ನನ್ನ ಹೆಸರಿನಲ್ಲೇ ರಾಮ ಇದಾನೆ ನನ್ನನ್ನು ರಾಮನ ವಿರೋಧಿ ಎನ್ನುವವರಿಗೆ ಮತಿ ಭ್ರಮಣೆಯಾಗಿದೆ ಎಂದು ಟಾಂಗ್ ಕೊಟ್ಟ ಮಾಜಿ ಸಿ.ಎಂ

ಮಧುಗಿರಿ : ನನ್ನ ಹೆಸರಿನಲ್ಲೇ ರಾಮ ಇರುವಾಗ ನನ್ನನ್ನು ರಾಮನ ವಿರೋಧಿ ಎಂದು ಬಿಂಬಿಸುವವರು ಮೂರ್ಖರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲೂ ರಾಮನ ದೇವಸ್ಥಾನವಿದೆ. ನನ್ನ ಹುಟ್ಟೂರಿನಲ್ಲಿ ರಾಮನ ದೇವಸ್ಥಾನ ನಿರ್ಮಾಣ ಮಾಡಲು ಹಣ ನೀಡಿದ್ದೇನೆ. ಆದರೆ ಬಿಜೆಪಿ ಪಕ್ಷದವರು ರಾಮನ ಹೆಸರನ್ನು ಇಟ್ಟುಕೊಂಡು ಹಿಂದೂ ಮತ್ತು ಮುಸ್ಲೀಂ ಸಮುದಾಯಗಳ ನಡುವೆ ಗೋಮು ಗಲಭೆ ಸೃಷ್ಠಿ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಆಡಳಿತವಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಡವರ ನೋವು ತಿಳಿಯುತ್ತಿಲ್ಲ. ಅಚ್ಚೆ ದಿನ್ ತರುತ್ತೇವೆ ಎಂದು ಬೊಬ್ಬೆಹೊಡೆದು ಅಧಿಕಾರ ಹಿಡಿದ ಇವರು ಜನರ ಸ್ಥಿತಿಯನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗನ ಮೂಲಕ ಲಂಚ ಪಡೆದು ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಇಂತಹ ಕಡು ಭ್ರಷ್ಟ ಸರಕಾರವನ್ನು ರಾಜ್ಯದ ಜನತೆ ಇದುವರೆವಿಗೂ ನೋಡಿಲ್ಲ ಎಂದ ಅವರು, ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ಈ ಕೂಡಲೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಇಲ್ಲಿನ ಶಾಸಕ ಎಲ್ಲಿ ಸಿಕ್ಕಿದರಲ್ಲಿ ಕೆರೆದು ಕೊಳ್ಳುವ ಜಾಯಮಾನದವರಾಗಿದ್ದು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜನರ ಕಷ್ಟ ಬವಣೆಗಳ ಬಗ್ಗೆ ಅಸೆಂಬ್ಲಿಯಲ್ಲಿ ಒಂದು ದಿನವು ಮಾತಾಡಿಲ್ಲ. ಅಧಿಕಾರಿಯಾಗಿ ಇದ್ದವರಿಗೆ ಅಭಿವೃದ್ದಿ ಕೆಲಸಗಳ ಬಗ್ಗೆ ಕಾಳಜಿ ಇಲ್ಲ. 5 ವರ್ಷ ಮಧುಗಿರಿಯ ಸರ್ವತೋಮುಖ ಅಭಿವೃದ್ದಿಗೆ ಅನುದಾನ ತಂದ ಕೆ.ಎನ್. ರಾಜಣ್ಣರನ್ನು ಪರಾಭವ ಗೋಳಿಸಿ ತಪ್ಪು ಮಾಡಿದ್ದೀರಿ. ಮುಂದಿನ ಚುನಾವಣೆಯಲ್ಲಿ ಭಾರಿ ಬಹು ಮತಗಳ ಅಂತರದಿಂದ ಕೆ.ಎನ್.ಆರ್ ರವರನ್ನು ಗೆಲ್ಲಿಸಿ ತಪ್ಪು ತಿದ್ದಿಕೊಳ್ಳಿ ಎಂದರು.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇಡೀ ದೇಶದಲ್ಲಿ ರೈತರು ಚಳುವಳಿಗಳನ್ನು ನಡೆಸುತ್ತಿದ್ದು ದೇಶದ ಪ್ರಧಾನಿಗೆ ರೈತರ ಸಮಸ್ಯೆಗಳನ್ನು ಕೇಳುವ ಸೌಜನ್ಯ ಕೂಡ ಇಲ್ಲ. ಡಿಸೇಲ್, ಪೆಟ್ರೋಲ್ ಹಾಗೂ ದಿನ ನಿತ್ಯ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದ್ದು ಜನರು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಕಿತ್ತೊಗೆಯಬೇಕು ಎಂದ ಅವರು ಮುಂಬರುವ ವಿಧಾನಸಭಾ ಚುನಾವೆಯಲ್ಲಿ ಕಾಂಗ್ರೇಸ್ ಪಕ್ಷ 150 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದರು.
ಮಧುಗಿರಿ ತಾಲೂಕು ಭರಡು ಭೂಮಿಯಾಗಿದ್ದು ಚುನಾಯಿತ ಜನ ಪ್ರತಿ ನಿಧಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಜನರನ್ನು ವಿಶ್ವಾಸಕ್ಕೆ ತೆಗಿದು ಕೊಂಡು ಕೃಷಿ ಹೊಂಡ ಮುಂತಾದ ಕಾಮಗಾರಿಗಳನ್ನು ಕೈಗೊಂಡು ಕೃಷಿ ಭೂಮಿಯನ್ನು ಫಲವತ್ತಾಗಿಸಿ ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸಬೇಕು ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಪ್ರಪಂಚದಲ್ಲಿ ಭಾರತ ದೇಶದ ಗೌರವ ಹೆಚ್ಚಿಸುವ ಕಾರ್ಯದಲ್ಲಿ ಕಾಂಗ್ರೇಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಈ ಬಿ.ಜೆ.ಪಿ ಸರಕಾರದ 7 ವರ್ಷಗಳ ಆಡಳಿತದಲ್ಲಿ ಜನರ ನಿರೀಕ್ಷೆ ಹುಸಿಯಾಗಿದೆ ದೇಶದ ಆರ್ಥಿಕ ವ್ಯವಸ್ಥೆ ಹದ ಗೆಟ್ಟಿದೆ ಎಂದ ಅವರು ಯಾವ ಪುರುಷಾರ್ಥಕ್ಕಾಗಿ ರೈತ ವಿರೋಧಿ ಕಾಯ್ಧೆಯನ್ನು ಕೇಂದ್ರ ಸರಕಾರ ಜಾರಿಗೆ ತರುತ್ತಿದೆ ದೇಶಕ್ಕೆ ಆಹಾರ ನೀಡುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ ಎಂದ ಅವರು, ನನ್ನ ಮತ್ತು ರಾಜಣ್ಣ ನವರ ಮಧ್ಯೆ ಯಾವುದೇ ಬಿನ್ನಾಭಿಪ್ರಾಯಗಳು ಇದ್ದರೂ ಅದನ್ನು ಮರೆತು ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಕ್ಷೇತ್ರದಲ್ಲಿ ನೆನÉಗುದಿಗೆ ಬಿದ್ದಿರುವ ರೋಪ್ ವೇ, ರೈಲ್ವೆ ಹಾಗೂ ಎತ್ತಿನ ಹೊಳೆ ಯೋಜನೆಗಳನ್ನು ಜಾರಿ ಗೊಳಿಸಲು ಕಾಂಗ್ರೇಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು. ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಜನಧ್ವನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಫಲಾನುಭವಿಗಳಿಗೆ ಪಿಂಚಣಿ ಕೊಡಲು ಹಣವಿಲ್ಲ ಎಂದು ವ್ಯಂಗ್ಯವಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ,
ಮಾಜಿ ಸಚಿವರಾದ ಚಲುವರಾಯಸ್ವಾಮಿ, ಎಂ.ಆರ್.ಸೀತಾರಾಂ, ಟಿ. ಬಿ ಜಯಚಂದ್ರ, ಮಾಜಿ ಶಾಸಕರಾದ ಎಂ.ಸಿ. ವೇಣುಗೋಪಾಲ್, ಶಫೀಅಹಮದ್ ಮಾತನಾಡಿದರು.
ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಷಡಕ್ಷರಿ, ,ರಾಜ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ಆರ್. ರಾಜೇಂದ್ರ, ಜಿ.ಪಂ.ಸದಸ್ಯರಾದ ಶಾಂತಲಾ ರಾಜಣ್ಣ, ಜಿ.ಜೆ.ರಾಜಣ್ಣ, ಮಂಜುಳಾ, ಚೌಡಪ್ಪ, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ತಾ.ಪಂ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ಸದಸ್ಯರಾದ ಸೊಸೈಟಿ ರಾಮಣ್ಣ, ಜೆ.ಡಿ.ವೆಂಕಟೇಶ್, ಪ್ರಸನ್ನ ಕುಮಾರ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಆರ್ ರಾಜಗೋಪಾಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್ ಮಲ್ಲಿಕಾರ್ಜುನಯ್ಯ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಮುಖಂಡ ಎಚ್.ಸಿ. ಬೈರಪ್ಪ ವಿ.ಆರ್.ಭಾಸ್ಕರ್,ಈರಣ್ಣ, ದೀಪಕ್ ಹಾಗೂ ಮುಂತಾದವರು ಇದ್ದರು ——————————————————– ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೇಸ್ ಸಮಿತಿ ವತಿಯಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಶಾಸಕ ಕೆ.ಎನ್. ರಾಜಣ್ಣ ನವರು ಬಾಬಾ ಸಾಹೇಬರಿಗೆ  ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು

error: Content is protected !!