ಬೆಂಗಳೂರು: ಚಲ್ಲಘಟ್ಟದಲ್ಲಿ ನೆಲಮಟ್ಟದ ಮೆಟ್ರೋ ಡಿಪೋ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ, 400 ಕೋಟಿ ರೂ. ಉಳಿತಾಯ

ಬೆಂಗಳೂರು: ಚಲ್ಲಘಟ್ಟದಲ್ಲಿ ಎಲಿವೇಟೆಡ್ ಡಿಪೋ ನಿರ್ಮಾಣಕ್ಕೆ ತಗಲುವ ಭಾರಿ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ನೆಲಮಟ್ಟದಲ್ಲಿಯೇ ಮೆಟ್ರೋ ಡಿಪೋ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ಬರೋಬ್ಬರಿ 400 ಕೋಟಿ ರೂಪಾಯಿ ಉಳಿತಾಯವಾಗಲಿದೆ.

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ಸಾರಿಗೆ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ಬುಧವಾರ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಅಟ್-ಗ್ರೇಡ್ ವಿನ್ಯಾಸಗಳ ತಯಾರಿ ತಕ್ಷಣವೇ ಪ್ರಾರಂಭವಾಗಲಿದೆ.

ಇದನ್ನು ಓದಿ: ಕೆಂಗೇರಿಯಲ್ಲಿ ಭೂಮಿ ಕೊರತೆ: ಚಲ್ಲಘಟ್ಟ ಜನತೆಗೆ ಅದೃಷ್ಟವಶಾತ್ ಸಿಕ್ಕ ಬೆಂಗಳೂರು ಮೆಟ್ರೋ ಸಂಪರ್ಕ!

ಪಶ್ಚಿಮ ಬೆಂಗಳೂರಿನ ಮೆಟ್ರೋ ಡಿಪೋ ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ಬೈಯಪ್ಪನಹಳ್ಳಿ-ಕೆಂಗೇರಿ ಮಾರ್ಗದ ಎಲ್ಲಾ ರೈಲುಗಳು(ನಂತರ ಚಲ್ಲಘಟ್ಟದವರೆಗೆ ವಿಸ್ತರಿಸಲಾಗುವುದು) ಈ ಡಿಪೋದಲ್ಲಿಯೇ ಸ್ಥಿರಗೊಳಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ನಗರ ಭೂ ಸಾರಿಗೆ ನಿರ್ದೇಶನಾಲಯ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಆರಂಭದಲ್ಲಿ ಎಲಿವೇಟೆಡ್ ಡಿಪೋ ನಿರ್ಮಿಸುವ ಆಯ್ಕೆಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ ಇದಕ್ಕೆ ಭಾರಿ ವೆಚ್ಚವಾಗುತ್ತದೆ ಎಂಬ ಉದ್ದೇಶದಿಂದ ನಾವು ಅದನ್ನು ನೆಲಮಟ್ಟದಲ್ಲಿ ನಿರ್ಮಿಸಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ. ನಾವು ಈಗ ಡಿಪೋಗೆ ಸುಮಾರು 500 ಕೋಟಿ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಬೇಕಾಗುತ್ತದೆ. ಎಲಿವೇಟೆಡ್ ಡಿಪೋ ಡಿಪೋಗೆ ಸುಮಾರು 900 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಈ ನಿರ್ಧಾರದಿಂದ 400 ಕೋಟಿ ಉಳಿತಾಯವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲಿವೇಟೆಡ್ ಡಿಪೋ ಕೆಳಗಿನ ಮಹಡಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಡಿಪೋಗಳನ್ನು ಹೊಂದುವುದು ಆರಂಭಿಕ ಯೋಜನೆಯಾಗಿತ್ತು. ಆದರೆ ಹಲವು ಪಿಲ್ಲರ್‌ಗಳ ಮೂಲಕ ಬಸ್‌ಗಳು ಸಂಚರಿಸಲು ಕಷ್ಟವಾಗುತ್ತದೆ. ಇದಲ್ಲದೆ, ಎರಡೂ ನಿಗಮಗಳು ಹತ್ತಿರದ ಕೆಂಗೇರಿಯಲ್ಲಿ ತಮ್ಮ ಡಿಪೋಗಳನ್ನು ಹೊಂದಿವೆ” ಎಂದು ಮೂಲಗಳು ತಿಳಿಸಿವೆ.

error: Content is protected !!