ಗುಬ್ಬಿ: ಕೊರೋನಾ ನಿಯಂತ್ರಣಕ್ಕೆ ಜನತೆ ಸಹಕಾರ ನೀಡಬೇಕು.ಶಾಸಕ ಎಸ್. ಆರ್‌.ಶ್ರೀ ನಿವಾಸ್.ಮನವಿ.

ತಾಲೂಕಿನ ಜನತೆ ಕೊರೋನಾ ಸೊಂಕಿನಿಂದ ಮುಕ್ತ ವಾಗಬೇಕಾದರೆ ತಮ್ಮಲ್ಲಿ ಜಾಗೃತಿ ಮೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಹಾಗೂ ವ್ಯವಸ್ಥೆಯನ್ನು ನೋಡಿ ಹಾಗೂ ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ರೋಗನಿರೋಧಕ ಔಷಧಿಯನ್ನು ಸಿಂಪಡಿಸುವಂತೆ ಹಾಗೂ ಔಷಧಿ ಸಿಂಪಡಣೆಯ ಟ್ಯಾಂಕರ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ.

ಜನಪ್ರತಿನಿಧಿಗಳು ಎಷ್ಟೇ ಪ್ರಯತ್ನ ಪಟ್ಟರು ಹಿಡಿತಕ್ಕೆ ಸಿಗದ ಮಹಾಮಾರಿ ಕಾಯಿಲೆಯಾಗಿರುವುದರಿಂದ ಇದರಿಂದ ಮುಕ್ತ ರಾಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯು ಮುಂಜಾಗ್ರತೆ ವಹಿಸಬೇಕಾದ ಕರ್ತವ್ಯ ನಾಗರಿಕರ ಮೇಲಿದೆ ಎಂದು ತಿಳಿಸಿದರು.

ಪಟ್ಟಣದ ಸಮೀಪವಿರುವ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಕೊವೀಡ್ ಸೆಂಟರ್ ಭೇಟಿ ನೀಡಿ108 ಬೆಡ್ ಗಳನ್ನು ಹೊಂದಿರುವ ರೂಮ್ ಗಳನ್ನು ಪರಿಶೀಲಿಸಿ ಅವರು ಯಾವುದೇ ಕರ್ತವ್ಯ ಲೋಪವಾಗದಂತೆ ತಾಲೂಕು ದಂಡಾಧಿಕಾರಿ ಶಶಿಕಲಾ ಅವರಿಗೆ ಇಲ್ಲಿನ ಸೌಲಭ್ಯಗಳ ಬಗ್ಗೆ ಸೂಚನೆ ನೀಡಿ ಕುಡಿಯುವ ನೀರಿನ ವ್ಯವಸ್ಥೆ ಆಸನಗಳ ವ್ಯವಸ್ಥೆ ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕೆಂದು ತಿಳಿಸಿದವರು.

ತಾಲೂಕು ವೈದ್ಯಾಧಿಕಾರಿ ಬಿಂದು ಮಾಧವ ರವರಿಗೆ ಸೂಚಿಸಿದ ಶಾಸಕರು ಸರಿಯಾದ ಬೆಡ್ ಗಳ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಹ ಸ್ಥಿತಿ ಬಂದಿದೆ ತಾಲೂಕಿನ ಜನತೆಗೆ ಆರೋಗ್ಯ ದೃಷ್ಟಿಯಿಂದ ಸರಿಯಾದ ವ್ಯವಸ್ಥೆ ನೀಡಿ ಸಮಯಕ್ಕೆ ಸರಿಯಾಗಿ ರೋಗಿಗಳ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ತಾಲೂಕು.ದಂಡಾಧಿಕಾರಿ ಕಂದಾಯ ಇಲಾಖೆ ಅಧಿಕಾರಿಗಳು.ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!