಿಸಬೇಕಿದೆ ಇದಕ್ಕಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಾಂತ ಸಂಚರಿಸಿ ಪಕ್ಷ ಸಂಘಟನೆ ಯಲ್ಲಿ ತೊಡಗಿಕೊಂಡು ಹಿರಿಯ ನಾಯಕರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ನನ್ನನ್ನು ಸಾಮಾನ್ಯನಂತೆ ನೋಡಿ: ನಾನು ಎಂ.ಎಲ್.ಸಿ.ಆಗಿ ಆಯ್ಕೆಯಾದ ಮಾತ್ರಕ್ಕೆ ವಿಶೇಷವಾಗಿ ನೋಡಬೇಕಾಗಿಲ್ಲ ಕಾರ್ಯಕರ್ತರು ನನಗೆ ಹಿಂದೆ ಯಾವ ರೀತಿ ನೋಡುತ್ತಿದ್ದೀರೊ ಅದೆ ರೀತಿ ನೋಡಿ ನಾನು ನಿಮ್ಮೆಲ್ಲರ ಸೇವಕನಂತೆ ಕೆಲಸ ಮಾಡುತ್ತೇನೆ ಜನಸೇವೆಯ ಬಗ್ಗೆ ನಮ್ಮ ತಂದೆಯವರಾದ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಆಶೀರ್ವದಿಸಿ ಜನಸೇವೆಯ ಪಾಠವನ್ನು ಕಲಿಸಿಕೊಟ್ಟಿದ್ದಾರೆ ಅವರು ನಡೆದ ದಾರಿಯಲ್ಲಿ ಸಾಗಿ ಅವರಂತೆ ಜನಪರ ಕೆಲಸಗಳನ್ನು ಮಾಡುತ್ತ ನಮ್ಮ ತಂದೆಯವರಿಗೆ ಕೀರ್ತಿ ತರುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದರು.

ಜಿ.ಪಂ.ಮಾಜಿ ಸದಸ್ಯೆ ಶಾಂತಲ ರಾಜಣ್ಣ, ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ತಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ವಿ.ನಾಗೇಶ್ ಬಾಬು, ಯುವ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಅಲೀಂ, ನಟರಾಜು, ಲಾಲಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ್ ಅಚಾರ್, ಪಾರ್ವತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ,ಎಸ್.ಆರ್.ರಾಜಗೋಪಾಲ್, ಮುಖಂಡರು ಗಳಾದ ಎಚ್.ಸಿ.ಬೈರಪ್ಪ, ಸುವರ್ಣಮ್ಮ, ವಿ.ಆರ್, ಭಾಸ್ಕರ್, ಸಾದಿಕ್, ಆದಿನಾರಾಯಣರೆಡ್ಡಿ, ಡಾ. ಸಂಜೀವ್ ಮೂರ್ತಿ,ಹೊಸಕೆರೆ ರಂಗನಾಥ್, ಕಂಬಣ್ಣ, ಬಿ.ಎನ್.ನಾಗರ್ಜುನ, ಮುಂತಾದವರು ಇದ್ದರು.error: Content is protected !!