ನಮ್ಮ ನೀರು, ನಮ್ಮ ಹಕ್ಕಿಗಾಗಿ ಜ. 9 ರಿಂದ ಬೃಹತ್ ಪಾದಯಾತ್ರೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು: ಲಕ್ಷಾಂತರ ಜನರ ದಾಹ ತೀರಿಸುವ, ಕೃಷಿಗೆ ನೆರವಾಗುವ ಕಾವೇರಿ ನೀರಿಗಾಗಿ ಕಾಂಗ್ರೆಸ್ ನಿಂದ ಜನವರಿ 9 ರಿಂದ ಮೇಕೆದಾಟು ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಇಂದು ತಲಕಾವೇರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಕಾವೇರಿ ನಮ್ಮವಳು ಎನ್ನುವ ಕೂಗು ಕೇಳಿದಾಗ ನಮ್ಮೊಳಗಿನ ಹೋರಾಟಗಾರ ಎಚ್ಚರವಾಗುತ್ತಾನೆ. ಮೇಕೆದಾಟು ಪಾದಯಾತ್ರೆಗಾಗಿ ಕೊಡಗಿನ ಜನರಿಂದ ಅಪಾರ ಬೆಂಬಲ ವ್ಯಕ್ತವಾಗಿರುವುದಾಗಿ ತಿಳಿಸಿದ್ದಾರೆ.

ವಿಡಿಯೋವೊಂದನ್ನು ಹಂಚಿಕೊಂಡಿರುವ ಡಿಕೆಶಿ, ಇಡೀ ರಾಜ್ಯ ಕುಡಿಯುವ ನೀರಿನ ಬವಣೆಯಿಂದ ಪರಿತಪಿಸುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣವಾದರೆ, ಜನರ ನೀರಿನ ಬವಣೆ ನೀಗಲಿದೆ. ರೈತರ ಭೂಮಿ ಹಸಿರಾಗಲಿದೆ. ನಮ್ಮ ನೀರು, ನಮ್ಮ ಹಕ್ಕಿಗಾಗಿ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ವೆಬ್ ಸೈಟ್ MekedatuNammaHakku.orgಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

error: Content is protected !!