ಮಧುಗಿರಿ ಶೈಕ್ಷಣಿಕೆ ಜಿಲ್ಲೆ 3ನೇ ಸ್ಥಾನ

ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ವರ್ಷ ನಡೆಸಿದ ಫೋನ್-ಇನ್ ಕಾರ್ಯಕ್ರಮದಿಂದ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೇ ೩ನೇ ಸ್ಥಾನ ಪಡೆಯಲು ಸಾಧ್ಯವಾದ ಹಿನ್ನೆಲೆಯಲ್ಲಿ ಪ್ರಸಕ್ತ 2020-21ನೇ ಸಾಲಿನಲ್ಲಿಯೂ ಫಲಿತಾಂಶವನ್ನು ಉತ್ತಮಪಡಿಸುವ ದೃಷ್ಠಿಯಿಂದ ಮಾರ್ಚ್ 24ರಂದು ವಿದ್ಯಾರ್ಥಿಗಳಿಗಾಗಿ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

     ಈ ಫೋನ್-ಇನ್ ಕಾರ್ಯಕ್ರಮವು ಮಾರ್ಚ್ 24 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು,   ಪ್ರತಿ ದಿನ ಎರಡು ವಿಷಯಗಳಂತೆ ವಿದ್ಯಾರ್ಥಿಗಳ ಕ್ಷಿಷ್ಠಕರ ಪ್ರಶ್ನೆಗಳಿಗೆ  ಅನುಭವಿ ಸಂಪನ್ಮೂಲ ಶಿಕ್ಷಕರಿಂದ   ಉತ್ತರ ನೀಡುವ ವ್ಯವಸ್ಥೆ ಮಾಡಲಾಗಿದೆ.    ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಪರೀಕ್ಷಾ ಭಯ ಹೋಗಲಾಡಿಸಲು   ಸಲಹೆ ನೀಡಲಾಗುವುದು. 

ಬುಧವಾರ ಮಾ.೨೪ರಂದು ನಡೆದ ಫೋನ್ಇನ್ ಕಾರ್ಯಕ್ರಮದಲ್ಲಿ ಪ್ರಥಮ ಭಾಷೆ ಕನ್ನಡ ವಿಷಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲಾಯಿತುಶಿರಾ ತಾಲೂಕು ಬರಗೂರು ಪ್ಲಾನೆಟ್ ಪಬ್ಲಿಕ್ ಸ್ಕೂಲ್ ಸತ್ಯಶ್ರೀ, ಗೋಣಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಚನ್ನಕೇಶವ ಹಾಗೂ ಸಂತೋಷ್; ಪಾವಗಡ ತಾಲೂಕು ಎಂಜಿಎಂ ಪ್ರೌಢಶಾಲೆಯ ಸ್ಫೂರ್ತಿ ಹಾಗೂ ಮರಿದಾಸನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಾಗೀಶ್; ಮಧುಗಿರಿ ತಾಲೂಕು ಬ್ರಹ್ಮ ಸಮುದ್ರದ ಸುವರ್ಣಮುಖಿ ಶಾಲೆಯ ಶೋಭಾರಾಣಿ ಹಾಗೂ ನಿಸರ್ಗ ಶಾಲೆಯ ಹರ್ಷಿತ್; ಕೊರಟಗೆರೆ ತಾಲೂಕು ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪುನೀತ್ಕುಮಾರ್; ದಂಡಿನದಿಬ್ಬ ಸಿದ್ಧಾರ್ಥ ಪ್ರೌಢಶಾಲೆಯ ಕಮಲ ಹಾಗೂ ಮಹಾಲಕ್ಷ್ಮಿ, ತರೂರಿನ ವೇದಾವತಿ ಹಾಗೂ ಮತ್ತಿತರ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಬಹುತೇಕ ಪ್ರಶ್ನೆಗಳು ನೀಲಿನಕಾಶೆ, ನಿಗಧಿಪಡಿಸಿದ ಅಂಕಗಳು, ವ್ಯಾಕರಣಾಂಶಗಳಿಗೆ ಸಂಬಂಧಪಟ್ಟಿದ್ದವುವಿಶೇಷವಾಗಿ ಕೆಲವು ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಹೋಬಳಿವಾರು ಸಂವಾದ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಮನವಿ ಮಾಡಿದರು

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಎನ್. ಅಶ್ವತ್ಥನಾರಾಯಣ, ವಿಷಯ ಪರಿವೀಕ್ಷಕ ಚಿತ್ತಯ್ಯ, ಮೋಹನ್ಕುಮಾರ್, ಎಂ.ವೆಂಕಟರಾಮುಮಲ್ಲಿಕಾರ್ಜುನಯ್ಯ, ಸಂಪನ್ಮೂಲ ಶಿಕ್ಷಕರಾಗಿ  ಸಚ್ಚಿದಾನಂದಮೂರ್ತಿ, ಧರ್ಮೇಂದ್ರಪ್ರಸಾದ್, ನೇತ್ರಾವತಿ, ರಾಘವೇಂದ್ರ, ಶಿವಕುಮಾರ್, ಸಿದ್ದಲಿಂಗಸ್ವಾಮಿ ಹಾಗೂ ಚಂದ್ರಕಲಾ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!