ನ್ಯೂಯಾರ್ಕಿನ ಹೊಸ ಅಪಾರ್ಟ್‍ಮೆಂಟ್‍ಗೆ ತೆರಳಿದ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು

ನ್ಯೂಯಾರ್ಕ್: ಮಿಸ್ ಯೂನಿವರ್ಸ್ ಭಾರತದ ಹರ್ನಾಜ್ ಸಂಧು ತಮ್ಮ ಫ್ಯಾಷನ್ ಜಗತ್ತಿನ ಪಯಣ ಶುರುಮಾಡಿದ್ದು, ತಮ್ಮ ಕನಸಿನ ನಗರಿ ನ್ಯೂಯಾರ್ಕಿನಲ್ಲಿನ ಹೊಸ ಅಪಾರ್ಟ್‍ಮೆಂಟ್‍ಗೆ ತೆರಳಿದ್ದಾರೆ.

ಮಿಸ್ ಯೂನಿವರ್ಸ್ ಪುಟದಲ್ಲಿ ನ್ಯೂಯಾರ್ಕಿಗೆ ತೆರಳಿ ಅಲ್ಲಿನ ಹೊಸ ಅಪಾರ್ಟ್‍ಮೆಂಟಿನ ಬಾಗಿಲಿನ ಕೀ ತೆಗೆಯುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.

ಇನ್ನು ಈ ಬಗ್ಗೆ ಹರ್ನಾಜ್ ಸಂಧು ಕೂಡ ಹಂಚಿಕೊಂಡು ಕೊನೆಗೂ ನಾನಿಲಿದ್ದೇನೆ. ನನ್ನ ಹೊಸ ಅಪಾರ್ಟ್‍ಮೆಂಟ್ ನೋಡಲು ನಿಮಗೆ ಕುತೂಹಲವೇ? ನನಗೆ ಕಾಯಲು ಸಾಧ್ಯವಿಲ್ಲ ಎಂದು ತಮ್ಮ ಇನ್‍ಸ್ಟಾಗ್ರಾಮ್ ಪೇಜಿನಲ್ಲಿ ಹೇಳಿದ್ದಾರೆ. ನಂತರ ಬಾಗಿಲು ತೆರೆಯುತ್ತಿರುವ ಒಳಗೆ ಹೋಗಿ ಖುಷಿಪಟ್ಟಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸತತ 21 ವರ್ಷಗಳ ಬಳಿಕ ಮಿಸ್ ಯೂನಿವರ್ಸ್ ಕಿರೀಟ ಧರಿಸಿ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ.

error: Content is protected !!