ಮದುಗಿರಿ:ಅಂಬೇಡ್ಕರ್ ಪ್ರತಿಮೆ ಮುಂದೆ ಕ್ಯಾಂಡಲ್ ಬೆಳಗಿಸಿ ಮಹಾಪರಿನಿಬ್ಬಾಣ ಆಚರಣೆ.

ಮಧುಗಿರಿ: ಭಾರತ ದೇಶದ ಎಲ್ಲಾ ವರ್ಗದ ಮಹಿಳೆಯರಿಗೂ ಸ್ವತಂತ್ರವಾಗಿ ಬದುಕಲು ಸಂವಿಧಾನದಲ್ಲಿ ಸಮಾನತೆಯನ್ನು ಕೊಟ್ಟ ದೇಶದ ಏಕೈಕ ವ್ಯಕ್ತಿ ಎಂದರೆ ನಮ್ಮ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಎಂದು ತಾಲೂಕು ದಂಡಾಧಿಕಾರಿಗಳಾದ ವೈ.ರವಿ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಾಹಿತ್ಯ ಪರಿಷತ್ತು ಹಾಗೂ ಮುಕ್ತ ಜೀವನ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿಬ್ಬಾಣದ ಅಂಗವಾಗಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶದ ಪ್ರತಿಯೊಬ್ಬ ಮಹಿಳೆಯರು ಬಾಬಾ ಸಾಹೇಬರನ್ನು ನೆನಪು ಮಾಡುತ್ತಾ ತಮ್ಮ ಮನೆಗಳಲ್ಲಿ ಅವರ ಪೋಟೋ ಇಟ್ಟು ಪೂಜಿಸಬೇಕು ಯಾಕೆಂದರೆ ಮಹಿಳೆಯರ ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡುಪಿಟ್ಟು ಹೋರಾಡಿ ಸರ್ವ ಹಕ್ಕುಗಳನ್ನು ನೀಡಿದ ಮಹಾತ್ಮ ಬಾಬಾ ಸಾಹೇಬರು, ಹಾಗೂ ಭಾರತದ ಜಾತಿ ಸಂಕೋಲೆಗಳನ್ನು ಬಿಡಿಸಿ ಎಲ್ಲರೂ ಸಮಾನತೆ ಹಾಗೂ ಏಕತೆಯಿಂದ ಬಾಳುವಂತೆ ತಮ್ಮ ಸಂವಿಧಾನದ ಬರಹಗಳಲ್ಲಿ ಹಕ್ಕುಗಳ ನೀಡಿದ ಪುಣ್ಯಾತ್ಮ ಇಂದು ಅವರು ನಮ್ಮನ್ನಗಲಿ ಹೋದ ದಿನ ಅವರ ನೆನಪಿಗಾಗಿ ಇಷ್ಟೊಂದು ಸಂಖ್ಯೆಯಲ್ಲಿ ಮೇಣದ ಬತ್ತಿ ಬೆಳಗಿಸಿ ಮಹಾತ್ಮರನ್ನು ಜ್ಞಾಪಿಸುತ್ತಿರುವ ಕೆಲಸ ಮಾಡುತ್ತಿರುವ‌ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ಸರ್ದಾರ್ ಮಾತನಾಡಿ ಅಂಬೇಡ್ಕರ್ ಸಾಹೇಬರ ಹಾದಿಯಲ್ಲಿ ಸುಂದರವಾದ ದೇಶದ ಭವಿಷ್ಯವಿದೆ ನಾವೆಲ್ಲರೂ ಅವರು ತೋರಿದ ಹಾದಿಯಲ್ಲಿ ನಡೆದರೆ ಅವರು ಕಂಡ ಕನಸು ನನಸಾಗಿ ಜಗ್ಗತ್ತಿಗೆ ನಾವು ಮಾದರಿಯಾಗುತ್ತೆವೆ ಅಂಬೇಡ್ಕರ್ ಸಾಹೇಬರ ಬಳಿ ಅದ್ಬುತವಾದ ಜ್ಞಾನ ಭಂಡಾರವೇ ಇತ್ತು ಅದುವೇ ಪುಸ್ತಕಗಳು ಇಂದು ವಿಧ್ಯಾರ್ಥಿಗಳು ಶಿಕ್ಷಣದ ಜ್ಞಾನ ಹೆಚ್ಚಿಸಿಕೊಳ್ಳಬೇಕಾದರೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ನಮ್ಮ ಸಂವಿಧಾನವನ್ನು ರಚಿಸಬೇಕಾದರೆ ಜಗತ್ತಿನ ಎಲ್ಲಾ ಪುಸ್ತಕಗಳನ್ನು ಅಂಬೇಡ್ಕರ್ ರವರು ಹಗಲು ರಾತ್ರಿ ಎನ್ನದೇ ನಿರಂತರವಾಗಿ ಓದಿ ವಿಶ್ವವೇ ಒಪ್ಪುವಂತಹ ಸಂವಿಧಾನವನ್ನು ರಚಿಸಿದರು ಅವರಂತೆ ವಿಧ್ಯಾರ್ಥಿಗಳು ನಿರಂತರ ಶಿಕ್ಷಣಾಭ್ಯಾಸದ ಕಡೆ ಗಮನ ಕೊಡುತ್ತ ದೇಶದ ಉತ್ತಮ ಪ್ರಜೆಗಳಾಗಿ ಎಂದರು.

ಪುರಸಭಾ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ ಇತಿಹಾಸವನ್ನು ಅರಿತವರು ಇತಿಹಾಸವನ್ನು ನಿರ್ಮಿಸಬಲ್ಲರು ಎಂದು ಅಂಬೇಡ್ಕರ್ ಸಾಹೇಬರು ಸಾರಿ ಹೋಗಿದ್ದಾರೆ ಆದರೆ ಇಂದು ಶಿಕ್ಷಣವಂತರು ಇವರ ಮಾತನ್ನು ಮರೆತು ದೇಶದ ಬಗ್ಗೆ ಚಿಂತಿಸದೆ ಸ್ವಂತಕ್ಕಾಗಿ ಸ್ವಾರ್ಥಿಗಳಾಗುತ್ತ ನಮ್ಮ ಸಮ ಸಮಾಜದ ದಾರಿ ಕೆಡಿಸುತ್ತಿರುವುದು ಆತಂಕದ ವಿಷಯವಾಗಿದೆ ಎಂದರು.

ರಾಜ್ಯ ಸಹಕಾರಿ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್ ಗಂಗಣ್ಣ ಮಾತನಾಡಿ ಭಾರತೀಯರಾದ ನಾವು
ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆ,ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋದಾಗ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಅವರ ಪ್ರತಿಮೆಗೆ ಬರೀ ಹಾರಗಳು ಹಾಕುವುದರಿಂದ ಅವರಿಗೆ ಗೌರವ ಕೊಟ್ಟಾಗೆ ಅಲ್ಲ ಅವರು ತೋರಿದ ಹಾದಿ ಸರ್ವರಿಗೂ‌ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ನ್ಯಾಯವನ್ನು
ಮಾಡುವ ಮೂಲಕ
ಸಂವಿಧಾನ ರಚನೆಯಲ್ಲಿ
ಅವರ ಕೊಡುಗೆಗಳ ಬಗ್ಗೆ ಜನ ಸಾಮನ್ಯರಿಗೆ ತಿಳಿಸುತ್ತ ಸಾಗಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಸಮಾಜದ‌ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು ಇಂದು ಪ್ರಪಂಚದಾದ್ಯಂತ ಬಾಬಾ ಸಾಹೇಬರ ಸಂವಿಧಾನವನ್ನು ಗೌರವಿಸುವ ಜೊತೆಗೆ ಅವರನ್ನು ವಿಶ್ವಜ್ಞಾನಿ ಎಂದು ಕೊಂಡಾಡುತ್ತಾರೆ ಇಂತಹ ಮಹಾನ್ ವ್ಯಕ್ತಿಯ ಪರಿನಿಬ್ಬಾಣದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಿ ನಮ್ಮನ್ನು ಕರೆಯಿಸಿರುವುದು ನಿಜಕ್ಕೂ ಒಂದು ಪುಣ್ಯದ ಕೆಲಸ‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾಕ್ಸ್: ಪ್ರತಿ ವರ್ಷದಂತೆ ಈ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವು‌ ಆಚರಿಸುತ್ತಿದ್ದು ಬಾಬಾ ಸಾಹೇಬರ ಪರಿನಿಬ್ಬಾಣದ ದಿನ ಐನೂರು ಕ್ಯಾಂಡಲ್ ಹಚ್ಚಿ‌ ಸ್ಮರಿಸಿದ ಎಲ್ಲರಿಗೂ ಅಬಾರಿ
ಆಯೋಜಕರಾದ ದ.ಸಾ.ಪ ತಾಲೂಕು ಅಧ್ಯಕ್ಷ ಡಾ.ಮಹರಾಜು ಹಾಗೂ ಮುಕ್ತ ಜೀವನ ಸಂಸ್ಥೆಯ ಡಾ.ಸಂಜೀವ್ ಮೂರ್ತಿ.

ಈವೇಳೆ ಅಂಬೇಡ್ಕರ್ ವೃತ್ತದ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮ ಮಾಡಲಾಯಿತು ಸಾರ್ವಜನಿಕರು ಸಹ ಬಂದು ಮೆಣದ ಬತ್ತಿ ಹಿಡಿದು ಭಾಗವಹಿಸಿದ್ದು ವಿಶೇಷವಾಗಿತ್ತು

ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಬಿ.ಟಿ ರಾಮು, ಸಿದ್ದಾಪುರ ಗ್ರಾ.ಪಂ.ಅದ್ಯಕ್ಷ ವೀರಣ್ಣ ಮಾತನಾಡಿದರು

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಜು,ಖಜಾಂಚಿ ವಿನಯ್ ಕುಮಾರ್, ಚಲನಚಿತ್ರ ಸಾಹಿತಿ ಹನುರಾಜ್, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ರಾಂ ಪ್ರಸಾದ್, ಸ.ನೌ.ಸಂಘದ ಖಜಾಂಚಿ ಚಿಕ್ಕರಂಗಪ್ಪ,ಉಪನ್ಯಾಸಕ ಶಿವಕುಮಾರ್,ಶಿಕ್ಷಕರಾದ ರಂಗನಾಥ್,ರಂಗಶ್ಯಾಮಿ, ಸಿಆರ್ ಪಿ ಜಗದೀಶ್,ಕೃಷ್ಣಮೂರ್ತಿ,ಐಟಿಐ ಹನ್ಮಂತರಾಯಪ್ಪ,ನಾಗಭೂಷಣ್, ಜೀವಿಕ ತಾಲೂಕು ಸಂಚಾಲಕ ಹನುಮಂತರಾಯ,
ದಲಿತ ಮುಖಂಡರಾದ ಮುದ್ದೆನೇರಳೆಕೇರೆ ರಾಜು,ಮಲೇರಂಗಪ್ಪ , ಬಿಜವರ ರವಿ ,ನಿಲಯ ಪಾಲಕರಾದ ರಾಮಾಂಜಿನಪ್ಪ, ಜಯಮ್ಮ,ವಿಜಯಲಕ್ಷ್ಮೀ,ಈರಮುದ್ದಣ್ಣ ಹಾಗೂ ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಿದ್ದರು

error: Content is protected !!