ಕೊರೋನಾ ಲಸಿಕೆ ಹಾಕಿಸಿಕೊಂಡ ಸಚಿವ ಮಾದುಸ್ವಾಮಿ

ತುಮಕೂರು: ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿ ಇಂದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೊರೊನಾ ಲಸಿಕೆ ಪಡೆದರು.

ಬಳಿಕ ಮಾತನಾಡಿದ ಅವರು ಭಾರತ ಸರ್ಕಾರದ ನಿಯಮದಂತೆ ನಾನು ಕೂಡ ಇಂದು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದೆನೆ. 60 ವರ್ಷ ಆದ ಎಲ್ಲರಿಗೂ ವಿನಂತಿ ಮಾಡುತ್ತೆನೆ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ದಯಮಾಡಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದರು.

ಲಸಿಕೆ ವಿತರಣೆಯಲ್ಲಿ ತುಮಕೂರು ಜಿಲ್ಲೆ ಈಗಾಗಲೇ ಒಂದನೇ ಸ್ಥಾನದಲ್ಲಿದೆ ಕೇಂದ್ರದಿಂದ ತಂಡ ಬಂದು ನಮ್ಮ ಪ್ರಗತಿಯನ್ನ ಶ್ಲಾಘಿಸಿ ಹೋಗಿದೆ. ಸೋಮವಾರದಿಂದ 45 ವರ್ಷ ದಾಟಿದವರಿಗೂ ಕೋರೊನಾ ಲಸಿಕೆ ಹಾಕಲಿದ್ದಾರೆ, ಹೃದಯ ರೋಗ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈಧ್ಯರ ಸಲಹೆ ಪಡೆದು ಲಸಿಕೆಯನ್ನ ಹಾಕಿಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ನಾಗೇಂದ್ರಪ್ಪ ಸೇರಿದಂತೆ ಹಲವರು ಜೋತೆಯಲ್ಲಿದ್ದರು.

error: Content is protected !!