ಮಾ.23 ರಿಂದ ಮದುಗಿರಿ ದಂಡಿನ ಮಾರಮ್ಮನ ಜಾತ್ರೆ

ಮಧುಗಿರಿ – ಇತಿಹಾಸ ಪ್ರಸಿದ್ದ ಮಧುಗಿರಿಯ ಶ್ರೀ ದಂಡಿನ ಮಾರಮ್ಮನ ಜಾತ್ರಾಮಹೋತ್ಸವ ಮಾ.23 ರಿಂದ ಏ.2 ರವರೆಗೆ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.

ಮಾ.23 ಮಂಗಳವಾರ ಜಾತ್ರೆ ಪ್ರಾರಂಭವಾಗಲಿದ್ದು, ಹಳ್ಳಿಕಾರರಿಂದ ಪಂಚ ಕಳಸ ಸ್ಥಾಪನೆ ಹಾಗೂ ಗೌಡರಿಂದ ಬಾನ ಕಾರ್ಯಕ್ರಮ, ಮಾ.24 ರಂದು ಸಾರ್ವಜನಿಕವಾಗಿ ಗ್ರಾಮಸ್ಥರಿಂದ ಆರತಿ, ಮಾ.25 ರಂದು ಸಾರ್ವಜನಿಕವಾಗಿ ಗುಗ್ಗರಿ ಗಾಡಿಗಳ ಸೇವೆ, ಮಾರ್ಚ್.26 ರಂದು ದೇವಸ್ಥಾನದ ವತಿಯಿಂದ ರಥೋತ್ಸವ, ಮಾ.27 ರಂದು ಹಳ್ಳಿಕಾರರಿಂದ ಉಯ್ಯಾಲೆ ಉತ್ಸವ, ಮಾ.28 ರಂದು ಕುಂಚಿಟಿಗ ಒಕ್ಕಲಿಗರಿಂದ ಸಿಂಹವಾಹನ ಸೇವೆ, ಮಾ.29 ರಂದು ಕುರುಬ ಸಮುದಾಯದಿಂದ ಚಂದ್ರಮಂಡಲ ವಾಹನ ಮಾ.30 ರಂದು ನವಿಲು ವಾಹನ, ಮಾ.31ರಂದು ಭಂಡಾರದ ಉತ್ಸವ ಹಾಗೂ ದೇವಸ್ಥಾನದ ವತಿಯಿಂದ ಬೆಳ್ಳಿ ಪಲ್ಲಕ್ಕಿ ಉತ್ಸವ, ಏ.1ರಂದು ದೇವಸ್ಥಾನದ ವತಿಯಿಂದ ಆಗ್ನಿಕುಂಡ ಕಾರ್ಯಕ್ರಮ ಹಾಗೂ ಏ.2ರಂದು ಚಿನಕವಜ್ರ, ಕೆರೆಗಳ ಪಾಳ್ಯ ಹಾಗೂ ಕವಾಡಿಗರಪಾಳ್ಯ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ನಂತರ ದೇವರನ್ನು ಗುಡಿ ತುಂಬಿಸುವುದರೊಂದಿಗೆ ಜಾತ್ರಾ ಮುಕ್ತಾಯಗೊಳ್ಳಲಿದೆ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸ್ಟೆಲ್ಲಾ ವರ್ಗೀಸ್, ಗ್ರೇಡ್ 2 ತಹಶೀಲ್ದಾರ್ ವರದರಾಜು, ಪ್ರಥಮ ದರ್ಜೆ ಸಹಾಯಕಿ ಬೃಂದ ಹಾಗೂ ಮುಂತಾದವರು ಇದ್ದರು,

error: Content is protected !!