ಹುಬ್ಬಳ್ಳಿ: ಸಾಂಬಾರು ಮಂಡಳಿ ಅಧ್ಯಕ್ಷ ರಾಗಿ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅಧಿಕಾರ ಸ್ವೀಕಾರ.

ಕರ್ನಾಟಕ ರಾಜ್ಯ ಸಾಂಬಾರು ಮಂಡಳಿ ಅಧ್ಯಕ್ಷರಾಗಿ ಇಂದು ತುರುವೇಕೆರೆ ಶಾಸಕರಾದ ಎ.ಎಸ್.ಜಯರಾಮ್ (ಮಸಾಲೆ ಜಯರಾಂ) ಅವರು ಮಂಡಳಿಯ ಪ್ರಧಾನ ಕಛೇರಿ ಹುಬ್ಬಳ್ಳಿ ಯ ನೇಕಾರ ಭವನದಲ್ಲಿ ರಾಜ್ಯ ಸಚಿವ ದರ್ಜೆ ಯಸ್ಥಾನಮಾನದೊಂದಿಗೆ ಅಧಿಕಾರ ಸ್ವೀಕರಿಸಿದರು.

ಮಂಡಳಿಯ ಅಭಿವೃದ್ಧಿಗೆ ಬದ್ದ. ನೂತನವಾಗಿ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಶಾಸಕ ಮಸಾಲೆ ಜಯರಾಂ ಸಾಂಬಾರು ಮಂಡಳಿಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಮಂಡಳಿಯ ಅಭಿವೃದ್ಧಿಗೆ ಶ್ರಮವಹಿಸುವುದಾಗಿ ಭರವಸೆ ನೀಡಿದರು.

ಕಾರ್ಯ ಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಸಿ.ಎಸ್.ಪುರ ವಿ ಎಸ್ ಎಸ್ ಎನ್ ಅಧ್ಯಕ್ಷ ನಾಗರಾಜ್. ಬಿಜೆಪಿ ಮುಖಂಡ ಮಾ.ಗ್ರಾ.ಪಂ.ಅಧ್ಯಕ್ಷ ಇಡಗೂರು ರವಿ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!