ತಿಪಟೂರು :ಮರಾಠಿಗರು ಪ.ಜಾ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆ ಸ್ಪರ್ಧೆ: ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿಗಳಿಗೆ ದಲಿತ ಮುಖಂಡರ ಒತ್ತಾಯ.

ತಿಪಟೂರು: ಮರಾಠಿಗರು ನಕಲಿ ದಾಖಲೆ ಸೃಷ್ಠಿಸಿ ತಹಶಿಲ್ದಾರ್ ರಿಂದ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರವನ್ನ ವಂಚಿಸಿದ್ದಲ್ಲದೆ ಗ್ರಾಮ ಪಂಚಾಯ್ತಿ ಉಪಚುನಾವಣೆಯಲ್ಲಿ ಪ.ಜಾ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ ಇವರ ನಾಮಪ್ರವನ್ನ ತಿರಸ್ಕರಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ದಲಿತ ಮುಖಂಡ ನಾಗತಿಹಳ್ಳಿ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಹೊನ್ನವಳ್ಳಿ  ಗ್ರಾಮ ಪಂಚಾಯ್ತಿಗೆ ಉಪಚುನಾವಣೆ ನಡೆಯುತ್ತಿದ್ದು ಹೊನ್ನವಳ್ಳಿ ಗ್ರಾಮದ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರಕ್ಕೆ ಸಾಮಾನ್ಯ ವರ್ಗದ ಮಹಿಳೆ ಮರಾಠಿ ಜನಾಂಗದ ಚಂದ್ರೋಜಿರಾವ್ ಎಂಬುವರ ಮಗಳು ಶ್ರೀಮತಿ ಗೀತಾ ಸ್ಪರ್ಧೆ ಮಾಡಿದ್ದಾರೆ. ಇವರ ಶಾಲಾ ದಾಖಲಾತಿ ಸಂದರ್ಭದಲ್ಲಿ ಭಾರತೀಯ ಹಿಂದೂ ಮರಾಠಿ ಎಂದು ನಮೂದಿಸಲಾಗಿದೆ. ತಾನು ವಿದ್ಯಾಭ್ಯಾಸ ಮಾಡಿದ್ದರು ತನ್ನ ಮಗಳ ಶಾಲಾ ದಾಖಲಾತಿಯಲ್ಲಿ ಹಿಂದೂ ಮರಾಠಿ ಜಾತಿಯನ್ನ ಅಳಿಸಿ ಶಿಳ್ಳೆಕ್ಯಾತ ಜಾತಿ ಎಂದು ತಿದ್ದಿದ್ದಾರೆ. ನಕಲಿ ದಾಖಲೆಯನ್ನ ನೀಡಿ 2015ರಲ್ಲಿ ತಹಶಿಲ್ದಾರರಿಂದ ಶಿಳ್ಳೆಕ್ಯಾತ ಜಾತಿ ಎಂದು ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಇಷ್ಟೇ ಅಲ್ಲದೆ 2015 ರಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಇದೇ ದಾಖಲೆಗಳನ್ನ ನೀಡಿ ಪ. ಜಾ ಮೀಸಲು ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಗೆದ್ದಿದ್ದರು. ಅಂದು ಸಹ ಇವರ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಭಾರಿ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಿದ್ದು ಚುನಾವಣಾಧಿಕಾರಿಗಳು ಇವರ ನಾಮಪತ್ರವನ್ನ ತಿರಸ್ಕರಿಸಿ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಮೂರ್ತಿ ಒತ್ತಾಯಿಸಿದ್ದಾರೆ.   

ಮರಾಠಿಗರು ಕರ್ನಾಟಕದಲ್ಲಿದ್ದರೂ ಕನ್ನಡ ನೆಲ ಜಲ ಭಾಷೆಯನ್ನ ದ್ವೇಷಿಸುತ್ತಿದ್ದು ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡದ ಭಾವುಟವನ್ನು ಸುಟ್ಟು ಹಾಕಿ ವಿಕೃತಿ ಮೆರೆದಿದ್ದಾರೆ. ಕರ್ನಾಟಕದಲ್ಲಿ ವಾಸವಿರುವ ಮರಾಠಿಗರಲ್ಲಿ ಕೆಲವರು ಭಾರತೀಯ ಹಿಂದು ಮರಾಠಿ ಪ್ರವರ್ಗ ಬಿ ಗೆ ಸೇರಿದವರಾಗಿದ್ದರೂ ನಕಲಿ ದಾಖಲೆಗಳನ್ನ ಸೃಷ್ಠಿಸಿ ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನ ಪಡೆದು ಪರಿಶಿಷ್ಠರಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನ ಕಬಳಿಸುತ್ತಿದ್ದಾರೆ, ಚುನಾವಣೆಗಳಲ್ಲಿ ಸ್ಪರ್ಧಿಸಿ ಕನ್ನಡಿಗರನ್ನೇ ಆಳುತ್ತಿದ್ದಾರೆ ಈಗಾಗಿ ಕೂಡಲೇ ಸರ್ಕಾರ ಕರ್ನಾಟಕದಲ್ಲಿ ನೆಲೆಸಿರುವ ಮರಾಠಿಗರ ಎಲ್ಲಾ ಜಾತಿ ಪ್ರಮಾಣ ಪತ್ರಗಳನ್ನ ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!