ಗುಬ್ಬಿ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ್ರೆ.ತಕ್ಕ ಶಿಕ್ಷೆ ಅನುಭವಿಸ್ತೀರಾ.ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ.

ಗುಬ್ಬಿ ತಾಲೂಕಿನ ಸಾರ್ವಜನಿಕರ ಜೀವದ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಧುಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚನೆನೀಡಿದರು.

ಕೊರೋನಾ ಸೊಂಕಿತರ ಸಮಗ್ರ ಮಾಹಿತಿ ನೀಡದ ತಾಲೂಕು ಆರೋಗ್ಯ ಅಧಿಕಾರಿಗೆ ಬಿಸಿ ಮುಟ್ಟಿಸಿದ ಸಚಿವರು.ಸಭೆಗೆ ಗುಬ್ಬಿ ತಾಲೂಕು ಪಂಚಾಯಿತಿ ಆವರಣದಲ್ಲಿ ಕೋವಿಡ್ ನಿಯಂತ್ರಣ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ವೈದ್ಯಾಧಿಕಾರಿ ಬಿಂದುಮಾಧವ ರವರ ಬಗ್ಗೆ ಖಡಕ್ ಎಚ್ಚರಿಕೆ ನೀಡಿ ಸರಿಯಾದ ಮಾಹಿತಿಯನ್ನು ನೀಡದೆ 7765 ಮಂದಿ ಸೋಂಕಿತರು ಇದ್ದಾರೆ ಎಂಬ ಮಾಹಿತಿಯನ್ನು ನೀಡಿ ದಾರಿ ತಪ್ಪಿಸುತ್ತಿರುವುದು ಎಷ್ಟು ಸಮಂಜಸ ಎಂದ ಅವರು ಕೊರೋನಾ ಪಾಸಿಟಿವ್ ಬಂದಂತಹ 2800 ಜನ ಎಂಬ ಮಾಹಿತಿಯನ್ನು ನೀಡಿ 4000 ಸ್ಲಾಬ್ ಚೆಕ್ಕನ್ನು ಮಾಡುತ್ತೇವೆಂಬ ಅಂಶವನ್ನು ನೀಡಿರುವುದು ಒಂದೆಡೆಯಾದರೆ 1000 ಸೋಂಕಿತ ವ್ಯಕ್ತಿಗಳು ಎಲ್ಲಿದ್ದಾರೆ ಎಂದು ಕಿಡಿಕಾರಿದ ಅವರು ಸರ್ಕಾರವು ವೈದ್ಯರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರೂ ಸಹ ಸ್ಥಳದಲ್ಲಿ ವಾಸಿಸದೇ ದಿನನಿತ್ಯ ಓಡಾಡುವ ಪರಿಪಾಠವನ್ನು ತಾಲೂಕಿನ ಅಧಿಕಾರಿಗಳು ಬಿಡಬೇಕು ಇಂತಹ ಸಂಕಷ್ಟ ಸಮಯದಲ್ಲಿ ಸ್ಥಳದಲ್ಲಿ ವಾಸಿಸುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಹೆರಿಗೆಗೆ ಬರುವವರನ್ನು ತುಮಕೂರು ಆಸ್ಪತ್ರೆಗೆ ಕಳುಹಿಸುವ ವೈದ್ಯರು.ರಾತ್ರಿ ವೇಳೆಯಲ್ಲಿ ಹೇರಿಗೆಗೆ ಬರುವಂತಹ ಹೆಣ್ಣು ಮಕ್ಕಳನ್ನು ತುಮಕೂರಿಗೆ ವರ್ಗಾಯಿಸಲು ಕಾರಣವೇನು ರಾತ್ರಿ ಪಾಳ್ಯದ ಡಾಕ್ಟರ್ಗಳು ಇಲ್ಲದೆ ಇರುವುದು ಹಾಗೂ ಮಹಿಳಾ ನರ್ಸ್ ಗಳು ಮಾತ್ರ ಇದ್ದು ಹೆರಿಗೆ ಬಂದಂತಹ ಹೆಂಗಸರನ್ನು ತುಮಕೂರಿಗೆ ಕಳಿಸುತ್ತಿರುವುದು ಇಲ್ಲಿನ ಆಸ್ಪತ್ರೆಯ ಅವ್ಯವಸ್ಥೆಗೆ ವ್ಯವಸ್ಥೆಯ ಕಾರಣವಾಗುತ್ತದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು. ಸರಿಯಿಲ್ಲ.ಪೊಲೀಸ್ ಇಲಾಖೆ ಬಗ್ಗೆ ಮಾತನಾಡಿ ಪ್ರತಿನಿತ್ಯ ಇದೇ ದಾರಿಯಲ್ಲಿ ಓಡಾಡುವುದರಿಂದ ಗುಬ್ಬಿಯಲ್ಲಿ ಲಾಕ್ಡೌನ್ ಆಗಿದೆಯೇ ಎಂಬ ಅನುಮಾನ ಕಾಡುತ್ತಿದೆ ಪೊಲೀಸ್ ಅಧಿಕಾರಿಗಳು ದಾರಿಯಲ್ಲಿ ಬ್ಯಾರಿಕೇಟ್ ಹಾಕಿದ್ದು ಬಿಟ್ಟರೆ ಸಾರ್ವಜನಿಕರು ಯಾವುದೇ ಅಂತರವಿಲ್ಲದೆ ಓಡಾಡುತ್ತಿದ್ದಾರೆ ಇದರಿಂದ ಕರೋನಾ ಕಾಯಿಲೆ ಹೋಗುವುದಾದರೂ ಹೇಗೆ ಇನ್ನು ಮುಂದೆ ಯಾವುದೇ ಮುಲಾಜಿಗೆ ಒಳಗಾಗದೆ ಸರಕಾರದ ಗೈಡ್ಲೆಂಸ್ ಬಗ್ಗೆ ಹೆಚ್ಚಿನ ಒತ್ತು ನೀಡಿ ಸಾರ್ವಜನಿಕರನ್ನು ಓಡಾಡದಂತೆ ನಿಗಾವಹಿಸಬೇಕು ಎಂದು ಎಚ್ಚರಿಸಿದರು.

ಸರಿಯಾದ ಮಾಹಿತಿಯನ್ನು ನೀಡಿದ ಕಾರಣ ಸೋಮವಾರ ಮುಂದೂಡಲಾಯಿತು ಸಭೆಯಲ್ಲಿ ಸಂಸದ ಬಸವರಾಜ್ ಜಿಲ್ಲಾಧಿಕಾರಿ ವೈ.ಸ್.ಪಾಟೀಲ್ .ಪೊಲೀಸ್ ವರಿಷ್ಠಾಧಿಕಾರಿ ಸಿಇಓ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!