ಬೆಂಗಳೂರು: ಮಹಾವೀರ ಹನುಮ’ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ
ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ನಾಲ್ಕು ನಿಮಿಷ ಮೂವತ್ತು ಸಕೆಂಡ್ ಇರುವ
ವಿಡಿಯೋ ಸಾಂಗ್ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕ ಸೂರಪ್ಪ ಬಾ
ಬು ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಅಂತರರಾಷ್ಟ್ರೀಯ ಬಾಲನಟಿ ಪ್ರಶಸ್ತಿ ವಿಜೇತೆ ಋತುಸ್ಪರ್ಶ ಗೀತೆಗೆ ಹೆಜ್ಜೆ ಹಾಕಿದ್ದಾರೆ.
ಈ ಕುರಿತಂತೆ ಮಾತನಾಡಿದ ನಿರ್ದೇಶಕ ರಾಘವಸೂರ್ಯ ಹಾಡನ್ನು ಅಂಜನಾದ್ರಿ ಬೆಟ್ಟ, ಆನೆಗುಂದಿಯ ಲಕ್ಷೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಚಿಂತಾಮಣಿ ಮಠದಲ್ಲಿ ಚಿತ್ರೀಕರಿಸಿದ್ದು ಛಾಲೆಂಜ್ ಹಾಗೂ ಸಾಹಸವಾಗಿತ್ತು. ಜಾಕಿಚಾನ್ ಅಭಿನಯದ ’ದ ಮಿಥ್’ ಸಿನಿಮಾದ ಶೂಟಿಂಗ್ ಅಲ್ಲೇ ನಡೆದಿದ್ದು, ನಂತರ ನಾವು ಹೋಗಿರುವುದು ಭಾರತೀಯ ಚಿತ್ರರಂಗದಲ್ಲೆ ಮೊದಲು ಎನ್ನಬಹುದು.
ಹಂಪಿ ಪ್ರಾಧಿಕಾರದವರು ವಿಶೇಷ ಅನುಮತಿಯೊಂದಿಗೆ, 105 ತಂತ್ರಜ್ಞರ ಜತೆಗೆ 575 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಸುಲಭದ ಮಾತಲ್ಲ. ಅಂದು ಮಳೆ ವಿಪರೀತ ಬರುತ್ತಿತ್ತು. ಮಹಾಮಂಗಳಾರತಿ ಮುಗಿದ ಕ್ಷಣದಲ್ಲೇ ಸೂರ್ಯದೇವ ಕರುಣೆ ತೋರಿಸಿದ. ಅರ್ಥಾತ್ ಬಿಸಲು ಬಂತು. ಇದರೊಂದಿಗೆ ಪ್ರಕೃತಿಯು ಸಹಕಾರ ನೀಡಿತು.
ರಾಘವೇಂದ್ರ ರೆಡ್ಡಿ ನಿರ್ಮಾಪಕರಾಗಿ ಪ್ರಾರಂಭದಿಂದಲೂ ರಾಜಿಯಾಗದೆ ದೃಶಗಳು ಚೆನ್ನಾಗಿ ಬರಲೆಂದು, ನಾನು ಏನೇ ಕೇಳಿದರೂ ಇಲ್ಲ ಎನ್ನದೆ ಸಹಕಾರ ನೀಡಿದ್ದರಿಂದಲೇ ಫಲಿತಾಂಶ ಚೆನ್ನಾಗಿ ಬಂದಿದೆ. ಈಗಾಗಲೇ ಎರಡು ಕಥೆಗಳು ಸಿದ್ದಗೊಂಡಿದೆ. ಅದರಲ್ಲಿ ಕಲ್ಕತ್ತ ಹಿನ್ನಲೆ ಇರುವ ಹಾಗೂ ಕರ್ನಾಟಕ-ಆಂಧ್ರ ಬಾರ್ಡರ್ ವಿಷಯಗಳನ್ನು ಒಳಗೊಂಡ ’ಸರಹದ್ದು’ ಸ್ಕ್ರೀನ್‌ಪ್ಲೇ ಸಿದ್ದಗೊಂಡಿದೆ ಎಂದರು.
ಇದಕ್ಕೂ ಮುನ್ನ ಮೂರು ನಿಮಿಷದ ದೃಶ್ಯರೂಪದಲ್ಲಿ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ರಾಮ ಹನುಮನ ಭೇಟಿ ಹಾಗೂ ಕಿಷ್ಕಿಂದಾ ಭಾಗಕ್ಕೆ ರಾಮ ಲಕ್ಷಣನೊಂದಿಗೆ ಬಂದಿದ್ದ ದೃಶ್ಯರೂಪಣ ಎಲ್ಲರ ನಾಡಿಮಿಡಿತಕ್ಕೆ ಹತ್ತಿರವಾಗಿ ನೆರೆದಿದ್ದವರಿಗೆ ಭಕ್ತಿಭಾವ ಹೆಚ್ಚಾಗುವಂತೆ ಮಾಡಿದ್ದು ಕಾರ್ಯಕ್ರಮದ ಮತ್ತೋಂದು ವಿಶೇಷವಾಗಿತ್ತು. ರಾಮನಾಗಿ ರೋಹಿತ್‌ರೆಡ್ಡಿ, ಲಕ್ಷ್ಮಣನಾಗಿ ರಾಜ್, ಅಂಗದರಾಗಿ ಜೀವನ್, ಸೀತೆಯಾಗಿ ಪ್ರಿಯಾ ನಟಿಸಿದ್ದಾರೆ.
ಸಾಯಿಸರ್ವೇಶ್ ಸಾಹಿತ್ಯ, ಸಂಗೀತ ಸಂಯೋಜಿಸುವ ಜತೆಗೆ ಪ್ರಥಮ ಅನುಭವ ಎನ್ನುವಂತೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಛಾಯಾಗ್ರಹಣ ರಂಗಸ್ವಾಮಿ, ನೃತ್ಯ ಕಂಬಿರಾಜು ಅವರದಾಗಿದೆ. ಸುಂದರ ಸಮಾರಂಭದಲ್ಲಿ ಧರ್ಮದರ್ಶಿಗಳು, ಗುರುರಾಘವೇಂದ್ರ ಮಠದ ಹರಿಕೃಷ್ಣ ಕೆಂತೂರ್, ಮಕ್ಕಳ ಆಯೋಗದ ಅಧ್ಯಕ್ಷ ಮರಿಸ್ವಾಮಿ, ವಕೀಲೆ, ಉಚ್ಚ ನ್ಯಾಯಾಲಯ, ರಾಜರಾಜೇಶ್ವರಿ.ಎಸ್, ಲೋಕಯುಕ್ತ ಡಿವೈಎಸ್‌ಪಿ ರಾಜೇಶ್.ಎಲ್.ವೈ,ವಿತರಕ ರಮೇಶ್‌ಬಾಬು, ನಟ ವಿಕ್ಟರಿವಾಸು, ಅರ್ಜುನ್‌ದೇವ್ ಮುಂತಾದವರು ಉಪಸ್ತಿತರಿದ್ದರು
.