ಸಾಹಿತ್ಯಕ್ಕೆ ರಾಷ್ಟ್ರಕವಿ ಕುವೆಂಪುರವರ ಕೊಡುಗೆ ಅಪಾರ:ಸಾಹಿತಿ ಶಂಕರಾನಂದ

ತುಮಕೂರು: ಅಮರೇಶ್ವರ ವಿಜಯ ನಾಟಕ ಮಂಡಳಿಯವರು ಆಯೋಜಿಸಿದ್ದ ಅಮರರಂಗೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶಂಕರಾನಂದ ಅಭಿಮತ

ತುಮಕೂರಿನ ಅಮರೇಶ್ವರ ವಿಜಯ ನಾಟಕ ಮಂಡಳಿಯವರು ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಆಯೋಜಿಸಿದ್ದ ಅಮರರಂಗೋತ್ಸವದಲ್ಲಿ, ಗೌರಿಬಿದನೂರಿನ ಸಾಹಿತಿಗಳಾದ ಶಂಕರಾನಂದರವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಉತ್ಕೃಷ್ಟವಾಗಿದ್ದು, ಅವರ ನಾಟಕಗಳು ಕನ್ನಡ ರಂಗಭೂಮಿಯ ಮೈಲಿಗಲ್ಲು. ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪುರವರ ಕೊಡುಗೆ ಅಪಾರ ಎಂದು ಅಭಿಪ್ರಾಯ ಪಟ್ಟರು.

  ಮತ್ತೊಬ್ಬ ಅತಿಥಿಗಳಾಗಿ ಕನ್ನಡ ಶಿಕ್ಷಕರಾದ ನಂದೀಶರವರು ಭಾಗವಹಿಸಿ ಮಾತನಾಡುತ್ತಾ ಶ್ರೀ ಕುವೆಂಪುರವರ ನಾಟಕಗಳು ವೇದಿಕೆ ಮೇಲೆ ಪ್ರದರ್ಶನಕ್ಕೆ ಅಲ್ಲ, ಹೃದಯಾಂತಾರಳದಲ್ಲಿ ಗ್ರಹಿಸುವದಕ್ಕೆ ಅಷ್ಟೆ ಎಂದು ಸ್ವತ: ರಾಷ್ಟ್ರಕವಿ ಕುವೆಂಪುರವರು ತಿಳಿಸಿದ್ದಾರೆ, ಆದರೂ ಅಮರೇಶ್ವರ ವಿಜಯ ನಾಟಕ ಮಂಡಳಿಯವರು ಕುವೆಂಪುರವರ ಯಮನ ಸೋಲು ನಾಟಕಗಳನ್ನು ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಅಮರಂಗೋತ್ಸವದಲ್ಲಿ ಗಣ್ಯರಾಗಿ ಕೋರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪಾಲಾಕ್ಷ ಕರೀಕೆರೆ, ಕಲಾವಿದರುಗಳಾದ ಸದಾಶಿವ ಮಂಗಳೂರು, ಸಂತೋಷ ವಿಜಯಪುರ, ಡಮರುಗ ರಂಗ ಸಂಪನ್ಮೂಲ ಕೇಂದ್ರದ ರಂಗ ನಿರ್ದೇಶಕರಾದ ಎಂ.ಡಿ.ದೇವರಾಜು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಾಟಕ ಮಂಡಳಿಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಬಿ.ಜಿರವರು ನಿರ್ವಹಿಸಿದರು.

ಅಂದಿನ ಅಮರರಂಗೋತ್ಸವದಲ್ಲಿ ಅಮರೇಶ್ವರ ವಿಜಯ ನಾಟಕ ಮಂಡಳಿ ವತಿಯಿಂದ ವೆಂಕಟರಮಣಯ್ಯನವರ ನಿರ್ದೇಶನದಲ್ಲಿ ಯಮನ ಸೋಲು ಹಾಗೂ ರಂಗ ಪರಂಪರೆ ಟ್ರಸ್ಟ್ ವತಿಯಿಂದ  ನರಿಗಳಿಗೇಕೆ ಕೋಡಿಲ್ಲ ನಾಟಕಗಳು ಪ್ರದರ್ಶನಗೊಂಡೆವು.  

error: Content is protected !!