ಬಂತು ಬಂತು ಅಚ್ಚೆದಿನ್ ಬಂತು: ತೈಲ ಬೆಲೆ ಏರಿಕೆ ಖಂಡಿಸಿ ಹೆಬ್ಬೂರಿನಲ್ಲಿ ಶಾಸಕ ಗೌರಿಶಂಕರ್ ರಸ್ತೆ ತಡೆದು ಪ್ರತಿಭಟನೆ.

ತುಮಕೂರು: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಹೆಬ್ಬೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ದರಣಿ ನಡೆಸಿದರು. ಇದರಿಂದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಕಿ ಮಿ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ರು.

ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್ ನಾನು ಕೂಡ ಪ್ರಧಾನಿ ಮೋದಿಯರ ಮೇಲೆ ಅಭಿಮಾನ ಇಟ್ಟುಕೊಂಡಿದ್ದೆ ಅಚ್ಚೆದಿನ್… ಬರುತ್ತದೆ ಎಂದು ನಾವು ಕೂಡ ಕಾದಿದ್ದೆವು, ಆದರೆ ಗ್ಯಾಸ್, ಡಿಸೆಲ್ ಪೆಟ್ರೋಲ್ ನಿರಂತರವಾಗಿ ಏರಿಕೆಯಾಗ್ತಿದೆ. ಸಬ್ಸಿಡಿಯನ್ನು ಕೂಡ ನಿಲ್ಲಿಸಿದ್ದಾರೆ.

ಗೊಬ್ಬರ,ಪಿವಿಸಿ ಪೈಪ್ ಬೆಲೆ ಏರಿಕೆಯಾದ್ರೆ ಮೊದಲೆ ಬರಗಾಲದಿಂದ ರೈತರು ಬಳಲುತ್ತಿರುವ ರೈತರು ಎಲ್ಲಿಗೆ ಹೋಗಬೇಕು, ರೈತರ ಪರ ಸರ್ಕಾರ ಎಂದು ರೈತರ ಬೇಡಿಕೆಗಳನ್ನ ಯಾಕೆ ಈಡೆರಿಸುತ್ತಿಲ್ಲ ಎಂದು ಪ್ರಶ್ನಿಸಿದ್ರು.

ನಮ್ಮ ಭಾರತ ದೇಶ ಇನ್ನೂ ಅಭಿವೃದ್ದಿಯಾಗಿಲ್ಲ,ಅಭಿವೃದ್ದಿಯಾಗುತ್ತಿದೆ ನಿಮ್ಮ ಮೇಲೆ ಜನರು ದೊಡ್ಡ ಕನಸು ಇಟ್ಟುಕೊಂಡಿದ್ದಾರೆ ಅದನ್ನು ಹುಸಿಗೊಳಿಸಬೇಡಿ ಎಂದು ಪ್ರಧಾನಿ‌ ಮೋದಿಯವರ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದರು.

Leave a Reply

Your email address will not be published. Required fields are marked *

error: Content is protected !!